

ಮೃದುವಾದ ಮಲ್ಲಿಗೆ ಇಡ್ಲಿ ಮಾಡಲು ಬೇಕಾಗುವ ವಿಧಾನ :-
ಅಕ್ಕಿ – 2 ಲೋಟ
ಉದ್ದಿನ ಬೇಳೆ – 1 ಲೋಟ
ಅವಲಕ್ಕಿ – 1/2 ಲೋಟ
ಸಬ್ಬಕ್ಕಿ – 1/2 ಲೋಟ.
ಮಾಡುವ ವಿಧಾನ :-
ಅವಲಕ್ಕಿ ಒಂದನ್ನು ಬಿಟ್ಟು ಮೇಲಿನ ಎಲ್ಲಾ ಸಾಮಗ್ರಿಗಳನ್ನು ಬೇರೆ ಬೇರೆಯಾಗಿ ತೊಳೆದು ನೆನೆಸಿಡಿ. ಇವೆಲ್ಲವೂ ೬ ರಿಂದ ೭ ಗಂಟೆಗಳ ಕಾಲ ನೆನೆಯಬೇಕು. ಅವಲಕ್ಕಿ ಮಾತ್ರ 5 ನಿಮಿಷ ನೆನೆಸಿದರೆ ಸಾಕು.
ಎಲ್ಲಾ ಪದಾರ್ಥಗಳು ನೆಂದಮೇಲೆ ಮೊದಲು ಸಬ್ಬಕ್ಕಿಯನ್ನು ನುಣ್ಣಗೆ ರುಬ್ಬಿ, ನಂತರ ಉದ್ದಿನ ಬೇಳೆ, ಅವಲಕ್ಕಿಯನ್ನು ಸಾಧ್ಯವಾದಷ್ಟು ಕಡಿಮೆ ನೀರು ಬಳಸಿ ನುಣ್ಣಗೆ ರುಬ್ಬಿಕೊಳ್ಳಿ.ಇಡ್ಲಿ ಹಿಟ್ಟಿನ ಹದಕ್ಕೆ ರುಬ್ಬಿಕೊಳ್ಳಿ.ನಂತರ ಅಕ್ಕಿಯನ್ನು ಮಾತ್ರ ಸ್ವಲ್ಪ ತರಿ ತರಿಯಾಗಿ ರುಬ್ಬಿಕೊಳ್ಳಿ.

ಇದಕ್ಕೆ ಸ್ವಲ್ಪ ಸೋಡಾ ಹಾಕಬಹುದು, ಈ ಎಲ್ಲಾ ಹಿಟ್ಟುಗಳನ್ನು ಸರಿಯಾಗಿ ಕಲಸಿ ಮುಚ್ಚಿದ ನಂತರ ಸುಮಾರು 8 ಗಂಟೆಗಳ ಕಾಲ ಹುಳಿಯಾಗಲು ರಾತ್ರಿಯಿಡಿ ಹಾಗೆಯೇ ಬೆಚ್ಚಗಿನ ಜಾಗದಲ್ಲಿ ಇಡಿ.
ನಂತರ ಬೆಳಗ್ಗೆ ಇದಕ್ಕೆ ಉಪ್ಪು ಸೇರಿಸಿ ಕಲಸಿ ಇಡ್ಲಿ ತಟ್ಟೆಗೆ ಎಣ್ಣೆ ಸವರಿ 10 ರಿಂದ 12 ನಿಮಿಷ ಬೇಯಿಸಿದರೆ ಬಿಸಿ ಬಿಸಿ ಮಲ್ಲಿಗೆ ಇಡ್ಲಿ ರೆಡಿ.
ನಿಮಗೆ ಇಷ್ಟ ಅನಸಿದರೆ ಕಾಮೆಂಟ್ ಮಾಡಿ….