ನವದೆಹಲಿಯಲ್ಲಿ ತೆಂಗು,ಅಡಿಗೆ ಬೆಳೆಯುವ ರೈತರ ಸಂಕಷ್ಟ ನಿವಾರಣೆಗೆ ಮನವಿ ಸಲ್ಲಿಸಿದ ಡಾ|| ಪ್ರಭಾ ಮಲ್ಲಿಕಾರ್ಜುನ್

ನವದೆಹಲಿಯ ಭವನದಲ್ಲಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಕರ್ನಾಟಕದ ಸಂಸದರು ಮತ್ತು ಮುಖಂಡರ ನಿಯೋಗವು ಭೇಟಿಯಾಗಿ, ತೆಂಗು ಮತ್ತು ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಸಂಕಷ್ಟ ನಿವಾರಣೆಗಾಗಿ ತುರ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಡಾ|| ಪ್ರಭಾ ಮಲ್ಲಿಕಾರ್ಜುನ್ಮ ಮನವಿ ಸಲ್ಲಿಸಿದರು.

ಈ ವೇಳೆ ಅಡಿಕೆ ಮತ್ತು ಮಾನವ ಆರೋಗ್ಯದ ಮೇಲೆ “ಪ್ರಮಾಣಾಧಾರಿತ ಸಂಶೋಧನೆ” ನಡೆಸಲು ಕೃಷಿ ಸಚಿವಾಲಯ ಮಂಜೂರು ಮಾಡಿದ ನಿಧಿಗಳನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದರು.

ಅಡಿಕೆ ರೈತರು ಎದುರಿಸುತ್ತಿರುವ ಹಳದಿ ಎಲೆ ಹಾಗೂ ಹುಳು ರೋಗಗಳ ಕುರಿತು ದೀರ್ಘಕಾಲಿಕವಾಗಿ ಸಮಗ್ರ ಅಧ್ಯಯನ ನಡೆಸಿ ಪರಿಹಾರ ಕಂಡುಹಿಡಿಯಲು ಖ್ಯಾತ ವೈಜ್ಞಾನಿಕ ಸಂಸ್ಥೆಗಳ ಪಾಲ್ಗೊಳ್ಳುವಿಕೆಯ ಅಗತ್ಯತೆವಿದೆ.

ಅಡಿಕೆಯ ಅಕ್ರಮ ಆಮದು ತಡೆಯಲು ಕಸ್ಟಮ್ಸ್ ವ್ಯವಸ್ಥೆಯನ್ನು ಬಲಪಡಿಸುವುದು ಅತ್ಯವಶ್ಯಕ. ಅಡಿಕೆ ಆಮದು ಅನುಮತಿಸುವ ಮೊದಲು CAMPCO, TSS, MAMCOS ಮುಂತಾದ ಸಹಕಾರಿಗಳ ಸಲಹೆ ಪಡೆಯುವುದು ಸೂಕ್ತ.ಹೆಚ್ಚು ಪ್ರಮಾಣದ ಸಾಗಾಟಗಳಿಗೆ GPS ಟ್ರ್ಯಾಕಿಂಗ್ ಹಾಗೂ ತಪಾಸಣಾ ಕೇಂದ್ರಗಳಲ್ಲಿ CCTV ಅಳವಡಿಸಿ ವ್ಯಾಪಾರಿಗಳ ಅಕ್ರಮ ವಹಿವಾಟು, ಅಂಡರ್-ಬಿಲ್ಲಿಂಗ್ ಮುಂತಾದವುಗಳನ್ನು ತಡೆಗಟಬೇಕು ಎಂದರು

ಅಡಿಕೆಯ ಮೇಲಿನ GST ಅನ್ನು ಪ್ರಸ್ತುತ 5% ನಿಂದ 2% ಕ್ಕೆ ಇಳಿಸಬೇಕು. GPS ಟ್ರ್ಯಾಕಿಂಗ್ ಮತ್ತು ಇ-ಡಾಕ್ಯುಮೆಂಟೇಶನ್ ಕಡ್ಡಾಯಗೊಳಿಸಿದರೆ ತೆರಿಗೆ ಮಸೂದೆಗೆ ನಷ್ಟವಾಗದೆ ಆದಾಯವನ್ನು ಕಾಪಾಡಬಹುದು.

ಗೋದಾಮುಗಳ ಕೊರತೆಯಿಂದ ಸಣ್ಣ ರೈತರು ತಮ್ಮ ಉತ್ಪನ್ನಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡುತ್ತಾರೆ. ಆದ್ದರಿಂದ ಸಹಕಾರಿಗಳಿಗೆ ಸಬ್ಸಿಡಿ ದರದಲ್ಲಿ ಹಣಕಾಸು ಒದಗಿಸಿ ಜಿಲ್ಲಾವಾರು ಗೋದಾಮುಗಳನ್ನು ನಿರ್ಮಿಸಲು ಸಹಾಯ ಮಾಡುವುದು ಅಗತ್ಯ.

ಇತ್ತೀಚೆಗೆ ಅಮೆರಿಕಾದಲ್ಲಿ ಅಡಿಕೆ ಎಲೆಯಿಂದ ತಯಾರಾದ ಬಯೋಡಿಗ್ರೇಡಬಲ್ ತಟ್ಟೆಗಳು ಕ್ಯಾನ್ಸರ್ ಉಂಟುಮಾಡುತ್ತವೆ ಎಂಬ ವರದಿ ಹೊರಬಂದಿದೆ. ಇದರಿಂದ ಅಮೆರಿಕಾಕ್ಕೆ ರಫ್ತು ತೀವ್ರ ಹಾನಿಗೊಳಗಾಗಿದೆ. ಭಾರತದಲ್ಲಿ ವೈಜ್ಞಾನಿಕ ಅಧ್ಯಯನ ನಡೆಸಿ, ಸೂಕ್ತ ಮಾಹಿತಿಯನ್ನು ನೀಡುವುದು ಅಗತ್ಯ.

ಹವಾಮಾನ ಬದಲಾವಣೆಗಳು ಬೆಳೆಗಳಿಗೆ ಹೆಚ್ಚಿನ ಪರಿಣಾಮ ಬೀರುತ್ತವೆ. ಮಳೆ, ಪ್ರಾಕೃತಿಕ ವಿಪತ್ತುಗಳು, ರೋಗಗಳ ಕುರಿತು ನಿಖರ ಮಾಹಿತಿ ಪಡೆಯಲು ಆಧುನಿಕ ತಂತ್ರಜ್ಞಾನ ಬಳಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮನ್ವಯದಿಂದ ಬಲಿಷ್ಠ ಮತ್ತು ತಂತ್ರಜ್ಞಾನಾಧಾರಿತ ಬೆಳೆ ವಿಮೆ ಯೋಜನೆಗಳನ್ನು ಜಾರಿಗೆ ತರಬೇಕೆಂದು ನಮ್ಮ ಮನವಿ ಸಲ್ಲಿಸಲಾಯಿತು.

ದಾವಣಗೆರೆ ಕ್ಷೇತ್ರದಲ್ಲಿ ಅಡಕೆಬೆಳೆಗಾರರ ಸಂರಕ್ಷಣೆ ಕುರಿತರಾಗಿ ಮಾತನಾಡಿದರು

ಈ ನಿಯೋಗದಲ್ಲಿ ಕೇಂದ್ರ ಸಚಿವರುಗಳಾದ ಶ್ರೀ ಎಚ್.ಡಿ. ಕುಮಾರಸ್ವಾಮಿ, ಶ್ರೀ ಪ್ರಹ್ಲಾದ್ ಜೋಶಿ, ಶ್ರೀ ವಿ.ಸೋಮಣ್ಣ, ಸಂಸದರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ, ಶ್ರೀ ಬಿ.ವೈ. ರಾಘವೇಂದ್ರ, ಕ್ಯಾಪ್ಟನ್ ಬ್ರಿಜೇಶ್ ಚೌಟಾ, ಶ್ರೀ ಕೋಟ ಶ್ರೀನಿವಾಸ ಪೂಜಾರಿ, ಶ್ರೀ ಯದುವೀರ ಒಡೆಯರ್ ಹಾಗೂ ಶ್ರೀ ಗೋವಿಂದ ಕಾರಜೋಳ,ಮಾಜಿ ಸಚಿವರಾದ ಶ್ರೀ ಅರಗ ಜ್ಞಾನೇಂದ್ರ ಮತ್ತು ಕ್ಯಾಂಪ್ಕೋ ಅಧ್ಯಕ್ಷರಾದ ಶ್ರೀ ಕಿಶೋರ್ ಕೊಡ್ಗೆ ಸಹ ಪ್ರತಿನಿಧಿ ಮಂಡಳಿಯೊಂದಿಗೆ ಉಪಸ್ಥಿತರಿದ್ದರು.

  • Related Posts

    ಕೇಂದ್ರದಿಂದ ಕರ್ನಾಟಕ್ಕೆ 8.73 ಲಕ್ಷ ಮೆಟ್ರಿಕ್‌ ಟನ್‌ ಯೂರಿಯಾ ನೀಡಿದರೂ, ಸಿಎಂ ಹೇಳಿರುವುದು ಹಸಿ ಸುಳ್ಳ – ಬಿಜೆಪಿ ಆರೋಪ.

    ಕೇಂದ್ರ ಸರ್ಕಾರ ಕರ್ನಾಟಕ್ಕೆ 8.73 ಲಕ್ಷ ಮೆಟ್ರಿಕ್‌ ಟನ್‌ ಯೂರಿಯಾ ನೀಡಿದರೂ, ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಯೂರಿಯಾವನ್ನು ಸರಿಯಾಗಿ ವಿತರಿಸುತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿರುವುದು ಹಸಿ ಸುಳ್ಳು!! ಬಿಜೆಪಿ ಆರೋಪ ಮಾಡಿದ್ದೆ ಕಾಳಸಂತೆಯಲ್ಲಿ ಯೂರಿಯಾ ಅಕ್ರಮವಾಗಿ ಮಾರಾಟವಾಗುತ್ತಿದೆ ಎಂದು…

    ರೈತರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ – ಜುಲೈ 28 ರಂದು ರಾಜ್ಯವ್ಯಾಪಿ ಪ್ರತಿಭಟನೆ – ವಿಜಯೇಂದ್ರ

    ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯದ ರೈತರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆದ ದಿನದಿಂದ ರಾಜ್ಯದ ರೈತರಿಗೆ ನೆರವಾಗುವಂತಹ ಯಾವುದೇ ಕಾರ್ಯಕ್ರಮಗಳನ್ನು ನೀಡಿಲ್ಲ, ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಯ ವಿರುದ್ಧ ಜುಲೈ…

    Leave a Reply

    Your email address will not be published. Required fields are marked *

    error

    Enjoy this blog? Please spread the word :)

    error: Content is protected !!