

ಬೇಕಾಗುವ ಪದಾರ್ಥಗಳು :-
೧/೪ ಕಿಲೋ ಸಣ್ಣ ಅಕ್ಕಿ
೧ ತೆಂಗಿನ ಕಾಯಿ ದೊಡ್ಡದು
ದೊಡ್ಡ ಗಾತ್ರದ ೪ ಟೊಮೇಟೊಗಳು
೩-4 ಲವಂಗಗಳು
ದಾಲ್ಚಿನ್ನಿ ೧ ಚೂರು
ಶುಂಠಿ ೧ ಚೂರು
ಮೆಣಸುಕಾಳು ೧೫
ಈರುಳ್ಳಿ ೧ ದೊಡ್ಡದು
ಅರಿಸಿನ ೧/2 ಚಮಚ
ಹುರಿದ ಗೋಡಂಬಿ ೧೦
ತುಪ್ಪ ೧ ಚಮಚ
ರುಚಿಗೆ ಸಾಕಾಗುವಷ್ಟು ಉಪ್ಪು
ತೆಂಗಿನಕಾಯಿ ತುರಿದು ಅದರ ಹಾಲು ಮಾಡಿಕೊಳ್ಳುವುದು. ಟೊಮೇಟೊಗಳನ್ನೂ ಚೂರು ಮಾಡಿಟ್ಟುಕೊಳ್ಳುವುದು. ಈರುಳ್ಳಿಯನ್ನು ಭ
ಗರಿ-ಗರಿ ಹುರಿದಿಟ್ಟುಕೊಳ್ಳುವುದು. ಇನ್ನೊಂದು ಈರುಳ್ಳಿಯನ್ನು ಹಾಗೆಯೇ ಕತ್ತರಿಸಿ, ಬಾಣಲೆಯಲ್ಲಿರುವ ತುಪ್ಪದಲ್ಲಿ ಹಾಕಿ, ಕಾಯಿಸುತ್ತಾ ಅದರೊಂದಿಗೆ ಶುಂಠಿ ಚೂರುಗಳು, ಕರಿಬೇವಿನ ಎಲೆ, ದಾಲ್ಚಿನ್ನಿಯನ್ನು ಹಾಕಿ, ಮೃದುವಾಗುವವರೆಗೂ ಹುರಿಯುತ್ತಾ ಹೋಗುವುದು.
ಎಲ್ಲಾ ಸಾಂಬಾರ ವಸ್ತುಗಳನ್ನು ಬೆರೆಸಿ, ಚೂರು ಮಾಡಿಟ್ಟುಕೊಂಡಿರುವ ಟೊಮೊಟೊ ಹೋಳುಗಳನ್ನು ಅದರಲ್ಲಿ ಹಾಕಿ, ಬೇಯಿಸುವುದು. ಅದೇ ಬಾಣಲಿಯಲ್ಲಿಯೇ ಹದವರಿತು ನೀರು ಸುರಿದು, ಕುದಿಯುತ್ತಿದ್ದಂತೆ ಅಕ್ಕಿ ಮತ್ತು ಉಪ್ಪನ್ನು ಹಾಕುವುದು. ಈಗ ಅನ್ನ ಆಗುವ ವೇಳೆಗೆ ಪಲಾವ್ ರೆಡಿ, ಕೆಳಗಿಳಿಸಿ, ಕಟ್ ಮಾಡಿದ ಗೋಡಂಬಿ ಹಾಗೂ ಹುರಿದ ಈರುಳ್ಳಿ ಚೂರುಗಳನ್ನು ಅದರ ಮೇಲೆ ಹಾಕಿದರೆಗೋವಾ ಟೊಮೇಟೊ ಪಲಾವ್ ರೆಡಿ…