ಕೂಡ್ಲಿಗಿ ತಾಲೂಕಾಡಳಿತದಿಂದ ಶ್ರೀಮಾಚಿದೇವರ ಜಯಂತಿ…

ವಿಜಯನಗರ ಜಿಲ್ಲೆ ಕೂಡ್ಲಿಗಿ: ಅರಸ ಮೇಲಲ್ಲ ಅಗಸ ಕೀಳಲ್ಲ, ಅವರವರ ಕಾಯಕ ಅವರವರಿಗೆ ಶ್ರೇಷ್ಠವಾದದ್ದು ಎಂದು. ಕಾಯಕತನದ ಮಹತ್ವ ಹಾಗೂ ಸಮಾನತೆಯನ್ನು ಸಾರಿದ, ಮಡಿವಾಳ ಶ್ರೀಮಾಚಿದೇವರು ಶರಣರ ಶರಣರಾಗಿದ್ದಾರೆ. ಅವರ ವಚನಗಳು ಸರ್ವ ಕಾಲಕ್ಕೂ ಪ್ರಸ್ತುತ, ಹಾಗೂ ಸರ್ವರಿಗೂ ದಾರಿ ದೀಪವಾಗಿವೆ ಎಂದು. ಮಡಿವಾಳ ಶ್ರೀಮಾಚಿದೇವರ ಸಂಘದ ಕಾರ್ಯಕರ್ಶಿಗಳಾದ, ಮಡಿವಾಳರ ಅಂಜಿನಪ್ಪ ನುಡಿದರು.

ಅವರು ಶ್ರೀ ಮಾಚಿದೆರ ಜಯಂತಿಯಲ್ಲಿ ಪಾಲ್ಗೊಂಡು, ಶ್ರೀಮಾಚಿದೇವರ ಭಾವಚಿತ್ರವನ್ನು ಪೂಜೆಗೈದು ಮಾತನಾಡಿದರು.

ಶ್ರೀಮಾಚಿದೇವರು ಹನ್ನೊಂದನೇ ಶತಮಾನದಲ್ಲಿ ಅರಸ ಮೇಲಲ್ಲ ಅಗಸ ಕೀಳಲ್ಲ ಎಂದು, ಜಗತ್ತಿಗೆ ಕಾಯಕದ ಮಹತ್ವ ಹಾಗೂ ಸಮಾನತೆ ತತ್ವವನ್ನು ಪ್ರತಿಪಾಧಿಸಿ ಸಾರಿದ್ದಾರೆ. ಅವರು ಶಿವಶರಣರು ತೊಡುವ ಖಾವಿ ವಸ್ತ್ರಗಳನ್ನು ಸ್ವಚ್ಚಗೊಳಿಸುವ ಕಾಯಕದಲ್ಲಿ, ತಮ್ಮನ್ನ ತೊಡಗಿಸಿಕೊಂಡ ಕಾಯಕಯೋಗಿಗಳಾಗಿದ್ದರು. ಅವರು ಸದಾ ಶಿವಶರಣರ ಒಡನಾಡಿಯಾಗಿದ್ದು ಕೊಂಡು, ತಮ್ಮದೇ ಆದ ವಿಶಿಷ್ಠ ಶೈಲಿಯ ವಚನಗಳ ಮೂಲಕ. ಜನರಲ್ಲಿ ಸಮಾನತೆ ಆಧ್ಯಾತ್ಮ ವೈಚಾರಿಕತೆ, ಹಾಗೂ ಜಾಗ್ರತೆ ಮೂಡಿಸುವ ನಿಟ್ಟಿನಲ್ಲಿ. ವರ್ಗ ವರ್ಗಗಳ ನಡುವಿನ ಭೇದ ನೀತಿ ತಾರತಮ್ಯ ನಿವಾರಣೆಗಾಗಿ, ಹಾಗೂ ಆಧ್ಯಾತ್ಮ ಜಾಗ್ರತೆಗಾಗಿ ತಮ್ಮನ್ನೇ ಅರ್ಪುಸಿಕೊಂಡಿದ್ದ ಮಹಾಶರಣರಾಗಿದ್ದಾರೆ. ಮಡಿವಾಳರೆಂಬ ಕೀಳಿರಿಮೆ ನಮ್ಮಲ್ಲಿ ಬೇಡ, ಕಾಯಕವನ್ನು ನಿಷ್ಠೆ ಶ್ರದ್ಧೆಯಿಂದ ನಿರ್ವಹಸಬೇಕಿದೆ. ಮೊದಲು ಮಕ್ಕಳನ್ನು ಶೈಕ್ಷಣಿವಾಗಿ ಸಭಲರನ್ನಾಗಿಸಬೇಕಿದೆ, ಯಾವುದೇ ಕಾರಣಕ್ಕೆ ನಮ್ಮ ನಮ್ಮಲ್ಲಿ ಒಡಕು ಮೂಡದಿರಲಿ. ಸಂಘಟನೆಯಲ್ಲಿ ಅನಗತ್ಯ ಭಿನ್ನಾಭಿಪ್ರಾಯಗಳು, ಸ್ವ ಪ್ರತಿಷ್ಠೆಗಾಗಿ ಅಂತಹಃ ಕಲಹಗಳು ಧ್ವೇಶಗಳಿಗೆ ಅವಕಾಶ ಕೊಡಬಾರದು. ಎಲ್ಲರೂ ಒಗ್ಗೂಡಬೇಕು ಸಂಘಟಿತರಾದಾಗ ಮಾತ್ರ, ಸರ್ಕಾರದಿಂದ ಸಕಲ ಸೌಲಭ್ಯಗಳನ್ನು ಹೊಂದಲು ಸಾಧ್ಯ ಎಂದರು.

ತಾಲೂಕಾಡಳಿತದಿಂದ ಜಯಂತಿ ಆಚರಣೆ*- ವಿಕಾಸ ಸೌಧದಲ್ಲಿಯೂ ಕೂಡ, ಕಂದಾಯ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಮಡಿವಾಳ ಶ್ರೀಮಾಚಿದೇವರ ಜಯಂತಿ ಅಚರಿಸಲಾಯಿತು. ವಿವಿದ ಇಲಾಖೆಗಳ ಅಧಿಕಾರಿಗಳು , ಹಾಗೂ ಸಿಬ್ಬಂದಿಯವರು. ಮಡಿವಾಳ ಸಮಾಜದ ಪ್ರಮುಖರು, ನಾಗರೀಕರು, ವಿವಿದ ಸಮುದಾಯಗಳ ಮುಖಂಡರು. ಸಂಘದ ತಾಲೂಕು ಅಧ್ಯಕ್ಷರಾದ ಎಂ ನಿಂಗಪ್ಪ, ಉಪಾಧ್ಯಕ್ಷರಾದ ಕುಪ್ಪಿನ ಕೇರಿ ಬಸವರಾಜ, ಖಜಾಂಚಿ ಎಂ. ತಿರುಕಪ್ಪ, ಸಂಘದ ಸದಸ್ಯರುಗಳಾದ ಹನುಮಂತ. ಗಿರೀಶ್, ತಿಮ್ಮಪ್ಪ,ರಾಮ, ಸುರೇಶ್ ಹಾಗೂ ಮತ್ತಿತರರು ಭಾಗವಹಿಸಿದ್ದರು

  • Related Posts

    ಚಿಕ್ಕ ವಯಸ್ಸಿಗೆ ದೊಡ್ಡ ಸಾಧನೆ : ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ ಗೆ ಸೇರಿದ ದ್ವಿತಾ ಮೋಹನ್

    ಹೊಸಪೇಟೆ ಕಂಪ್ಲಿ: ಸ್ಥಳೀಯ ನಿವಾಸಿ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪ, ಸೌಮ್ಯ ಶ್ರೀ ದಂಪತಿಯ ದ್ವೀತಿಯ ಪುತ್ರಿ ದ್ವಿತಾ ಮೋಹನ್ (6 ತಿಂಗಳು) ರು ಯಾವುದೇ ಸಹಾಯ, ಬಾಹ್ಯ ಬೆಂಬಲವಿಲ್ಲದೆ ಅತಿ ಹೆಚ್ಚು ಸಮಯ…

    ವಿಜಯನಗರ ಜಿಲ್ಲಾಧಿಕಾರಿಗಳು ವಿವಿಧ ಕಂದಾಯ ಅಧಿಕಾರಿಗಳೊಂದಿಗೆ ಜಿಲ್ಲಾಮಟ್ಟದ ಗೈರು ವಿಲೇ ಸಮಿತಿ ಸಭೆ…

    ದಿನಾಂಕ:25.03.2025 ರಂದು ಮಾನ್ಯ ಜಿಲ್ಲಾಧಿಕಾರಿಗಳು ಎಂ ಎಸ್ ದೇವಕರವರು, ಹಡಗಲಿ & ಹರಪನಹಳ್ಳಿ ತಾಲೂಕಿನ ವಿವಿಧ ಕಂದಾಯ ಅಧಿಕಾರಿಗಳೊಂದಿಗೆ ಜಿಲ್ಲಾಮಟ್ಟದ ಗೈರು ವಿಲೇ ಸಮಿತಿ ಸಭೆ ನಡೆಸಿ, ಭೂ ಮಂಜೂರಾತಿ ಪ್ರಕರಣಗಳಲ್ಲಿ ಮಿಸ್ಸಿಂಗ್‌ ಕಡತಗಳ ನಿರ್ವಹಣೆ ಹಾಗೂ ಸ್ಥಾನಿಕ ವರದಿಗಳನ್ನು ಸೇರಿದಂತೆ…

    Leave a Reply

    Your email address will not be published. Required fields are marked *

    error

    Enjoy this blog? Please spread the word :)

    error: Content is protected !!