

ಅಬಕಾರಿ ಸುಂಕ ಹೆಚ್ಚಳದ ಪರಿಣಾಮ ಮದ್ಯ ಪ್ರಿಯರ ಖರೀದಿಯ ಸಾಮರ್ಥ್ಯ ಕುಸಿದಿದ್ದೆ. ಕಡಿಮೆ ದರದ ಬ್ರ್ಯಾಂಡ್ಗಳತ್ತ ಜನ ಮುಖ ಮಾಡುತ್ತಿದ್ದರೆ. ಮದ್ಯ ಹಾಗೂ ಬಿಯರ್ ಮಾರಾಟ ಪ್ರಮಾಣ ಶೇಕಡಾ 15 ರಷ್ಟು ಕುಸಿತ ಕಂಡಿದು, ಈ ಹಿಂದೆ 3,549 ಕೋಟಿ ರೂ ಇದ್ದ ಆದಾಯ ಕೇವಲ 962 ಕೋಟಿ ರೂಪಾಯಿಗೆ ಇಳಿದಿದ್ದು ಸರ್ಕಾರದ ಆದಾಯಕ್ಕೂ ಕೊಕ್ಕೆ
ರಾಜ್ಯ ಸರಕಾರ ಜು.20ರಿಂದ ಜಾರಿಗೆ ಬರುವಂತೆ ಮದ್ಯ ಹಾಗೂ ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಹೆಚ್ಚಳದ ಪರಿಣಾಮ ಭಾರತೀಯ ಮದ್ಯದ ಮಾರಾಟ ಪ್ರಮಾಣ ಶೇ.15ರಷ್ಟು ಕುಸಿತ ಕಂಡಿದೆ ಏಪ್ರಿಲ್, ಮೇ, ಜೂನ್ ಮತ್ತು ಜುಲೈ ತಿಂಗಳಲ್ಲಿ ಕ್ರಮವಾಗಿ 2308, 2607, 3549 ಮತ್ತು 2980 ಕೋಟಿ ರೂ.ಇದ್ದ ಆದಾಯ ಆಗಸ್ಟ್ ತಿಂಗಳಲ್ಲಿ ಕೇವಲ 962 ಕೋಟಿ ರೂ. ಸಂಗ್ರಹವಾಗಿದೆ.

ಅಲ್ಲ ವಸ್ತುಗಳ ಬೆಲೆ ಏರಿಕೆಯಂತೆ ಮದ್ಯಪ್ರಿಯರಿಗೂ ಮದ್ಯದ ಬೆಲೆ ಹೆಚ್ಚಳದ ಬಿಸಿ ತಟ್ಟಿದೆ. ಹಾಗಾಗಿ, ಖರೀದಿ ಶಕ್ತಿ ಕುಗ್ಗಿರುವುದರಿಂದ ಹಲವು ಮದ್ಯ ಪ್ರಿಯರು ಕಡಿಮೆ ಬೆಲೆಯತ್ತ ಮಾರು ಹೋಗುತ್ತಿದ್ದಾರೆ,