

ಬಿಗ್ ಬಾಸ್ ಸೀಸನ್ 11ರ ವಿನ್ನರ್ ಯಾರು ಎನ್ನುವ ಕುತೂಹಲಕ್ಕೆ ಈಗಾಗಲೇ ತೆರೆಬಿದ್ದಿದೆ. ಲೇಟಾಗಿ ಬಂದರೂ ಲೇಟೆಸ್ಟ್ ಆಗಿ ಬಂದ ವಲ್ಡ್ ಕಾರ್ಡ್ ಎಂಟ್ರಿ ಸ್ಪರ್ಧಿ ಹಾಡುಗಾರ ಕುರಿಗಾಯಿ ಹನುಮಂತ ಬಿಗ್ ಬಾಸ್ ವಿನ್ನರ್ ಆಗಿದ್ದಾರೆ. ಬಿಗ್ ಬಾಸ್ ಆಟ ಅಂದರೆ ಹನುಮಂತ ಎನ್ನುವ ಮಟ್ಟಿಗೆ ಜನಪ್ರಿಯತೆ ಪಡೆದ ಹನುಮಂತ, ವ್ಯಕ್ತಿತ್ವದಲ್ಲಿಯೂ ಅಪ್ಪಟ ಬಂಗಾರ. ಹೀಗಾಗಿ ಕನ್ನಡಿಗರ ಮನಸ್ಸು ಗೆದ್ದು, ಬಿಗ್ ಬಾಸ್ ಸೀಜನ್ 11ರ ಗ್ರ್ಯಾಂಡ್ ಫಿನಾಲೆಯಲ್ಲಿ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಟ್ರೋಫಿ ಗೆಲ್ಲುವ ಮುಂಚೆಯೇ ಹನುಮಂತ ಕನ್ನಡಿಗರಿಗೆ ಭಾವುಕರಾಗಿ ಪತ್ರವೊಂದನ್ನು ಬರೆದಿದ್ದು, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ‘ಎಲ್ಲಾ ನನ್ನ ಪ್ರೀತಿಯ ಕರ್ನಾಟಕ ಜನತೆಗೆ ನಮಸ್ಕಾರಗಳು. ನಿಮ್ಮ ನಿಸ್ವಾರ್ಥ ಪ್ರೀತಿಗೆ ನಾನು ಸದಾ ಚಿರಋಣಿಯಾಗಿರುತ್ತೇನೆ. ಬಿಗ್ ಬಾಸ್ ಪಯಣದಲ್ಲಿ ಇಷ್ಟು ದಿನಗಳಿಂದ ನೀವು ನನಗೆ ನೀಡಿದ ಪ್ರೀತಿ ಪ್ರೋತ್ಸಾಹ ಬೆಂಬಲಕ್ಕೆ ಹೃತ್ತೂರ್ವಕ ಧನ್ಯವಾದಗಳು. ನಾನು ಈ ಮಹತ್ವದ ಹಂತದಲ್ಲಿ ಬಂದು ನಿಲ್ಲಲು ನಿಮ್ಮ ಪ್ರೋತ್ಸಾಹವೇ ಕಾರಣವಾಗಿದೆ’.
ಇಲ್ಲಿನ ಪ್ರತಿ ಕ್ಷಣವು ನನಗೆ ನಿಮ್ಮ ಬೆಂಬಲ ಮತ್ತು ಆಶೀರ್ವಾದದ ಅವಶ್ಯಕತೆ ಇದೆ. ಅದುವೇ ನನ್ನ ಪ್ರೇರಣೆಯಾಗಿದೆ. ಹಾಗೂ ನನ್ನನ್ನು ಅನೇಕ ಸವಾಲುಗಳನ್ನು ಎದುರಿಸಲು ಶಕ್ತನಾಗಿಸಿದೆ. ನಿಮ್ಮ ಪ್ರತೀ ಸಂದೇಶ ನನಗೆ ಹೊಸ ಶಕ್ತಿ. ಬಿಗ್ ಬಾಸ್ ಹೊಡೆದಾಟ ಸುಲಭವಾಗಿಲ್ಲ. ಆದರೆ ನಿಮ್ಮ ಪ್ರೀತಿ ನನ್ನ ದೊಡ್ಡ ಭರವಸೆಯಾಗಿ ಪ್ರೇರಣೆಯಾಗುತ್ತಿದೆ. ನಿಮ್ಮೆಲ್ಲರ ನಂಬಿಕೆ ವಿಶ್ವಾಸ ಉಳಿಸಲು ಶ್ರಮಿಸುತ್ತೇನೆ. ನನ್ನ ಪ್ರಯತ್ನ ನಿಮ್ಮ ಪ್ರೋತ್ಸಾಹದಿಂದ ಯಶಸ್ವಿಯಾಗುತ್ತದೆ ಎಂದು ಭಾವಿಸಿ ನಾನು ನಿಮ್ಮ ಭರವಸೆಗೆ ಅಡ್ಡಿ ಆಗದಂತೆ ಶ್ರಮಿಸುತ್ತೇನೆ’.
ನೀವು ನನ್ನ ಪಯಣದ ಶಕ್ತಿ. ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹವೇ ನನ್ನ ಗೆಲುವಿಗೆ ದಾರಿ. ಇದೇ ರೀತಿ ನಿಮ್ಮ ಬೆಂಬಲಕ್ಕೆ ಪುನಃ ವಿನಂತಿಸುತ್ತೇನೆ ನನ್ನ ಮುಂದಿನ ಪಯಣವನ್ನ ಜಯ ಸಾಧಿಸಲು ಸಹಕರಿಸಿ. ನಿಮ್ಮ ಬೆಂಬಲ ನನ್ನ ಗೆಲುವಿನ ಕೀಲಿಯಾಗಿದೆ. ನನ್ನ ಈ ಪಯಣವನ್ನು ಯಶಸ್ವಿಗೊಳಿಸಲು ನೀವು ಸದಾ ನನ್ನೊಂದಿಗೆ ಇರುತ್ತೀರಿ ಎಂದು ಭಾವಿಸಿ ಮತ್ತೊಮ್ಮೆ ಮಗದೊಮ್ಮೆ ನಿಮಗೆ ಧನ್ಯವಾದಗಳನ್ನು ತಿಳಿಸುತ್ತೇನೆ’.
ನನಗೆ ಸದಾ ಪ್ರೋತ್ಸಾಹಿಸುವಿರಿ ಎಂದು ಭಾವಿಸುತ್ತಾ ನಿಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇನೆ. ದಯವಿಟ್ಟು ನನ್ನ ಪರವಾಗಿ ಮತ ನೀಡಿ. ನಿಮ್ಮ ಆಶೀರ್ವಾದದ ಭರವಸೆಯ ಮೇಲೆ ನನ್ನ ಪಯಣವನ್ನು ಮುಂದುವರಿಸುತ್ತಿದ್ದೇನೆ. ನನ್ನ ಕನಸಿನ ಗೆಲುವಿಗೆ ಕೈಜೋಡಿಸಿ ಎಂದು ತಿಳಿಸುತ್ತಾ,ಎಲ್ಲರಿಗೂ ಕನ್ನಡ ಜನತೆಗೆ ಪ್ರೀತಿ ಮತ್ತು ಗೌರವದೊಂದಿಗೆ ಧನ್ಯವಾದಗಳು’ ಎಂದು ಗ್ರ್ಯಾಂಡ್ ಫಿನಾಲೆಗೂ ಮೊದಲು ಹನುಮಂತರ ಅವರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿತ್ತು.