

16 ಮೇ ೨೨, ಸೋಮವಾರ,
ದಾವಣಗೆರೆಯ ರೋಟರಿ ಕ್ಲಬ್ ನಲ್ಲಿ ದಾವಣಗೆರೆ ಜಿಲ್ಲೆ, ಶಿವಮೊಗ್ಗ ಜಿಲ್ಲೆ ಮತ್ತು ಚಿತ್ರದುರ್ಗ ಜಿಲ್ಲೆಗಳನ್ನು ಒಗ್ಗೂಡಿಸಿ ಗ್ರಾಮಪಂಚಾಯತಿ ನೌಕರರ ವಿಸ್ತೃತ ಸಭೆಯನ್ನು ಹಮ್ಮಿಕೊಳ್ಳಲಾಗಿದ್ದು, ಈ ಸಭೆಗೆ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿಯವರಾದ ಶ್ರೀ ಜಿ ರಾಮಕೃಷ್ಣ, ಉಪಾಧ್ಯಕ್ಷರಾದ ಶ್ರೀ ಎನ್ ನಾಡಗೌಡ ಹಾಗೂ ರಾಜ್ಯ ಸಮಿತಿಯ ಖಜಾಂಚಿಗಳಾದ ಶ್ರೀ ಆರ್ ಎಸ್ ಬಸವರಾಜ್ ರವರು ಪಾಲ್ಗೊಂಡಿದ್ದರು.
ಇನ್ನು ಈ ಸಭೆಗೆ ದಾವಣಗೆರೆ, ಶಿವಮೊಗ್ಗ & ಚಿತ್ರದುರ್ಗ ಜಿಲ್ಲೆಯ ಎಲ್ಲಾ ತಾಲೂಕುಗಳ ಅಧ್ಯಕ್ಷರು, ಉಪಾಧ್ಯಕ್ಷರು ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಬೇಡಿಕೆಗಳು
1) ನೌಕರರ ವೇತನಕ್ಕೆ ಶಾಸನಬದ್ಧ ಅನುದಾನ ರೂ.300/- ಕೋಟಿ.ಅನುದಾನ ಒದಗಿಸಿದ್ದಕ್ಕಾಗಿ ಮೊದಲಿಗೆ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು.
2) EFMS ನಲ್ಲಿ ಅಳವಡಿಸಲು ಪಂಪ ಆಪರೇಟರ್,ಸ್ವೀಪರ ಮತ್ತು ಜವಾನ(ಸಿಪಾಯಿ) ಗಳಿಗೆ ಶೈಕ್ಷಣಿಕ ಅರ್ಹತೆ ಇಲ್ಲದಿದ್ದರೂ ಕೂಡ EFMS ನಲ್ಲಿ ಅಳವಡಿಸಿ ಅನುಮೋದಿಸಲು 2018 ರಲ್ಲಿ ಮಾಡಿದ ಆದೇಶದಂತೆ ಮಾಡಲು ವಿನಂತಿಸಿದಾಗ ಎಲ್ಲಾ ಅಧಿಕಾರಿಗಳು ಒಪ್ಪಿಗೆ ಸೂಚಿಸಿದರು.
3) 31-10-2017 ರ ಒಳಗೆ ಇರುವ ಬಿ/ಕ ಮತ್ತು DEO ಹೊರತುಪಡಿಸಿ ಉಳಿದ ಎಲ್ಲಾ ಸಿಬ್ಬಂದಿಗಳನ್ನು ಮಂಡಲ್ ಪಂಚಾಯತಿ ಸಿಬ್ಬಂದಿಗಳಿಗೆ ಘೋಷಿಸಿದಂತೆ ಒಂದು ಬಾರಿಗೆ ಎಲ್ಲರನ್ನೂ ಅನುಮೋದಿಸಲು ವಿನಂತಿಸಲಾಯಿತು.ಅದನ್ನು ಆಂತರಿಕ ಮಟ್ಟದಲ್ಲಿ ಚರ್ಚಿಸಿ ಶೀಘ್ರವಾಗಿ ಆದೇಶ ಮಾಡಲು ಒಪ್ಪಿಗೆ ಸೂಚಿಸಿದರು.
4) ಪಿಂಚಣಿ ಬಗ್ಗೆ 3 ಬಾರಿ ಚರ್ಚೆ ನಡೆದರೂ ಕೂಡ ಆದೇಶ ಆಗದೇ ಇರುವುದು ಅಧಿಕಾರಿಗಳ ಗಮನಕ್ಕೆ ತಂದಾಗ 2 ದಿನದಲ್ಲಿ ಪೂರ್ಣ ವರದಿ ತರುಸುವ ಜವಾಬ್ದಾರಿ ಮಾನ್ಯ ಆಯುಕ್ತರಿಗೆ ಒಪ್ಪಿಸಿದರು ಮತ್ತು LIC ಯವರ ಜೊತೆಯಲ್ಲಿ ಚರ್ಚಿಸಿ ಪಿಂಚಣಿ ಆದೇಶ ಮಾಡುವುದಾಗಿ ಒಪ್ಪಿಗೆ ನೀಡಿದರು.
5) ನಗರಾಭಿವೃದ್ಧಿ ಇಲಾಖೆಯಲ್ಲಿ ಇರುವಂತೆ ಗ್ರಾ.ಪಂ.ನಲ್ಲಿ ಕರವಸೂಲಿಯಾಗುವ ಹಣದಲ್ಲಿ 40% ಸರಕಾರದ ಖಾತೆಗೆ ಜಮಾ ಮಾಡಿಸಿ ವೇತನ,ಪಿಂಚಣಿ ಗೆ ಬಳಕೆ ಮಾಡಲು ವಿನಂತಿಸಲಾಯಿತು.
ಇದರ ಬಗ್ಗೆ ನಗರಾಭಿವೃದ್ಧಿ ಇಲಾಖೆಯಿಂದ ಮಾಹಿತಿ ತರಿಸಿಕೊಂಡು ಅಧ್ಯಯನ ಮಾಡಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
6) ಗ್ರಾಮ ಪಂಚಾಯತಿ ಸಿಬ್ಬಂದಿಗಳಿಗೆ ತೊಂದರೆಯಾದಾಗ ಪಕ್ಕದ ಗ್ರಾಮ ಪಂಚಾಯತಿ ಗೆ ವರ್ಗಾವಣೆ ಮಾಡಲು ವಿನಂತಿಸಲಾಯಿತು.ಅದಕ್ಕಾಗಿ ಆಂತರಿಕವಾಗಿ ಚರ್ಚಿಸಿ ಇದರ ಬಗ್ಗೆ ಆದೇಶ ಮಾಡುವುದಾಗಿ ತಿಳಿಸಿದರು.
7) ರಾಜ್ಯ ಎಲ್ಲಾ ಜಿಲ್ಲೆಗಳಲ್ಲಿ ಅಕ್ರಮ ನೇಮಕಾತಿ ಇನ್ನೂ ಕೂಡ ನಡೆಯುತ್ತಿದ್ದು ಅದನ್ನು ತಡೆಯಲು ಸರಕಾರದಿಂದ ಸಾಧ್ಯವಾಗುತ್ತಿಲ್ಲವೆಂದು ಅವರ ಗಮನಕ್ಕೆ ತರಲಾಯಿತು. ಅಂತಹ ಕೆಲವಾದರೂ ಪ್ರಕರಣಗಳು ಅವರ ಗಮನಕ್ಕೆ ತಂದಲ್ಲಿ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದರು ಇದರ ಬಗ್ಗೆ ಮತ್ತೊಮ್ಮೆ ಸುತ್ತೋಲೆ ಕಳಿಸಲು ಒಪ್ಪಿಗೆ ಕೊಟ್ಟರು.
8) ಬಡ್ತಿ ಕೋಟಾದಲ್ಲಿ ಕಾರ್ಯದರ್ಶಿ ಗ್ರೇಡ್- 2 ಮತ್ತು SDAA ದಿಂದ 100% ಮಾಡಬೇಕು ಮತ್ತು ಗ್ರೇಡ್-1 ರಿಂದ PDO ಗೆ 50% ಬಡ್ತಿ ಗೆ ಅವಕಾಶ ಕೊಡಲು ವಿನಂತಿಸಲಾಯಿತು.ಇದರ ಬಗ್ಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಒಪ್ಪಿಗೆ ನೀಡಿದರು.
9) ಗ್ರಾಮ ಪಂಚಾಯತಿ ನೌಕರರು ಮೃತರಾದಲ್ಲಿ ಅಂತ್ಯಕ್ರಿಯೆ ಗೆ ರೂ.10000 ಕೊಡಲು ಮನವಿ ಸಲ್ಲಿಸಲಾಯಿತು.ಅದಕ್ಕೆ ಒಪ್ಪಿಗೆ ನೀಡಿದರು ಮತ್ತು ಆದೇಶ ಹೊರಡಿಸಲಾಗುವುದಾಗಿ ತಿಳಿಸಿದರು.
10) ಖಾಲಿ ಇರುವ ಬಿಲ್ ಕಲೆಕ್ಟರ್ ಹುದ್ದೆಗೆ ಬಡ್ತಿ ಯಾದ ಸಿಬ್ಬಂದಿಗಳಿಗೆ ಮೊದಲೇ ಅನುಮೋದನೆ ಆಗಿರುತ್ತದೆ.ಆದರೆ ಬಡ್ತಿ ನಂತರ ಮತ್ತೊಮ್ಮೆ ಅನುಮೋದನೆ ಪಡೆದುಕೊಳ್ಳುವುದು ಬೇಡ ಎಂದು ಮನವಿ ಸಲ್ಲಿಸಲಾಯಿತು.ಅನುಮೋದನೆ ಆದ ನಂತರವೇ ಬಡ್ತಿ ಮಾಡುವಾಗ ಮತ್ತೊಮ್ಮೆ ಅನುಮೋದನೆ ಪಡೆದುಕೋಳ್ಳುವುದು ಬೇಡ ಎಂಬ ನಿರ್ಧಾಕ್ಕೆ ಬರಲಾಯಿತು, ಇದರ ಬಗ್ಗೆ ಆದೇಶ ಹೊರಡಿಸಲಾಗುವುದೆಂದು ತಿಳಿಸಿದರು.
11) ಜನಸಂಖ್ಯೆಗೆ ಅನುಗುಣವಾಗಿ ಗ್ರೇಡ-2 ರಿಂದ ಗ್ರೇಡ್-1 ಪಂಚಾಯತಿ ಗಳಾಗಿ ಮೇಲ್ದರ್ಜೆಗೆ ಏರಿಸಬೇಕೆಂದು ವಿನಂತಿಸಿದಾಗ ಆರ್ಥಿಕ ಇಲಾಖೆಗೆ ಪತ್ರ ಬರೆಯುವುದಾಗಿ ಒಪ್ಪಿದರು.
12) ಎಲ್ಲಾ ಪಂಚಾಯತಿ ಗೆ SDAA ಹುದ್ದೆ ಸೃಷ್ಟಿಸಲು ವಿನಂತಿಸಿದಾಗ ಆರ್ಥಿಕ ಇಲಾಖೆಯ ಒಪ್ಪಿಗೆ ಪಡೆಯಲು ಪತ್ರ ಬರೆಯುವುದಾಗಿ ತಿಳಿಸಿದರು.
13) ಅನುಕಂಪ ನೇಮಕಾತಿ ವಿಳಂಬವಾಗುತ್ತಿದ್ದು ಜಿ.ಪಂ.ದಿಂದ ಪೂರ್ವಾನುಮೋದನೆ ಪಡೆಯುವ ಅವಶ್ಯಕತೆ ಇಲ್ಲ ಪಂಚಾಯತಿ ಯಲ್ಲಿ ನಡುವಳಿ ಮಾಡಿ ಜಿ.ಪಂ.ಅನುಮೋದನೆ ಗೆ ಕಳಿಸಬೇಕು.