ಫೆಬ್ರವರಿ 13 ರಂದು ಕಾಪನಹಳ್ಳಿ ಶ್ರೀ ಸಿದ್ದಲಿಂಗೇಶ್ವರ ಬ್ರಹ್ಮರಥೋತ್ಸವ

ಫೆಬ್ರವರಿ 13 ರಂದು ಕಾಪನಹಳ್ಳಿ ಶ್ರೀ ಸಿದ್ದಲಿಂಗೇಶ್ವರ ಬ್ರಹ್ಮರಥೋತ್ಸವ*

ಕೆ.ಆರ್.ಪೇಟೆ ತಾಲೂಕಿನ ಕಾಪನಹಳ್ಳಿ ಸಮೀಪದ ಶ್ರದ್ಧಾ ಭಕ್ತಿ ಕೇಂದ್ರವಾಗಿರುವ ಗವಿಮಠದ ಸ್ವತಂತ್ರ ಸಿದ್ದಲಿಂಗೇಶ್ವರರ ಬ್ರಹ್ಮ ರಥೋತ್ಸವ ಹಿನ್ನಲೆಯಲ್ಲಿ ಮಠದ ಪೀಠಾಧ್ಯಕ್ಷರಾದ ಚನ್ನವೀರ ಮಹಾಸ್ವಾಮಿಗಳು ಮಠದ ಆವರಣದಲ್ಲೆ ಬ್ರಹ್ಮ ರಥೋತ್ಸವದ ಕರ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.

ಇತಿಹಾಸದಿಂದಲೂ ಭಕ್ತಾದಿಗಳ ಇಷ್ಟಾರ್ಥ ಸಿದ್ದಿ ಕಲ್ಪಿಸಿ ಭಕ್ತರ ಮನಸ್ಸಿನಲ್ಲಿ ನೆಲೆಸಿರುವ ಶ್ರೀ ಕ್ಷೇತ್ರದಲ್ಲಿ ಫೆಬ್ರವರಿ 10 ರಿಂದ ಕಾಪನಹಳ್ಳಿ ಗವಿ ಮಠದ ಜಾತ್ರಾ ಮಹೋತ್ಸವ ಆರಂಭವಾಗಲಿದ್ದು.ಫೆ 12ರಂದು ವಿಶೇಷ ಉತ್ಸವ,13ರಂದು ಸ್ವತಂತ್ರ ಶ್ರೀ ಸಿದ್ದಲಿಂಗೇಶ್ವರರ ಬ್ರಹ್ಮ ರಥೋತ್ಸವ ಹಾಗೂ 17ರ ಸೋಮವಾರ ರಾತ್ರಿ ತೆಪ್ಪೋತ್ಸವ ನಡೆಯಲಿದೆ.

ಆದ್ದರಿಂದ ಭಕ್ತಾಧಿಗಳು ಶರಣ ಶ್ರದ್ಧಾ ಕೇಂದ್ರವಾಗಿರುವ ಕಾಪನಹಳ್ಳಿ ಗವಿಮಠದಲ್ಲಿ ಎಂದಿನಂತೆ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಬ್ರಹ್ಮ ರಥೋತ್ಸವ ಕಾರ್ಯಗಳು ವೈಭವಯುತವಾಗಿ ಜರುಗಲಿದೆ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಸ್ವತಂತ್ರ ಸಿದ್ದಲಿಂಗೇಶ್ವರ ಸ್ವಾಮಿಗಳ ಕೃಪೆಗೆ ಪಾತ್ರರಾಗಬೇಕು ಎಂದು ಗವಿಮಠದ ಪೀಠಾಧ್ಯಕ್ಷರಾದ ಶ್ರೀ.ಚನ್ನವೀರಯ್ಯ ಸ್ವಾಮೀಜಿ ಮನವಿ ಮಾಡಿದರು.

  • Related Posts

    ನಟ ದರ್ಶನ್ ಅವರ ಅಭಿಮಾನಿಗಳಿಂದ ಹುಟ್ಟುಹಬ್ಬ ಆಚರಣೆ

    ಕೆ.ಆರ್.ಪೇಟೆ:ಕನ್ನಡ ಚಲನಚಿತ್ರ ನಟ ದರ್ಶನ್ ಹುಟ್ಟು ಹಬ್ಬದ ಪ್ರಯುಕ್ತ ಅವರ ಕೆ.ಆರ್.ಪೇಟೆ ಅಭಿಮಾನಿ ಬಳಗದ ವತಿಯಿಂದ ಪಟ್ಟಣದಲ್ಲಿರುವ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ತಾಲೂಕು ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ಹಾಗೂ ರಕ್ತದಾನ ಶಿಬಿರ ಆಯೋಜಿಸಿ ರಕ್ತದಾನ ಮಾಡುವ ಮೂಲಕ ಅರ್ಥಪೂರ್ಣವಾಗಿ…

    ನಾಳೆ ಶ್ರೀ ಲಕ್ಷ್ಮೀದೇವಮ್ಮನವರ ನೂತನ ದೇವಾಲಯ ಲೋಕಾರ್ಪಣೆ

    ಕೆ ಆರ್ ಪೇಟೆ: ತಾಲ್ಲೂಕು ಕಿಕ್ಕೇರಿ ಹೋಬಳಿ ಬೋಳಮಾರನಹಳ್ಳಿ ಗ್ರಾಮದಲ್ಲಿ ಅದ್ದೂರಿಯಾಗಿ ನಿರ್ಮಿಸಿರುವ ದಿನಾಂಕ 06:02:2025 ಗುರುವಾರ ರಿಂದ 08:02:2025‌ ಶನಿವಾರ ವರೆಗೆ ಶ್ರೀ ಲಕ್ಷ್ಮೀದೇವಮ್ಮನವರ ನೂತನ ದೇವಾಲಯ ಲೋಕಾರ್ಪಣೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ,ಕೇಂದ್ರ ಸಚಿವರಾದ…

    Leave a Reply

    Your email address will not be published. Required fields are marked *

    error: Content is protected !!