ಶಾಲಾ ಆವರಣ ಅನೈತಿಕ ತಾಣಗಳಾಗಬಾರದು, ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ಸಿಗಬೇಕು, ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್….

ದಾವಣಗೆರೆ, ಜನವರಿ.28 : ಜಿಲ್ಲೆಯಲ್ಲಿನ ಎಲ್ಲಾ ಸರ್ಕಾರಿ ಶಾಲೆಗಳಿಗೆ ಕಾಂಪೌಂಡ್ ಸೇರಿದಂತೆ ಕೊಠಡಿ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಆಸನ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಗುಣಮಟ್ಟದ ಶಿಕ್ಷಣ ಭವಿಷ್ಯದ ನಾಗರಿಕರಾಗುವ ಪ್ರತಿ ಮಕ್ಕಳಿಗೆ ಸಿಗುವಂತೆ ಮಾಡಬೇಕು, ಆದರೆ ಸಂಜೆಯ ವೇಳೆ ಶಾಲಾ ಆವರಣಗಳು ಅನೈತಿಕ ಚಟುವಟಿಕೆಗಳಿಗೆ ಬಳಕೆಯಾಗದಂತೆ ರಕ್ಷಣೆ ಮಾಡಿಕೊಳ್ಳಬೇಕೆಂದು ದಾವಣಗೆರೆ ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ ಸೂಚನೆ ನೀಡಿದರು.

ಅವರು ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ದಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ದಿಶಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಲಾ ಆವರಣದಲ್ಲಿ ಎಲ್ಲೆಂದರಲ್ಲಿ ಸಂಜೆಯ ವೇಳೆ ಮದ್ಯದ ಬಾಟಲಿಗಳು ಬಿದ್ದಿರುತ್ತವೆ. ಬೆಳಗ್ಗೆ ಶಾಲೆಗೆ ಆಗಮಿಸುವ ಮಕ್ಕಳು ಇದೆಲ್ಲವನ್ನು ಗಮನಿಸುವುದರಿಂದ ಅವರ ಮೇಲೆ ಪರಿಣಾಮ ಭೀರಲಿದೆ. ಆದ್ದರಿಂದ ಪ್ರತಿ ಶಾಲೆಗೆ ಕಾಂಪೌಂಡ್ ಇರಬೇಕು. ಮತ್ತು ಶಾಲೆಯ ಅಕ್ಕಪಕ್ಕದಲ್ಲಿರುವ ಅಂಗಡಿಗಳಲ್ಲಿ ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಭೀರುವ ತಿನಿಸುಗಳು ಮತ್ತು ಇತರೆ ವಸ್ತುಗಳ ಮಾರಾಟದ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಬೇಕೆಂದರು.

ಗ್ರಾಮಾಂತರ ಪ್ರದೇಶಗಳಿಂದ ಪ್ರೌಢಶಾಲೆಗಳಿಗೆ ಆಗಮಿಸುವ ವಿದ್ಯಾರ್ಥಿಗಳಿಗೆ ಬಸ್ ಸೌಕರ್ಯದ ಅನಾನುಕೂಲದಿಂದ ಬೆಳಗಿನ ವೇಳೆ ನಡೆಸುವ ವಿಶೇಷ ತರಗತಿಗಳಿಗೆ ಆಗಮಿಸಲು ಸಮಸ್ಯೆ ಎದುರಾಗಿದೆ ಎಂದು ತಿಳಿಸಿದ್ದು ಎಲ್ಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಡಿಡಿಪಿಐಗೆ ತಿಳಿಸಿದರು.

ಒತ್ತುವರಿ ಕಡಿವಾಣಕ್ಕೆ ಕ್ರಮ; ನಗರ ಹಾಗೂ ಪಟ್ಟಣ ಪ್ರದೇಶ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿ ರಸ್ತೆ ಹಾಗೂ ಚರಂಡಿ ಒತ್ತುವರಿ ಮಾಡಿಕೊಂಡು ಮನೆಗಳನ್ನು ನಿರ್ಮಾಣ ಮಾಡುವುದು ಕಂಡು ಬಂದಿದ್ದು ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಯಾರು ಸಹ ಚರಂಡಿ, ರಸ್ತೆಗಳನ್ನು ಒತ್ತುವರಿ ಮಾಡದಂತೆ ಮನೆ ನಿರ್ಮಾಣ ಮಾಡುವ ವೇಳೆ ಲೈಸೆನ್ಸ್ ನೀಡಬೇಕು. ಉಲ್ಲಂಘನೆ ಮಾಡಿ ನಿರ್ಮಾಣ ಮಾಡಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕೆಂದರು. ಓಬಜ್ಜಿಹಳ್ಳಿಯಲ್ಲಿ ರಸ್ತೆಗೆ ಮನೆ ನಿರ್ಮಾಣ ಮಾಡಿದ್ದರಿಂದ ಶವಸಂಸ್ಕಾರ ಮಾಡಲು ಸಮಸ್ಯೆಯಾಗಿದೆ ಎಂದು ಗ್ರಾಮಸ್ಥರು ಮನವಿ ಮಾಡಿದ್ದು ಪರಿಶೀಲನೆ ನಡೆಸಲು ತಿಳಿಸಿದರು.
ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಪೈಪ್‍ಲೈನ್ ಅಳವಡಿಸಲು ರಸ್ತೆ ಬಗೆಯುತ್ತಿರುವ ಬಗ್ಗೆ ದಾವಣಗೆರೆ ನಗರದಲ್ಲಿ ಪೈಪ್ ಗ್ಯಾಸ್ ಅಳವಡಿಕೆಗೆ ಹೊಸ ರಸ್ತೆಗಳನ್ನು ತುಂಡರಿಸಲಾಗುತ್ತಿದೆ. ಈ ಬಗ್ಗೆ ನಿಯಮಬದ್ದವಾಗಿ ಮಾಡಲು ಸಂಬಂಧಿಸಿದ ಇಂಜಿನಿಯರ್‍ಗಳು ಪರಿಶೀಲನೆ ನಡೆಸಬೇಕೆಂದರು.

ಎಲ್ಲೆಂದರಲ್ಲಿ ಕಸ ಹಾಕುವುದು ನಿಯಂತ್ರಿಸಿ; ದಾವಣಗೆರೆ ನಗರ ಸೇರಿದಂತೆ ಜಿಲ್ಲೆಯ ಪಟ್ಟಣ, ಗ್ರಾಮಾಂತರ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಕಸ ಹಾಕುವುದನ್ನು ತಡೆಗಟ್ಟುವ ಮೂಲಕ ನೈರ್ಮಲ್ಯತೆಯನ್ನು ಕಾಪಾಡಿಕೊಳ್ಳಬೇಕು. ಎಲ್ಲೆಂದರಲ್ಲಿ ಕಸ ಹಾಕುವುದನ್ನು ತಡೆಗಟ್ಟಲು ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು. ನಗರ, ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಮನೆಯಲ್ಲಿನ ಹಸಿ-ಒಣ ಕಸ ಸಂಗ್ರಹಣೆ ಮಾಡಲು ವಾಹನಗಳನ್ನು ನೀಡಿದ್ದು ಸರಿಯಾಗಿ ಸಂಗ್ರಹಣೆ ಮಾಡುವ ಮೂಲಕ ಇದರ ವಿಂಗಡಣೆಯನ್ನು ಸಕಾಲದಲ್ಲಿ ಕೈಗೊಂಡು ಅವರಗೆರೆಯಲ್ಲಿ ಘನತ್ಯಾಜ್ಯ ಸಂಗ್ರಹ ಘಟಕದಲ್ಲಿ ಪದೇ ಪದೇ ಬೆಂಕಿ ಕಾಣಿಸಿಕೊಳ್ಳುತ್ತಿದ್ದು ಈಗಾಗದಂತೆ ವಿಂಗಡಣೆ ಮಾಡಿ ವಿಲೆಗೆ ಕ್ರಮ ವಹಿಸಲು ಸೂಚನೆ ನೀಡಿದರು.

ನಾಯಿಗಳ ಸಂತಾನ ನಿಯಂತ್ರಣಕ್ಕೆ ಕ್ರಮ; ನಾಯಿಗಳ ಹಾವಳಿಯನ್ನು ತಡೆಗಟ್ಟಲು ಈಗಾಗಲೇ ಪಾಲಿಕೆ ವ್ಯಾಪ್ತಿಯಲ್ಲಿ ನಾಯಿಗಳ ಸಂತಾನ ನಿಯಂತ್ರಣಕ್ಕಾಗಿ ಎಬಿಸಿ ಚಿಕಿತ್ಸೆ ಮಾಡಿದ್ದು ಗ್ರಾಮಾಂತರ ಪ್ರದೇಶದಲ್ಲಿಯು ಇದನ್ನು ಕೈಗೊಳ್ಳಬೇಕು. ಗ್ರಾಮಾಂತರ ಪ್ರದೇಶದಲ್ಲಿಯು ಇವುಗಳ ನಿಯಂತ್ರಣ ಮಾಡಬೇಕಾಗಿದ್ದು ಆರಂಭಿಕವಾಗಿ ಸಂತೆಬೆನ್ನೂರಿನಲ್ಲಿ ನಾಯಿಗಳ ಸಂತಾನ ನಿಯಂತ್ರಣಕ್ಕಾಗಿ ಎಬಿಸಿ ಶೀಘ್ರದಲ್ಲಿ ಆರಂಭಿಸಲಾಗುತ್ತದೆ ಎಂದರು.

ಕ್ಯಾಂಟೀನ್ ಆರಂಭಿಸಲು ಸಲಹೆ; ಜಿಲ್ಲಾಡಳಿತ ಭವನಕ್ಕೆ ಸಾಕಷ್ಟು ಸಾರ್ವಜನಿಕರು ಆಗಮಿಸುವುದರಿಂದ ಅವರಿಗೆ ಬೇಕಾದ ಉಪಹಾರ, ಊಟ, ಕಾಫಿ, ಟೀ ಯನ್ನು ಪಡೆಯಲು ಗುಣಮಟ್ಟ ಹಾಗೂ ಶುಚಿತ್ವ, ರಿಯಾಯಿತಿ ದರದಲ್ಲಿ ನೀಡಲು ಕ್ಯಾಂಟೀನ್ ಆರಂಭಿಸಬೇಕೆಂದು ಸಂಸದರು ಸಲಹೆ ನೀಡಿದರು. ಈ ವೇಳೆ ಶೀಘ್ರದಲ್ಲಿಯೇ ಆರಂಭಿಸಲಾಗುತ್ತದೆ ಎಂದು ಎಡಿಸಿ ತಿಳಿಸಿದರು.
ಸಭೆಯಲ್ಲಿ ಹೊನ್ನಾಳಿ ಶಾಸಕರಾದ ಶಾಂತನಗೌಡ ಡಿ.ಜಿ., ಮೇಯರ್ ಚಮನ್‍ಸಾಬ್ ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

  • Related Posts

    ಜಿಲ್ಲಾ ಪೊಲೀಸ್ ವತಿಯಿಂದ ರಸ್ತೆ ಸುರಕ್ಷತಾ ಮಾಸಾಚರಣೆಯ ಸಮಾರೋಪ ಸಮಾರಂಭ…

    ದಿನಾಂಕ: 01-01-2025 ರಿಂದ 31-01-2025 ಒಂದು ತಿಂಗಳ ಕಾಲ ಪ್ರತಿ ವರ್ಷದಂತೆ ರಸ್ತೆ ಸುರಕ್ಷತಾ ಮಾಸಾಚರಣೆಯನ್ನು ಜಿಲ್ಲಾ ಪೊಲೀಸ್ ವತಿಯಿಂದ ಹಮ್ಮಿಕೊಂಡಿದ್ದು, ಇಂದು ದಾವಣಗೆರೆ ನಗರದ ರೇಣುಕಾ ಮಂದಿರದ ಕಲ್ಯಾಣ ಮಂಟಪದಲ್ಲಿ ರಸ್ತೆ ಸುರಕ್ಷತಾ ಮಾಸಾಚರಣೆಯ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ…

    ರಾಜನಹಳ್ಳಿಯಲ್ಲಿ 7ನೇ ವರ್ಷದ ಶ್ರೀ ಮಹರ್ಷಿ ವಾಲ್ಮೀಕಿ -ಜಾತ್ರಾ ಮಹೋತ್ಸವ ಪೂರ್ವಭಾವಿ ಸಭೆ.

    ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕು ರಾಜನಹಳ್ಳಿಯಲ್ಲಿ ದಿನಾಂಕ:08.02.2025 & 09.02.2025 ರಂದು ನಡೆಯುವ 7ನೇ ವರ್ಷದ ಶ್ರೀ ಮಹರ್ಷಿ ವಾಲ್ಮೀಕಿ -ಜಾತ್ರಾ ಮಹೋತ್ಸವ-2025. ಈ ಕಾರ್ಯಕ್ರಮದ ಪ್ರಯುಕ್ತ ವಾಲ್ಮೀಕಿ ಭವನ, ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ, ರಾಜನಹಳ್ಳಿಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ದಾವಣಗೆರೆ…

    Leave a Reply

    Your email address will not be published. Required fields are marked *

    error: Content is protected !!