
ಬೆಂಗಳೂರು, 31, ಜೂಲೈ 2025, ಆನೇಕಲ್:- ಮಹಿಳೆಯರು ಸಾಮಾಜಿಕ ಶೋಷಣೆ ಯಿಂದ ಹೊರಗಡೆ ಬಂದು ತಮ್ಮ ಮೂಲಭೂತ ಹಕ್ಕುಗಳಿಗೆ ಹೋರಾಟ ಮಾಡಬೇಕು ಎಂದು ಸಮಾಜವಾದಿ ಪಾರ್ಟಿ ರಾಜ್ಯ ಯುವಜನ ಸಭಾ ಅಧ್ಯಕ್ಷ ಆನಂದ್ ಸಿ ತಿರುಮಲ ಹೇಳಿದರು.
ಅವರು ಬೆಂಗಳೂರು ದಕ್ಷಿಣ ತಾಲೂಕು ಶಿಕಾರಿಪಾಳ್ಯ ಗ್ರಾಮದಲ್ಲಿ ನೂತನವಾಗಿ ಸಮಾಜವಾದಿ ಪಕ್ಷ ಸೇರ್ಪಡೆ ಕಾರ್ಯಕ್ರಮ ವನ್ನು ಉದ್ದೇಶಿಸಿ ಮಾತನಾಡಿ ಈ ರಾಷ್ಟದಲ್ಲಿ ಬಲಿಷ್ಠವಾಗಿ ಬೆಳೆಯುತ್ತಿರುವ ಸಮಾಜವಾದಿ ಪಕ್ಷದ ಮಾಜಿ ಮುಖ್ಯ ಮಂತ್ರಿಗಳು ಅಖಿಲೇಶ್ ಯಾದವ್ ಜೀ ರವರ ನೇತೃತ್ವದಲ್ಲಿ ಇಡೀ ದೇಶದಲ್ಲಿ ಪಕ್ಷ ಶಕ್ತಿ ಶಾಲಿ ಯಾಗಿ ಬೆಳೆಯುತ್ತಿದೆ ಕರ್ನಾಟಕ ದಲ್ಲಿ ಸಮಾಜವಾದಿ ಮಹಿಳಿಯರನ್ನು ಸಂಘಟಿಸಬೇಕು ಆಗ ಮಾತ್ರ ಮಹಿಳೆಯರು ಅಭಿರುದ್ದಿ ಹೊಂದಲು ಸಾಧ್ಯ ವಾಗುತ್ತೆ ಎಂದರು.

ಸಮಾಜವಾದಿ ರೈತ ಸಂಘದ ಅಧ್ಯಕ್ಷ ಜೂಲ್ಪಿರ್ ಖಾಲೀಮ್ ಮಾತನಾಡಿ ಸಮಾಜವಾದಿ ಪಕ್ಷ ವು ರಾಜ್ಯದಲ್ಲಿ ಬಡಜನರ ಹಿಂದುಳಿದ ಅಲ್ಪಸಂಖ್ಯಾತ ರ ಪರವಾಗಿ ಕೆಲಸ ಮಾಡುತ್ತಿದೆ ನಮೆಲ್ಲರೂ ಪಕ್ಷದ ಬೆಂಬಲಿಸಿ ಮುಂದಿನ ದಿನಗಳಲ್ಲಿ ಮಹಿಳೆಯರನ್ನು ಒಗ್ಗೂಡಿಸಬೇಕು ಎಂದು ಹೇಳಿದರು.
ನೂತನವಾಗಿ ಸಮಾಜವಾದಿ ಪಕ್ಷ ಕ್ಕೆ ಸೇರ್ಪಡೆಗೊಂಡ
ಬೆಂಗಳೂರು ದಕ್ಷಿಣ ತಾಲೂಕು
ಸಮಾಜವಾದಿ ಪಾರ್ಟಿ ಮಹಿಳಾ ಯುವ ಜನ ಸಭಾ
ಅಧ್ಯಕ್ಷರು ಸಬೀಹ ಬಾನು ಅಂಜುಮ್ ಮಾತನಾಡಿ ಕರ್ನಾಟಕ ದಲ್ಲಿ ಸಮಾಜವಾದಿ ಪಕ್ಷವು ಸರ್ವರಿಗೂ ಸಮಾನ ಅವಕಾಶಗಳು ನೀಡುತ್ತಿರುವುದು ನಮಗೆಲ್ಲ ತುಂಬಾ ಖುಷಿ ತಂದಿದ್ದೆ ಈನಿಟ್ಟಿನಲ್ಲಿ ನಾನು ಪಕ್ಷ ಸಂಘಟಿಸಿ ನಮ್ಮ ಪಂಚಾಯತ್ ಯಲ್ಲಿ ಪಕ್ಷವನ್ನು ಗೆಲ್ಲಿಸಿ ಕೊಂಡು ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಿ ಪಡಿಸಿದರು.
ಇನ್ನು ಕಾರ್ಯಕ್ರಮ ದಲ್ಲಿ ಸಮಾಜವಾದಿ ಬೆಂಗಳೂರು ದಕ್ಷಿಣ ತಾಲೂಕು ಪ್ರಧಾನ ಕಾರ್ಯದರ್ಶಿ,
ರಾಶಿಧ,ಕಾರ್ಯದರ್ಶಿ,ವಹಿಧಾ, ಮಂಜುದೇವಿ,ಹಸೀನಾ
ನಾಝಿಯಾ,ಅಭಿದಾ ಬಾನು, ಶಬೀನಾ, ಜರೀನಾ, , ರಿಜ್ವಾನ್, ರೀಹಾನ, , ಜಾಯಿನ ಬಿ, ಜಬೀನಾ ತಾಜ್, ರೇಷ್ಮಾ, ಲಕ್ಷ್ಮಿ, ದೇವಿ, ಶಾತಾಜಿ ಸೇರಿದಂತೆ ಅನೇಕರು ಪಕ್ಷಕ್ಕೆ ಸೇರ್ಪಡೆಗೊಂಡರು.








