


ದಾವಣಗೆರೆ ಮಹಾನಗರ ಪಾಲಿಕೆಯ ಉಪಚುನಾವಣೆಯ ಅಂಗವಾಗಿ 37ನೇ ವಾರ್ಡಿನಲ್ಲಿ ಇಂದು ನಡೆದ ಪ್ರಚಾರ ಸಭೆ ಜನಸ್ತೋಮದಿಂದ ಕಂಗೊಳಿಸುತ್ತಿತ್ತು,
ದಾವಣಗೆರೆಯನ್ನು ನವೀಕರಣಗೊಳಿಸ ಬೇಕೆಂಬ ಹಂಬಲವನ್ನು ಹೊತ್ತು ಅದರ ಆಧುನಿಕತೆಗೆ ಹಗಲಿರುಳು ಶ್ರಮಿಸುತ್ತಿರುವ” ದಾವಣಗೆರೆ ಆಧುನೀಕರಣದ ಹರಿಕಾರ” ರೆನಿಸಿದ ಶ್ರೀ ಎಸ್ ಎಸ್ ಮಲ್ಲಿಕಾರ್ಜುನ್ ರವರು ಸಭೆಗೆ ಆಗಮಿಸುತ್ತಿದ್ದಂತೆ ನೆರೆದ ಸಹಸ್ರಾರು ಸಂಖ್ಯೆಯ ಜನರಲ್ಲಿ ವಿದ್ಯುತ್ ಸಂಚಾರವಾದಂತಾಯಿತು.
ಡೊಳ್ಳು ಕುಣಿತ ಹಾಗೂ ಜನಸ್ತೋಮದ ನಡುವೆ ಹಾರಾಡುತ್ತಿದ್ದ ಸಹಸ್ರಾರು ಧ್ವಜಗಳು ಜನರ ಸಂಭ್ರಮವನ್ನು ಮುಗಿಲು ಮುಟ್ಟುವಂತೆ ಮಾಡಿತ್ತು, ಈ ಪ್ರಚಾರ ಸಭೆಗೆ ಮಾಜಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ ,ಅಭ್ಯರ್ಥಿ ರೇಖಾರಾಣಿ ಸಿದ್ದಗಂಗಾ ಶಿವಣ್ಣ, ಮತ್ತು ಡಿ.ಎಸ್.ಹೇಮಂತ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಬಿ ಮಂಜಪ್ಪ,ಮುಖಂಡರಾದ ದಿನೇಶ್.ಕೆ.ಶೆಟ್ಟಿ,ಗಡಿಗುಡಾಲ್ ಮಂಜಣ್ಣ, ಎ.ನಾಗರಾಜ್,ಮುದೇಗೌಡ್ರು ಗಿರೀಶ್, ಡಿ.ಬಸವರಾಜ್,ಆರ್.ಎಸ್.ಶೇಖರಪ್ಪ,ಆರ್.ಹೆಚ್.ನಾಗಭೂಷಣ್, ಕೆ.ಜಿ.ಶಿವಕುಮಾರ್,ಸೈಯದ್ ಸೈಫುಲ್ಲ,ಡೋಲಿ ಚಂದ್ರು,ಅನಿತಾಬಾಯಿ,ಗಜೇಂದ್ರ,ತಿಪ್ಪೆಶ್,ಬೀಡಾ ಪ್ರಕಾಶ್,ಪರಮೇಶ್,ಚಂದ್ರು,ಸೈಯದ್ ಖಾಲಿದ್ ಅಹ್ಮದ್ ಇನ್ನೂ ಅನೇಕ ಮುಖಂಡರು, ಅಭಿಮಾನಿಗಳು,ಕಾರ್ಯಕರ್ತರು ಭಾಗವಹಸಿದ್ದರು.
HEAD