

ದಾವಣಗೆರೆ.(ಆ19); ಜಿಲ್ಲಾ ಚೀಟಿನಿಧಿಗಳ ಸಂಘದ ವತಿಯಿಂದ ಚೀಟಿ ನಿಧಿಗಳ ದಿನಾಚರಣೆ ಪ್ರಯುಕ್ತ ಬೈಕ್ ರಾಲಿ ಹಮ್ಮಿಕೊಳ್ಳಲಾಗಿತ್ತು. ದಾವಣಗೆರೆಯ ವಿದ್ಯಾನಗರದ ಸಹಾಯಕ ನಿಬಂಧಕರ ಕಛೇರಿಯಿಂದ ಜಿಲ್ಲೆಯ ಎಲ್ಲಾ ಚೀಟಿ ಸಂಸ್ಥೆಗಳ ಮಾಲೀಕರು ಮತ್ತು ಸಿಬ್ಬಂದಿ ವರ್ಗದವರಿಂದ ಸಾರ್ವಜನಿಕ ಜಾಗೃತಿಯ ಪೋಸ್ಟರ್‌ಗಳ ಪ್ರದರ್ಶನದೊಂದಿಗೆ 100 ಬೈಕ್‌ಗಳಲ್ಲಿ 180ಕ್ಕೂ ಹೆಚ್ಚು ಸವಾರರಿಂದ ಬೃಹತ್ ಬೈಕ್ ರಾಲಿಯನ್ನು ನಗರದ ಪ್ರಮುಖ ರಸ್ತೆಗಳ ಮತ್ತು ಸರ್ಕಲ್‌ಗಳ ಮಾರ್ಗವಾಗಿ ಜಿಲ್ಲಾ ಕಛೇರಿಗಳ ಸಂಕೀರ್ಣದಲ್ಲಿರುವ ಉಪ ನಿಬಂಧಕರ ಕಛೇರಿವರೆಗೆ ಸಂಚರಿಸಿ ಚೀಟಿ ಉದ್ದಿಮೆದಾರರ ಬೇಡಿಕೆಗಳ ಮನವಿಯನ್ನು ಉಪ ನಿಬಂಧಕರಿಗೆ ಸಲ್ಲಿಸಲ್ಲಿಸಿದರು.

ಈ ವೇಳೆ ದಾವಣಗೆರೆ ಜಿಲ್ಲಾ ಚೀಟಿ ನಿಧಿಗಳ ಸಂಘದ ಕಾರ್ಯದರ್ಶಿ ಅಂದನೂರು ರಾಜೇಶ್ ಮಾತನಾಡಿ
ಸಾರ್ವಜನಿಕರು ಖಾಸಗಿ ಚೀಟಿಗಳಿಂದ ಮೋಸ ಹೋಗಬಾರದೆಂಬ ಕಾಳಜಿಯಿಂದ ಅಧಿಕೃತ ಚೀಟಿ ಕಂಪನಿಗಳಲ್ಲಿ ಮಾತ್ರ ವ್ಯವಹರಿಸಿರಿ ಎಂದು ಇಲಾಖೆಯು ತಿಂಗಳಿಗೂಮ್ಮೆ ಪತ್ರಿಕಾ ಪ್ರಕಟಣೆ ಹೊರಡಿಸಬೇಕು ಎಂದರು.
ಬ್ಯಾಂಕುಗಳ ಠೇವಣಿದಾರರಿಗೆ ಇರುವ ವಿಮಾ ಭದ್ರತೆಯನ್ನು ಚೀಟಿ ನಿಧಿಗಳ ಚಂದಾದಾರರಿಗೂ ಕಲ್ಪಿಸಬೇಕು.ಐದು ಲಕ್ಷ ರೂಗಳವರೆಗಿನ ಚೀಟಿ ಗುಂಪುಗಳಿಗೆ ಭದ್ರತಾ ಠೇವಣಿ ಇಡುವುದರಿಂದ ಹಾಗೂ ಜಿಎಸ್ ಟಿಯಿಂದ ವಿನಾಯಿತಿ ನೀಡಬೇಕು. ಐದು ಲಕ್ಷ ಮೇಲ್ಪಟ್ಟ ಚೀಟಿಗಳನ್ನು 6% ಜಿಎಸ್ ಟಿ ವ್ಯಾಪ್ತಿಗೆ ತರಬೇಕು. ಚೀಟಿ ಒಪ್ಪಂದದ ಕರಾರು ಪತ್ರ ನೊಂದಣೆಗೆ ಈಗಿರುವ ಮುದ್ರಾಂಕ ಶುಲ್ಕದಿಂದ ವಿನಾಯಿತಿ ನೀಡಬೇಕು.
ನೊಂದಾಯಿತ ಚೀಟಿ ನಿಧಿ ಸಂಸ್ಥೆಗಳ ಅನಧಿಕೃತ ಚೀಟಿ ಗುಂಪುಗಳ ಮಟ್ಟ ಹಾಕಲು ಚೀಟಿ ನಿಧಿ ಉಪ ನಿಭಂದಕರ ಕಛೇರಿಯಿಂದ ಚೀಟಿ ನಿಧಿ ಸಂಸ್ಥೆಗಳು ಪಡೆದ ಹೊಸ ಚೀಟಿ ಗುಂಪುಗಳ ಪರವಾನಿಗೆಯ ವಿವರಗಳನ್ನು ಪ್ರತಿ ತಿಂಗಳೂ ಪತ್ರಿಕಾ ಪ್ರಕಟಣೆ ಹೊರಡಿಸಬೇಕು ಎಂದರು.

ವೃತ್ತಿಪರ ಹಾಗೂ ಉದ್ದೇಶಪೂರ್ವಕ ಸುಸ್ತಿದಾರರನ್ನು ಗುರುತಿಸಲು ಸಹಾಯಕವಾಗುವಂತೆ ನಿಭಂದಕರುಗಳ ನ್ಯಾಯಾಲಯಗಳಲ್ಲಿ ದಾಖಲಾಗುವ ಬಾಕಿ ವಸೂಲಾತಿ ಪ್ರಕರಣಗಳ ವಿವರಗಳನ್ನು ಪ್ರತಿ ತಿಂಗಳೂ ಚೀಟಿ ನಿಧಿ ಸಂಸ್ಥೆಗಳಿಗೆ ಒದಗಿಸಬೇಕೆಂದರು.
ಈ ವೇಳೆ ಎಂ ರಂಗರಾವ್,ಬಿ.ಸತ್ಯನಾರಾಯಣ, ಷಣ್ಮುಖ ರಾಜು ಗುಜ್ಜರ್,ರೆಡ್ಡಯ್ಯ,ಲೋಹಿತ್,ಎ.ಪದ್ಮರಾಜ್,ಅಗಡಿ ಸತೀಶ್,ಪಿ.ರವಿ,ಮಲ್ಲಿಕಾರ್ಜುನ ಸ್ವಾಮಿ,ನವೀನ್ ಜೈನ್,ಸಿದ್ದಯ್ಯ ಎಂ.ಬಿ,ಶ್ರೀನಿವಾಸ್ ರೆಡ್ಡಿ ಉಪಸ್ಥಿತರಿದ್ದರು.