

ಜಗಳೂರು :- ವೇಗವಾಗಿ ಚಲಿಸುತಿದ್ದ ಬೈಕ್ ಚಾಲಕನ ನಿಯಂತ್ರಣ ತಪ್ಪಿ ಸವಾರ ಗಂಭೀರ ಗಾಯಗೊಂಡಿರುವ ಘಟನೆ ಜಗಳೂರು ತಾಲ್ಲೂಕಿನ ಅರಕೇರೆ ಕೋಡಿ ಬಳಿ ಬುಧವಾರ ಸಂಜೆ ಸಂಭವಿಸಿದೆ.
ತಾಲ್ಲೂಕಿನ ಉರಲಕಟ್ಟೆ ಗ್ರಾವದ 55 ವರ್ಷದ ಬಸವರಾಜಯ್ಯ ಎಂಬ ವ್ಯಕ್ತಿ ಗಂಭೀರ ಗಾಯಗೊಂಡಿದ್ದು. ಈತ ಬಿಳಿಚೋಡಿನಿಂದ ಜಗಳೂರು ಕಡೆಗಡೆಗೆ ಬರುತಿದ್ದವೇಳೆ ಈ ಅವಘಡ ಸಂಭವಿಸಿದ್ದು ಘಟನೆಯಲ್ಲಿ ಗಾಯಗೊಂಡ ಬಸವರಾಜಯ್ಯ ಅವರನ್ನು ಜಗಳೂರು ಸಾರ್ವಜನಿಕ ಆಸ್ಪತ್ರೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆ ಜಿಲ್ಲಾ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ.
ಈ ಘಟನೆ ಬಿಳಿಚೋಡು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.