ಮನೆ ನುಗ್ಗೆಕಾಯಿ ಸೂಪ್

ಬೇಕಾಗುವ ಪದಾರ್ಥ

2-3 ನುಗ್ಗೆಕಾಯಿ

1-ಟೊಮೆಟೋ

ಸ್ವಲ್ಪ-ಶುಂಠಿ

ಸ್ವಲ್ಪ-ಬೆಳ್ಳುಳ್ಳಿ

1-ಈರುಳ್ಳಿ

ರುಚಿಗೆ ತಕ್ಕಷ್ಟು-ಉಪ್ಪು

ಅರಿಶಿಣದ ಪುಡಿ- ಅರ್ಧ ಚಮಚ

1 ಚಮಚ-ಜೀರಿಗೆ ಪುಡಿ

1 ಚಮಚ-ಕಾಳುಮೆಣಸಿನ ಪುಡಿ.

ಸಣ್ಣಗೆ ಕತ್ತರಿಸಿದ್ದು- ಕೊತ್ತಂಬರಿ ಸೊಪ್ಪು

ನುಗ್ಗೆಕಾಯಿ ಸೂಪ್ ಮಾಡುವ ವಿಧಾna

ಚೆನ್ನಾಗಿ ತೊಳೆದು ನಾರು ತೆಗೆದು ಕತ್ತರಿಸಿದ ನುಗ್ಗೆಕಾಯಿಗಳನ್ನು ಕುಕ್ಕರ್’ಗೆ ಹಾಕಿ, ಮೇಲಿನ ಎಲ್ಲಾ ಪದಾರ್ಥಗಳನ್ನೂ ಹಾಕಿ 3 ಕೂಗು ಕುಗಿಸಿಕೊಳ್ಳಿ

ಕುಕ್ಕರ್ ತಣ್ಣಗಾದ ಆದನಂತರ ಬೇಯಿಸಿದ ತರಕಾರಿಗಳನ್ನು ನೀರಿನಿಂದ ಬೇರ್ಪಡಿಸಿ ನುಗ್ಗೆಕಾಯಿ ತಿರುಳನ್ನು ಸಿಪ್ಪೆಯಿಂದ ತೆಗೆಯಿರಿ. ಉಳಿದ ತರಕಾರಿಯ ಜೊತೆಗೆ ರುಬ್ಬಿಕೊಳ್ಳಬೇಕು. ರುಬ್ಬಿದ ಮಿಶ್ರಣವನ್ನು ಬೇಯಿಸಿದ ನೀರಿನ ಜೊತೆ ಒಂದು ಬಾಣಲಿಗೆ ಹಾಕಿ ಅದಕ್ಕೆ ಉಪ್ಪು ಮತ್ತು ಕಾಳುಮೆಣಸಿನ ಪುಡಿಯನ್ನು ಹಾಕಿ 8 ನಿಮಿಷ ಕುದಿಸಬೇಕು. ಕೊನೆಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಅಲಂಕರಿಸಿದರೆ ರುಚಿಕರವಾದ ನುಗ್ಗೆಕಾಯಿ ಸೂಪ್ ಸವಿಯಲು ಸಿದ್ಧ.

  • Related Posts

    ಮಲ್ಲಿಗೆ ಇಡ್ಲಿ ರೆಸಿಪಿ

    ಮೃದುವಾದ ಮಲ್ಲಿಗೆ ಇಡ್ಲಿ ಮಾಡಲು ಬೇಕಾಗುವ ವಿಧಾನ :- ಅಕ್ಕಿ – 2 ಲೋಟಉದ್ದಿನ ಬೇಳೆ – 1 ಲೋಟಅವಲಕ್ಕಿ – 1/2 ಲೋಟಸಬ್ಬಕ್ಕಿ – 1/2 ಲೋಟ. ಮಾಡುವ ವಿಧಾನ :-ಅವಲಕ್ಕಿ ಒಂದನ್ನು ಬಿಟ್ಟು ಮೇಲಿನ ಎಲ್ಲಾ ಸಾಮಗ್ರಿಗಳನ್ನು ಬೇರೆ…

    ದಕ್ಷಿಣ ಕನ್ನಡದ ನೀರ್ ದೋಸೆ ರೆಸಿಪಿ

    * ಸಿದ್ಧತಾ ಸಮಯ 135 ನಿಮಿಷಗಳು * ಅಡುಗೆ ಸಮಯ 20 ನಿಮಿಷಗಳು ಪದಾರ್ಥಗಳು :- * 1 ಕಪ್ ಹಸಿ ಅಕ್ಕಿ ಚಾವಲ್ * ರುಚಿಗೆ ಉಪ್ಪು* ತುಪ್ಪಕ್ಕೆ ತುಪ್ಪ ಮಾಡುವ ವಿಧಾನ :- * ಅಕ್ಕಿಯನ್ನು ಕನಿಷ್ಠ 2…

    Leave a Reply

    Your email address will not be published. Required fields are marked *

    error: Content is protected !!