

ನೀವು ಮಟನ್ ಪ್ರಿಯರಾಗಿದ್ದರೆ ನೀವು ಮಟನ್ ಅನ್ನು ಸ್ವಲ್ಪ ವಿಭಿನ್ನ ಟೇಸ್ಟ್‌ನಲ್ಲಿ ತಯಾರಿಸಲು ಬಯಸುವುದಾದರೆ ಬೆಂಗಾಳಿಶೈಲಿಯಲ್ಲಿ ಟ್ರೈ ಮಾಡಿ ನೋಡಿ. ಚಪಾತಿ, ರೊಟ್ಟಿ, ಅನ್ನಕ್ಕೆ ತುಂಬಾನೇ ರುಚಿಯಾಗಿರುತ್ತದೆ.
ಇದನ್ನು ಮಾಡುವ ವಿಧಾನ ಕೂಡ ಸುಲಭ, ಅಲ್ಲದೆ ಸಾಮಾನ್ಯವಾಗಿ ಮನೆಯಲ್ಲಿಅಡುಗೆಗೆ ಬಳಸುವ ಸಾಮಗ್ರಿ ಬಳಸಿ ತಯಾರಿಸಬಹುದು. ಇದರ ರುಚಿ ರೆಸ್ಟೋರೆಂಟ್ ಅಡುಗೆಯನ್ನು ನೆನಪಿಸುವುದು, ಬನ್ನಿ ಮಟನ್ ಸಾರು ಮಾಡುವುದು ಹೇಗೆ ಎಂದು ನೋಡೋಣ:
PREP., TIME 20 Mins
COOK TIME 50M
TOTAL TIME 1 Hours10 Mins
Recipe By : ಕಾವ್ಯ
Type: Non veg Serves: 6
(INGREDIENTS) ಬೇಕಾಗುವ ಸಾಮಗ್ರಿ :-
ಮಟನ್ 1 ಕೆಜಿ
ಈರುಳ್ಳಿ 4
ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಚಮಚ’
ಮೊಸರು 1 ಚಮಚ
ಟೊಮೆಟೊ 1
ಕೊತ್ತಂಬರಿ ಪುಡಿ 1 ಚಮಚ
ಜೀರಿಗೆ ಪುಡಿ 1 ಚಮಚ
ಕಾಧ್ಮೀರಿ ಮೆಣಸಿನ ಪುಡಿ 1 ಚಮಚ
ಅರಿಶಿಣ ಪುಡಿ 1 ಚಮಚ
ಗರಂ ಮಸಾಲ ಪುಡಿ 1 ಚಮಚ
ಪಲಾವ್ ಎಲೆ 2
ಚಕ್ಕೆ 1
ಏಲಕ್ಕಿ 2
ಲವಂಗ 5
ಸಕ್ಕರೆ 1 ಚಮಚ
ರುಚಿಗೆ ತಕ್ಕ ಉಪ್ಪು
ಸಾಸಿವೆ ಎಣ್ಣೆ 2 ಚಮಚ
ಕೊತ್ತಂಬರಿ ಸೊಪ್ಪು (ಅಲಂಕಾರಕ್ಕೆ)
HOW TO PREPARE ಮಾಡುವ ವಿಧಾನ
- ಮಟನ್ ಅನ್ನು ಚೆನ್ನಾಗಿ ತೊಳೆಯಿರಿ *
- ನಂತರ ಮಟನ್ಗೆ ಉಪ್ಪು, ಖಾರದ ಪುಡಿ, ಅರಿಶಿಣ ಪುಡಿ, ಮೊಸರು, 1 ಚಮಚ ಸಾಸಿವೆ ಎಣ್ಣೆ (ಸನ್‌ಪ್ಯೂರ್ ಎಣ್ಣೆ ಬೇಕಾದರೂ ಬಳಸಬಹುದು), ನೀವು ತೆಂಗಿನೆಣ್ಣೆ ಬಳಸುವುದಾದರೆ ಅದನ್ನೂ ಬಳಸಬಹುದು. ಈಗ ಮಿಕ್ಸ್ ಮಾಡಿ 2 ಗಂಟೆ ಫ್ರಿಡ್ಜ್‌ನಲ್ಲಿಡಿ, ರೂಂನ ಉಷ್ಣತೆಯಲ್ಲೂ ಇಡಬಹುದು.
- ಟೊಮೆಟೊ ಮತ್ತು ಈರುಳ್ಳಿಯನ್ನು ಕತ್ತರಿಸಿ ಜೊತೆಯಾಗಿ ಪೇಸ್ಟ್ ಮಾಡಿಡಿ. * ಎರಡು ಗಂಟೆ ಕಳೆದ ಮೇಲೆ ಪ್ಯಾನ್ ಬಿಸಿ ಮಾಡಿ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಚಕ್ಕೆ, ಏಲಕ್ಕಿ, ಪಲಾವ್ ಎಲೆ, ಲವಂಗ ಹಾಕಿ, ನಂತರ ಈರುಳ್ಳು-ಟೊಮೆಟೊ ಪೇಸ್ಟ್ ಸೇರಿಸಿ, 5 ನಿಮಿಷ ಕಡಿಮೆ ಉರಿಯಲ್ಲಿ ಫ್ರೈ ಮಾಡಿ.
- ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಜೀರಿಗೆ ಪುಡಿ, ಕೊತ್ತಂಬರಿ ಪುಡಿ, ಖಾರದ ಪುಡಿ ಹಾಕಿ ಮತ್ತೆ 3-4 ನಿಮಿಷ ಫ್ರೈ ಮಾಡಿ. ನಿಮ್ಮ ಖಾರಕ್ಕೆ ತಕ್ಕಂತೆ ಖಾರದ ಪುಡಿ ಸೇರಿಸಿ.
- ನಂತರ ಮಟನ್ ಹಾಕಿ, ಸ್ವಲ್ಪ ಅರಿಶಿಣ ಪುಡಿ, ರುಚಿಗೆ ತಕ್ಕ ಉಪ್ಪು ಸೇರಿಸಿ ಮಿಕ್ಸ್ ಮಾಡಿ ಸ್ವಲ್ಪ ನೀರು ಸೇರಿಸಿ ಬೇಯಿಸಿ. (ನೀರು ತುಂಬಾ ಹಾಕಬೇಡಿ)
- ಮಟನ್ 50-60 ನಿಮಿಷ ಬೇಯಿಸಿ , ಕುಕ್ಕರ್‌ನಲ್ಲಿ ಆದರೆ 5-6 ವಿಶಲ್ ಹೊಡೆಸಿ.
- ನಂತರ ಗರಂ ಮಸಾಲ ಸೇರಿಸಿ ಮತ್ತೆ 5 ನಿಮಿಷ ಬೇಯಿಸಿ, ಉಪ್ಪು ಸರಿಯಾಗಿದೆಯೇ ನೋಡಿ ಉರಿಯಿಂದ ಇಳಿಸಿದರೆ ಮಟನ್ ಕರಿ ರೆಡಿ.
INSTRUCTIONS ಕೆಂಪು ಬಣ್ಣಕ್ಕೆ ಸ್ವಲ್ಪ ಕಾಶ್ಮೀರಿ ಮೆಣಸಿನ ಪುಡಿ ಸೇರಿಸಿ