ಉಚ್ಚoಗಿದುರ್ಗದಲ್ಲಿ ನಡೆದ ಸಪ್ತಪದಿ ಸರಳ ಸಾಮೂಹಿಕ ವಿವಾಹ.

ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಉಚ್ಚoಗಿದುರ್ಗದಲ್ಲಿ ರಾಜ್ಯ ಸರ್ಕಾರ ಹಾಗೂ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ಆದೇಶದಂತೆ ರಾಜ್ಯದ ಎ ಶ್ರೇಣಿ ದೇವಸ್ಥಾನಗಳಲ್ಲಿ ಮೇ.25 ರಂದು ಉಚಿತ ಸರಳ ಸಾಮೂಹಿಕ ವಿವಾಹಗಳು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳು,ಗ್ರಾಮ ಪಂಚಾಯಿತಿ ಅಧ್ಯಕ್ಷರೂ,ಉಪಾಧ್ಯಕ್ಷರು,ಸದಸ್ಯರು, ಗ್ರಾಮಸ್ಥರು, ಭಕ್ತರ ಸಮ್ಮುಖದಲ್ಲಿ ವಿವಾಹಗಳು ಉಚ್ಚoಗೆಮ್ಮನ ದೇವಸ್ಥಾನ ಆವರಣದಲ್ಲಿ ನಡೆದವು.

ದೇವಸ್ಥಾನದವನ್ನು ಮಾವಿನ ಸಪ್ಪು, ತಳಿರು ತೋರಣದಿಂದ ಅಲಂಕಾರ ಮಾಡಲಾಗಿತ್ತು.

ಈ ಸರಳ ಸಾಮೂಹಿಕ ವಿವಾಹದಲ್ಲಿ 04 ಜೋಡಿಗಳು ನೂತನ ಜೀವನಕ್ಕೆ ಕಾಲಿಟ್ಟಿದ್ದು ಹಿಂದೂ ಧಾರ್ಮಿಕ ದತ್ತಿ ಇಲಾಖೆವತಿಯಿಂದ 40ಸಾವಿರ ಮೌಲ್ಯದ ಒಂದು ಚಿನ್ನದ ತಾಳಿ,ಎರಡು ಚಿನ್ನದ ಗುಂಡು ಹಾಗೂ ಹೆಣ್ಣಿಗೆ ಹತ್ತು ಸಾವಿರ ಹಾಗೂ ವರ ನಿಗೆ ಐದು ಸಾವಿರ ಹಣವನ್ನು ನೀಡಲಾಗಿತು.

ವಿವಾಹದಲ್ಲಿ ಭಾಗವಹಿಸಿದ ಭಕ್ತರೂ ಹಾಗೂ ಸoಬಂದಿಗಳಿಗೆ ಅನ್ನ ದಾಸೋಹವನ್ನು ದೇವಸ್ಥಾನದಿಂದ ಆಯೋಜಿಸಲಾಗಿತ್ತು….

ಈ ವೇಳೆ ಮಾತನಾಡಿದ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಪ್ಪ ಸರ್ಕಾರದ ನಿರ್ದೇಶನದಂತೆ ಉಚಿತವಾಗಿ ಸಪ್ತಪದಿ ಸರಳ ವಿವಾಹವನ್ನು ಮಾಡಿದ್ದು ಇದರಿಂದ ತಂದೆ-ತಾಯಿಗಳು ಆರ್ಥಿಕ ಹೊರೆ ಕಡಿಮೆಯಾಗಲಿ ದೇವಿಯು ಎಲ್ಲರಿಗೂ ಸುಖ ಶಾಂತಿ ಕೊಟ್ಟು ಕಾಪಾಡಲಿ ಎಂದು ತಿಳಿಸಿದರು…

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಾಕಮ್ಮ, ಉಪಾಧ್ಯಕ್ಷರಾದ ರೇಣುಕಮ್ಮ, ಸದಸ್ಯರಾದ ಕೆಂಚ್ಚಪ್ಪ, ಯುವರಾಜ್ ,ಚಂಚೀಲಮ್ಮ, ಗ್ರಾಮಸ್ಥರಾದ ರಾಜಶೇಖರ್ ಗೌಡರು, ದೇವಸ್ಥಾನದ ಸಿಬ್ಬಂದಿ, ಗ್ರಾಮಸ್ಥರು ಉಪಸ್ಥಿತರಿದ್ದರು…

  • Related Posts

    ಚಿಕ್ಕ ವಯಸ್ಸಿಗೆ ದೊಡ್ಡ ಸಾಧನೆ : ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ ಗೆ ಸೇರಿದ ದ್ವಿತಾ ಮೋಹನ್

    ಹೊಸಪೇಟೆ ಕಂಪ್ಲಿ: ಸ್ಥಳೀಯ ನಿವಾಸಿ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪ, ಸೌಮ್ಯ ಶ್ರೀ ದಂಪತಿಯ ದ್ವೀತಿಯ ಪುತ್ರಿ ದ್ವಿತಾ ಮೋಹನ್ (6 ತಿಂಗಳು) ರು ಯಾವುದೇ ಸಹಾಯ, ಬಾಹ್ಯ ಬೆಂಬಲವಿಲ್ಲದೆ ಅತಿ ಹೆಚ್ಚು ಸಮಯ…

    ವಿಜಯನಗರ ಜಿಲ್ಲಾಧಿಕಾರಿಗಳು ವಿವಿಧ ಕಂದಾಯ ಅಧಿಕಾರಿಗಳೊಂದಿಗೆ ಜಿಲ್ಲಾಮಟ್ಟದ ಗೈರು ವಿಲೇ ಸಮಿತಿ ಸಭೆ…

    ದಿನಾಂಕ:25.03.2025 ರಂದು ಮಾನ್ಯ ಜಿಲ್ಲಾಧಿಕಾರಿಗಳು ಎಂ ಎಸ್ ದೇವಕರವರು, ಹಡಗಲಿ & ಹರಪನಹಳ್ಳಿ ತಾಲೂಕಿನ ವಿವಿಧ ಕಂದಾಯ ಅಧಿಕಾರಿಗಳೊಂದಿಗೆ ಜಿಲ್ಲಾಮಟ್ಟದ ಗೈರು ವಿಲೇ ಸಮಿತಿ ಸಭೆ ನಡೆಸಿ, ಭೂ ಮಂಜೂರಾತಿ ಪ್ರಕರಣಗಳಲ್ಲಿ ಮಿಸ್ಸಿಂಗ್‌ ಕಡತಗಳ ನಿರ್ವಹಣೆ ಹಾಗೂ ಸ್ಥಾನಿಕ ವರದಿಗಳನ್ನು ಸೇರಿದಂತೆ…

    Leave a Reply

    Your email address will not be published. Required fields are marked *

    error

    Enjoy this blog? Please spread the word :)

    error: Content is protected !!