

ದಾವಣಗೆರೆ(ಆ19):ಅಮೆರಿಕಾದಲ್ಲಿ ವಾಸವಾಗಿದ್ದ ದಾವಣಗೆರೆ ಮೂಲದ ದಂಪತಿ ಹಾಗೂ ಮಗು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಅಮೆರಿಕಾದ ಮೇರಿಲ್ಯಾಂಡ್ ರಾಜ್ಯದ ಬಾಲ್ಟಿಮೋರ್ನಲ್ಲಿ ವಾಸವಾಗಿದ್ದ ಯೋಗೇಶ್ ಹೊನ್ನಾಳ್ (37), ಅವರ ಪತ್ನಿ ಪ್ರತಿಭಾ ಹೊನ್ನಾಳ್ (35), ಪುತ್ರ ಯಶ್ ಹೊನ್ನಾಳ್ (6) ಮೃತಪಟ್ಟವರು

ಇನ್ನೂ ಮೃತರು ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹಾಲೆಕಲ್ಲು ಗ್ರಾಮದವರಾಗಿದ್ದು, ಇತ್ತೀಚೆಗೆ ಇವರ ಕುಟುಂಬ ದಾವಣಗೆರೆಗೆ ಶಿಫ್ಟ್ ಆಗಿತ್ತು. 9 ವರ್ಷಗಳ ಹಿಂದೆ ಯೋಗೇಶ್ ಹಾಗೂ ಪ್ರತಿಭಾ ಮದುವೆಯಾಗಿದ್ದರು. ಬಳಿಕ ಇವರು ಅಮೆರಿಕಾಗೆ ತೆರಳಿದ್ದರು. ಯೋಗೇಶ್ ಮತ್ತು ಅವರ ಪತ್ನಿ ಪ್ರತಿಭಾ ಇಬ್ಬರೂ ವೃತ್ತಿಯಲ್ಲಿ ಎಂಜಿನಿಯರ್ ಆಗಿ ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದರು.

ಸದ್ಯ ಪತಿ, ಪತ್ನಿ ಹಾಗೂ ಪುತ್ರ ಸಾವನಪ್ಪಿದ್ದಾರೆ. ಮೂವರ ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ, ಇದರಿಂದ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಮೃತರ ಪಾರ್ಥಿವ ಶರೀರವನ್ನು ಸ್ವದೇಶಕ್ಕೆ ತರಿಸಿಕೊಡುವಂತೆ ದಾವಣಗೆರೆಯಲ್ಲಿರುವ ಮೃತರ ಕುಟುಂಬಸ್ಥರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.