

ವಿಜಯನಗರ ಜಿಲ್ಲೆಯ ಪ್ರಸಿದ್ಧ ದೇವಸ್ಥಾನವಾದ ಉಚ್ಚoಗಿದುರ್ಗದ ಹಾಲಮ್ಮ ದೇವಸ್ಥಾನದ ಮಹಾದ್ವಾರಕ್ಕೆ ಕಳಸರೋಹಣ, ಮಹಾದ್ವಾರದ ಉದ್ಘಾಟನೆ ಹಾಗೂ ಭಕ್ತರ ದೇಣಿಗೆ ಯಿಂದ ಸಂಗ್ರಹವಾದ ಆಭರಣಗಳ ಅರ್ಪಣೆ ಕಾರ್ಯಕ್ರಮ ಉಚ್ಚoಗಿದುರ್ಗ ಪುರವರ್ಗ ಮಠದ ಶ್ರೀ ರೇವಣಸಿದ್ದಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯದಲ್ಲಿ ಉಚ್ಚoಗಿದುರ್ಗ ಗ್ರಾಮ ಪಂಚಾಯಿತಿ ಅಧ್ಯಕ್ಷರೂ, ಸರ್ವ ಸದಸ್ಯರೂ,ಶ್ರೀ ಹಾಲಮ್ಮ ದೇವಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರೂ,ಸದಸ್ಯರು,ಗ್ರಾಮಸ್ಥರು, ಭಕ್ತರ ಸಮ್ಮುಖದಲ್ಲಿ ನಡೆಯಿತು.

ಈ ಹಾಲಮ್ಮ ದೇವಸ್ಥಾನದ ಮಹಾದ್ವಾರವನ್ನು ಜಗಳೂರು ಶಾಸಕ ಎಸ್ ವಿ ರಾಮಚಂದ್ರಪ್ಪ ಟೇಪ್ ಕಟ್ ಮಾಡುವ ಮೂಲಕ ಉದ್ಘಾಟನೆ ಮಾಡಿದರೆ ಕಳಸರೋಹಣ ಕಾರ್ಯಕ್ರಮವನ್ನು ಶ್ರೀ ರೇವಣಸಿದ್ದ ಶಿವಾಚಾರ್ಯ ಮಹಾಸ್ವಾಮಿಗಳು ದೀಪಾ ಹಚ್ಚುವ ಮೂಲಕ ಉದ್ಘಾಟನೆ ಮಾಡಿದರು.

ನಂತರ ಹಾಲಮ್ಮ ದೇವಿಯ ಮಹಾದ್ವಾರದ ಕಳಸರೋಹಣ ನಡೆಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರೂ,ಸದಸ್ಯರು, ಹಾಲಮ್ಮ ದೇವಸ್ಥಾನದ ಸಮಿತಿಅಧ್ಯಕ್ಷರೂ,ಸದಸ್ಯರು,ಗ್ರಾಮದ ಮುಖಂಡರು,ಭಕ್ತರೂ ಉಪಸ್ಥಿತರಿದ್ದರು..