ಸ್ನೇಹಿತರ ಬಳಗದಿಂದ 8ನೇ ವರ್ಷದ ಉಚಿತ ನೇತ್ರ ಶಿಬಿರ…

ವಿಜಯನಗರ ಜಿಲ್ಲೆ ಕೂಡ್ಲಿಗಿ: ಕೂಡ್ಲಿಗಿ ಸ್ನೇಹಿತರ ಬಳಗದ ವತಿಯಿಂದ, ದಿವಂಗತ ಅಬ್ದುಲ್ ರೌಫ್ ಸಾಹೇಬ್ ಸ್ನರಣಾರ್ಥವಾಗಿ. 8ನೇ ವರ್ಷದ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರವನ್ನು ಫೆ1 ರಂದು ಹಿರೇಮಠ ಕಲ್ಯಾಣ ಮಂಟಪದಲ್ಲಿ ಜರುಗಿತು.

ಸ್ನೇಹಿತರ ಬಳಗದ ಅಧ್ಯಕ್ಷ ಹಾಗೂ ಸಮಾಜ ಸೇವಕರಾದ, ಅಬ್ದುಲ್ ರಹೆಮಾನ್ ನೇತೃತ್ವದಲ್ಲಿ ಆಯೋಜಿಸಲಾಹಿದ್ದ ಶಿಬಿರದಲ್ಲಿ. ಕೂಡ್ಲಿಗಿ ಹಿರೇಮಠದ ಪ್ರಶಾಂತ ಸಾಗರ ಸ್ವಾಮೀಜಿಯವರು, ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

ಸ್ನೇಹಿತರ ಬಳಗದವರು ಸಾಮಾನ್ಯ ಜನರ ಅಶಕ್ತರ ಸೇವೆ ಮಾಡುತ್ತಿದ್ದಾರೆ, ಜನಸೇವೆಯೇ ಜನಾರ್ಧನನ ಸೇವೆ ಎಂಬ ನುಡಿಗಟ್ಟಿನಂತೆ ಸೇವೆ ನೀಡುತ್ತಿದ್ದಾರೆ. ಬಸವಣ್ಣನವರ ವಚನದಂತೆ ಸರ್ವೇ ಜನ ಸುಖಿನೋ ಭವಂತು ಅನ್ನುವ ಹಾಗೆ, ಸ್ನೇಹಿತರ ಬಳಗದ ಅಧ್ಯಕ್ಷ ಅಬ್ದುಲ್ ರೆಹಮಾನ್ ರವರು ಮಾನವೀಯ ಮೌಲ್ಯಗಳೊಂದಿಗೆ ಸಮಾಜ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

ಅಖಿಲ್ ಮೌಲಾನ ಸಾಬ್ ಮಾತನಾಡಿ, ಅಲ್ಲಾಹ ಮಾನವನನ್ನು ಅತಿ ಹೆಚ್ಚು ಪ್ರೀತಿಸುತ್ತಾನೆ. ಅಶಕ್ತ ಜನರ ಸೇವೆ ಮಾಡುವುದರಿಂದ, ಸೇವೆಯಲ್ಲಿ ಪಾಲಂಗೊಂಡಿರುವ ಎಲ್ಲರಿಗೂ ಕೋಟಿ ಪುಣ್ಯ ದೊರಕಲಿದೆ ಎಂದರು. ಚೋರನೂರಿನ ವಾಲ್ಮೀಕಿ ಸಮುದಾಯದ ಹಿರಿಯರಾದ ಅಡಿವಪ್ಪ ಮಾತನಾಡಿ, ಎಲ್ಲಾ ಮುದಾಯವನ್ನು ಒಗ್ಗೂಡಿಸಿ ಅತ್ಯಮೂಲ್ಯ ಸೇವೆ ಮಾಡುವ ಸ್ನೇಹಿತರ ಬಳದ ಕಾರ್ಯ ಶ್ಲಾಘನೀಯವಾದದ್ದು ಎಂದರು.

ಹಿರಿಯ ಕಾಂಟ್ರಾಕ್ಟರ್ ಇಸ್ಮಾಯಿಲ್ ಸಾಬ್, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಸ್ನೇಹಿತರ ಬಳಗದ ಅಧ್ಯಕ್ಷ ಅಬ್ದುಲ್ ರಹೆಮಾನ್. ಹೊಸಪೇಟೆಯ ನೇತ್ರ ಲಕ್ಷ್ಮಿ ವೈದ್ಯಾಲಯದ ವೈದ್ಯರಾದ ಅಶ್ವಿನಿ, ಆರ್. ಶ್ರೀನಿವಾಸ್ ದೇಶಪಾಂಡೆ. ವಿವಿದ ಕ್ಷೇತ್ರಗಳಲ್ಲಿ ಗಣನೀಯ ಸೇವೆಸಲ್ಲಿರುವ ಗಣ್ಯರಿಗೆ, ಸಾಧಕರಿಗೆ ಗೌರವ ಸನ್ಮಾನ ಹಮ್ಮಿಕೊಳ್ಳಲಾಗಿತ್ತು.

ಹೃದಯ ರೋಗ ತಜ್ಞರಾದ ಡಾಕ್ಟರ್ ತಿಪ್ಪೇಸ್ವಾಮಿ, ಮಹಿಳಾ ತಜ್ಞವೈದ್ಯರಾದ ನಾಗರಾಜ, ನ್ಯಾಯಾಧೀಶರಾದ ಭುವನೇಶ್ವರಿ, ಪ್ರಿಯಾಂಕ, ಐಪಿಎಸ್ ವಿಜಯ್ ಕುಮಾರ್, ಬ್ಲಾಕ್ ಕಮಾಂಡೋ ಅಮೀನ್ ಉದ್ದಿನ್ ಬಾಷ, ಅಕ್ಯೂ ಪಂಚರ್ ತಜ್ಞರಾದ ಕಣ್ಣನ್. ಕರ್ನಾಟಕ ರಾಜ್ಯ ಪೌರಕಾರ್ಮಿಕರ ಸಂಘದ ಅಧ್ಯಕ್ಷ, ಪ್ರಭಾಕರ. ಪಟ್ಟಣ ಪಂಚಾಯಿತಿ ಮಾಜಿ ಸದಸ್ಯರಾದ ಉಸ್ಮಾನ್ ಸಾಬ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗುರುಸಿದ್ದನಗೌಡ, ಕರ್ನಾಟಕ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷರಾದ, ಜಿಂಕಲ್ ನಾಗಮಣಿ. ಉದ್ಯಮಿ ಪಟ್ಟಣ ಶೆಟ್ರು ಪಂಪಣ್ಣ, ವಾಲ್ಮೀಕಿ ಸಮುದಾಯದ ಹಿರಿಯರಾದ, ಮಲ್ಲಾಪುರ ಭರಮಣ್ಣ. SDMC ಮುಖಂಡರಾದ ಅಂಗಡಿಗಣೇಶ,ಗ್ರಾಮದೇವತೆಯ ಆಯಗಾರರಾದ, ತಳವಾರ್ ಸುರೇಶ್. ಕ್ರೈಸ್ತ ಧರ್ಮಗುರು ಡೇವಿಡ್. ಮತ್ತು ಸ್ನೇಹಿತರ ಬಳಗದ ಮಹಮ್ಮದ್ ಫಯಾಜ್, ಅಬ್ದುಲ್ ಜಬ್ಬಾರ್, ಅಬ್ದುಲ್ ವಾಹಿದ್, ಅರಣ್ಯ ಇಲಾಖೆಯ ಮಹೇಶ. ಆತಿಫ್,ಆಸಿಫ್, ವಿವಿದ ಸಮುದಾಯಗಳ ಮುಖಂಡರು ವೇದಿಕೆಯಲ್ಲಿದ್ದರು. ಡಿಪ್ಲೋಮಾ ಕಾಲೇಜಿನ ವಿದ್ಯಾರ್ಥಿಗಳು. ಎನ್ಎಸ್ಎಸ್ ವಿದ್ಯಾರ್ಥಿಗಳು, ಮತ್ತು ರಾಘವೇಂದ್ರ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು. ಗೃಹ ರಕ್ಷಕ ದಳದವರು, ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜ್ ಎನ್ಎಸ್ಎಸ್ ವಿದ್ಯಾರ್ಥಿಗಳು. ಕಾಲೇಜಿನ ಎನ್.ಎಸ್. ಎಸ್ ಘಟಕ ದ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗಿಯಾಗಿ ಸ್ವಯಂ ಸೇವಕರಾಗಿ ಸೇವೆಗೈದರು. ಪೋಲೀಸ್ ಇಲಾಖೆಯ ಸಿಬ್ಬಂದಿಯವರು ಉಪಸ್ಥಿತರಿದ್ದು,

ಶಾಂತಿ ಸುವ್ಯವಸ್ಥೆಯಿಂದ ಶಿಬಿರ ಯಶಸ್ವಿಗೊಳಿಸಿ, ಶಿಬಿರದಲ್ಲಿ ಸಾವಿರಾರು ಜನ ನೇತ್ರ ಯಪಾಸಣೆ ಮಾಡಿಸಿಕೊಂಡರು, ನೂರಕ್ಕೂ ಹೆಚ್ಚು ಜನರು ಶಸ್ತ್ರಚಿಕಿತ್ಸೆಗೆ ಆಯ್ಕೆಯಾದರು.

  • Related Posts

    ಕೂಡ್ಲಿಗಿ ತಾಲೂಕಾಡಳಿತದಿಂದ ಶ್ರೀಮಾಚಿದೇವರ ಜಯಂತಿ…

    ವಿಜಯನಗರ ಜಿಲ್ಲೆ ಕೂಡ್ಲಿಗಿ: ಅರಸ ಮೇಲಲ್ಲ ಅಗಸ ಕೀಳಲ್ಲ, ಅವರವರ ಕಾಯಕ ಅವರವರಿಗೆ ಶ್ರೇಷ್ಠವಾದದ್ದು ಎಂದು. ಕಾಯಕತನದ ಮಹತ್ವ ಹಾಗೂ ಸಮಾನತೆಯನ್ನು ಸಾರಿದ, ಮಡಿವಾಳ ಶ್ರೀಮಾಚಿದೇವರು ಶರಣರ ಶರಣರಾಗಿದ್ದಾರೆ. ಅವರ ವಚನಗಳು ಸರ್ವ ಕಾಲಕ್ಕೂ ಪ್ರಸ್ತುತ, ಹಾಗೂ ಸರ್ವರಿಗೂ ದಾರಿ ದೀಪವಾಗಿವೆ…

    ನ್ಯಾಯಾಲಯದ ಆವರಣದಲ್ಲಿ ಮಹಾತ್ಮ ಗಾಂಧೀಜಿಯವರ ಪುಣ್ಯಸ್ಮರಣೆ…

    ವಿಜಯನಗರ ಜಿಲ್ಲೆ ಕೂಡ್ಲಿಗಿ : ಪಟ್ಟಣದ ನ್ಯಾಯಾಲಯದ, ಆವರಣದಲ್ಲಿ ಜ30ರಂದು ಮಹಾತ್ಮ ಗಾಂಧೀಜಿಯವರ ಪುಣ್ಯಸ್ಮರಣೆ ಜರುಗಿತು. ಹಿರಿಯ ಶ್ರೇಣಿ ನ್ಯಾಯಾಧೀಶರಾದ ಜೆ.ಯೋಗೇಶರವರು, ಮಹಾತ್ಮಾಗಾಂಧೀಜಿಯವರ ಭಾವಚಿತ್ತಕ್ಕೆ ಪುಷ್ಪ ಅರ್ಪಿಸಿ ಮಾತನಾಡಿ ನುಡಿನಮನಗಳನ್ನು ಅರ್ಪಿಸಿದರು. ತದನಂತರ ವಕೀಲರ ಸಂಘದ ಮಾಜಿ ಅಧ್ಯಕ್ಷ ಜಿ.ಹೊನ್ನೂರಪ್ಪ ಸೇರಿದಂತೆ,…

    Leave a Reply

    Your email address will not be published. Required fields are marked *

    error: Content is protected !!