

ಜೂನ್ ೨೭, ವಿಜಯನಗರ ಜಿಲ್ಲೆ, ಹರಪನಹಳ್ಳಿ ತಾಲ್ಲೂಕು, ಹಿರೇಮೆಗಳಗೆರೆಯ ಸುತ್ತ ಮುತ್ತ ಮಳೆಯಿಂದ ರಸ್ತೆಗಳು ಗುಂಡಿಬಿದಿದ್ದು ವಾಹನ ಸವಾರರು ಗುಂಡಿ ತಪ್ಪಿಸಲು ಹೋಗಿ ಅನೇಕ ಅಪಘಾತಗಳು ಸಂಭವಿಸಿವೆ, ಅಲ್ಲದೆ ಹಾಲಮ್ಮನ ತೋಫಿನಿಂದ ಹಿರೇಮೆಗಳಗೆರೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಕ್ಕಪಕ್ಕದ ಮಣ್ಣು ಕುಸಿದು ಯಾವಾಗ ವಾಹನ ಅಪಘಾತಕ್ಕೆ ಸಂಭವಿಸುತ್ತವೋ ಎನ್ನುವ ಭಯದಲ್ಲಿ ವಾಹನ ಸವಾರರೂ ಹಾಗೂ ಪ್ರಸಿದ್ಧ ಕ್ಷೇತ್ರ ಹಾಲಮ್ಮನ ತೋಫಿಗೆ ಬರುವ ಭಕ್ತರೂ ಓಡಾಡುವಂತಾಗಿದೆ.
ಹಿರೇಮೆಗಳಗೆರೆ ಚಾನೆಲ್ ಪಕ್ಕದಲ್ಲಿ ಸಿಲುಕಿರುವ ಟ್ರಾಕ್ಟರ್…
ಈ ಕುರಿತು ಹರಪನಹಳ್ಳಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗಮನ ಹರಿಸಿ ಮಣ್ಣು ಕುಸಿದಿರುವ ರಸ್ತೆಗಳನ್ನು ಸರಿಪಡಿಸಿ ಗುಂಡಿಗಳನ್ನು ಮುಚ್ಚಬೇಕು ಎನ್ನುವುದು ಗ್ರಾಮಸ್ಥರು ಹಾಗೂ ಭಕ್ತರ ಮನವಿಯಾಗಿದೆ….