ಸಿಎಂ ಸಿದ್ದರಾಮಯ್ಯಗೆ ಮೀಸಲಾತಿ ಸಂಕಟ..! ಪಂಚಮಸಾಲಿ ಹೋರಾಟಕ್ಕೆ ಕರೆ ನೀಡಿದ ಜಯಮೃತ್ಯುಂಜಯ ಶ್ರೀ..

ದಾವಣಗೆರೆ(19): ಪಂಚಮಸಾಲಿ 2A ಮೀಸಲಾತಿ ಹೋರಾಟಕ್ಕೆ ಮತ್ತೆ ಕೂಡಲ ಜಯ ಮೃತ್ಯುಂಜಯ ಶ್ರೀ ಜಯಮೃತ್ಯುಂಜಯ ಸ್ವಾಮಿಜಿ ಕರೆ..


ದಾವಣಗೆರೆಯಲ್ಲಿ ಶ್ರೀಗಳು ಮಾತನಾಡಿ, ಶ್ರಾವಣ ಮಾಸದಲ್ಲಿ ಇಷ್ಟಲಿಂಗ ವಿಶೇಷ ಪೂಜೆಗಳ ಮೂಲಕ ಮತ್ತೆ ಹೋರಾಟ ಪ್ರಾರಂಭ ಮಾಡುತ್ತೇವೆ, ವಿನೂತನ ಹೋರಾಟ ನಡೆಸುತ್ತೇವೆ, ಸಿಎಂ ಹಾಲುಮತ ಸಮಾಜಕ್ಕೆ ಕೇಂದ್ರಕ್ಕೆ ಎಸ್ ಟಿ ಶಿಫಾರಸ್ಸು ಮಾಡಿದ್ದಾರೆ, ಅಲ್ಲಿ ಆ ಜಾಗ ಖಾಲಿ ಆಗುತ್ತದೆ, ಆ ಸ್ಥಾನ ನಮಗೆ ಕೊಡಿಸಲಿ, ಜೊತೆಗೆ ಎಲ್ಲಾ ಲಿಂಗಾಯಿತರಿಗೆ ಓಬಿಸಿ ಮೀಸಲಾತಿ ನೀಡಲು ಕೇಂದ್ರಕ್ಕೆ ಶಿಫಾರಸ್ಸು ಮಾಡಲಿ ಎಂದರು..

ಕಳೆದ ಅವಧಿಯ ಕೊನೆಯಲ್ಲಿ ಸರ್ಕಾರ 2d ಗ್ರೂಪ್ ನಿರ್ಮಾಣ ಮಾಡಿತ್ತು, ಆದರೆ 2A, 2D ಬಗ್ಗೆ ಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿದೆ, ನಾವು ಸಿಎಂ ಸಿದ್ದರಾಮಯ್ಯನವರಿಗೆ 2ಎ ಮೀಸಲಾತಿ ಹಕ್ಕೋತ್ತಾಯ ಮಾಡಿದ್ದೇವೆ, ಸಮಸ್ಯೆ ಸರಿಪಡಿಸಿ ನ್ಯಾಯ ಕೊಡಿಸಿ, ಲೋಕಸಭೆ ಚುನಾವಣೆ ಒಳಗೆ ಮೀಸಲಾತಿ ಕೊಡಬೇಕು ಎಂದು ಆಗ್ರಹಿಸಿದ್ದೆವು, ಅಧಿವೇಶನ ಬಳಿಕ ಕಾನೂನು ಸಲಹೆಗಾರರ ಸಭೆ ಕರೆಯುತ್ತೇವೆ ಎಂದು ಹೇಳಿ ಸಿಎಂ ಸಿದ್ದರಾಮಯ್ಯನವರು ಸಭೆ ಕರೆದಿಲ್ಲ, ಹೀಗಾಗಿ ನಾವು ಕೂಡಲಸಂಗಮ‌ ಸಭೆಯಲ್ಲಿ ನಿರ್ಣಯ ಮಾಡಿದ್ದೇವೆ ನಿಪ್ಪಾಣಿ ವಿಧಾನಸಭಾ ಕ್ಷೇತ್ರದಿಂದ ಹೋರಾಟ ಪ್ರಾರಂಭ ಮಾಡುತ್ತೇವೆ ಎಂದರು.


ಪ್ರತ್ಯೇಕ ಲಿಂಗಾಯಿತ ಧರ್ಮ ವಿಚಾರ ಮಾತನಾಡಿದ ಅವರು, ಸದ್ಯ ಆ ಹೋರಾಟದ ಬಗ್ಗೆ ಮಾತನಾಡುವುದಿಲ್ಲ, ಜಾಗತಿಕ ಲಿಂಗಾಯಿತ ಮಹಾಸಭಾ ಆ ಹೋರಾಟ ಮುಂದುವರೆಸಿದೆ, ಜಾಮದಾರ್ ಅವರು ಈ ಬಗ್ಗೆ ಹೋರಾಟ ಮುಂದುವರೆಸಿದ್ದಾರೆ, ಪ್ರತ್ಯೇಕ ಧರ್ಮ ಹೋರಾಟಕ್ಕೆ ನನ್ನ ಬೆಂಬಲ ಇದ್ದೇ ಇದೆ, ಪ್ರತ್ಯೇಕ ಧರ್ಮದಿಂದ ಸಂವಿಧಾನ ಮಾನ್ಯತೆ ಸಿಗುತ್ತದೆ, 2A ಮೀಸಲಾತಿ ಹೋರಾಟದಲ್ಲಿರುವ ಕಾರಣ ಅಲ್ಲಿ ಹೋಗಲು ಆಗುತ್ತಿಲ್ಲ, 2A ಮೀಸಲಾತಿ ದಡಕ್ಕೆ ಬಿಡುವ ಕೆಲಸ ಮಾಡುತ್ತಿದ್ದೇನೆ ಎಂದು ಶ್ರೀಗಳು ತಿಳಿಸಿದರು.

  • Related Posts

    ದಾವಣಗೆರೆಯ ಜಿಲ್ಲಾ ಪೊಲೀಸ್ ಚಿಣ್ಣರ ಅಂಗಳ ಶಾಲೆಗೆ ಭೇಟಿ ನೀಡಿದ ಡಾ. ಜಿ. ಪರಮೇಶ್ವರ್

    ಸನ್ಮಾನ್ಯ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಅವರು ದಾವಣಗೆರೆ ನಗರಕ್ಕೆ ವಿವಿಧ ಕಾರ್ಯಕ್ರಮಗಳ ಬೇಟಿ ನೀಡಿದ ಸಂದರ್ಭದಲ್ಲಿ ಪಿಜೆ ಬಡಾವಣೆಯ ಪೊಲೀಸ್ ವಸತಿ ಗೃಹ ಸಮುಚ್ಛಯದ ಆವರಣದಲ್ಲಿರುವ ದಾವಣಗೆರೆ ಜಿಲ್ಲಾ ಪೊಲೀಸ್ ಚಿಣ್ಣರ ಅಂಗಳ ಶಾಲೆಗೆ ಭೇಟಿ ನೀಡಿದರು. ನಂತರ…

    “ವಿಷ ಕೊಡಿ ಇಲ್ಲವೇ ಯೂರಿಯಾ ಕೊಡಿ” ದಾವಣಗೆರೆಯಲ್ಲಿ ಬಿಜೆಪಿ ಇಂದ ಪ್ರತಿಭಟನೆ

    ದಾವಣಗೆರೆ ಜಿಲ್ಲಾ ಭಾರತೀಯ ಜನತಾ ಪಕ್ಷದ ವತಿಯಿಂದ ದಾವಣಗೆರೆಯಲ್ಲಿ ಪ್ರತಿಭಟನೆ ಮಾಡಲಾಯಿತು. ರೈತರಿಗೆ ಸಮಯಕ್ಕೆ ಸರಿಯಾಗಿ ಯೂರಿಯಾ ಗೊಬ್ಬರ ಕೊಡದೇ, ರೈತರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆ ಹಾಗೂ ತನ್ನ ತಪ್ಪನ್ನು ಕೇಂದ್ರ ಸರ್ಕಾರದ…

    Leave a Reply

    Your email address will not be published. Required fields are marked *

    error

    Enjoy this blog? Please spread the word :)

    error: Content is protected !!