
ಜಗಳೂರು :- ಅಡಿಕೆ ತೋಟದಲ್ಲಿ ಪಂಪ್ ಸೆಟ್ ಚಾಲನೆ ಮಾಡಲು ಹೋಗಿ ವಿದ್ಯುತ್ ಸ್ಪರ್ಶ ವ್ಯಕ್ತಿ ಓರ್ವ ಮೃತಪಟ್ಟರುವ ಘಟನೆ ಜಗಳೂರು ತಾಲ್ಲೂಕಿನ ಬಿಸ್ತುವಳ್ಳಿ ಗ್ರಾಮದಲ್ಲಿ ಬುಧವಾರ ಸಂಭವಿಸಿದೆ.

ಗ್ರಾಮದ 28 ವರ್ಷದ ನಾಗರಾಜ್ ಮೃತ ವ್ಯಕ್ತಿಯಾಗಿದ್ದು ಈತ ಎಂದಿನಂತೆ ಅಡಿಕೆ ತೋಟದಲ್ಲಿ ನೀರು ಬೀಡಲು ಹೊಗಿದ್ದ ಸಂದರ್ಭದಲ್ಲಿ ಪಂಪ್ ಸೆಟ್ ಚಾಲನೆ ಮಾಡಲು ಹೋಗಿದ್ದ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶ ಸ್ಥಳಗಳಲ್ಲೆ ಮೃತ ಪಟ್ಟಿದ್ದಾರೆ ಎನ್ನಲಾಗಿದ್ದು. ಈ ಸಂಬಂದ ಜಗಳೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.









