


1st April 2022
ಸುಧೀರ್ಘ ಕಾಲ ದೇಶದೇವೆಗೈದು ಸೇನೆಯಿಂದ ನಿವೃತ್ತರಾಗಿ ಆಗಮಿಸಿದ ದಾವಣಗೆರೆಯ ಸರಸ್ವತಿ ನಗರದ ನಿವಾಸಿಗಳಾದ ಯೋಧ ಪರಮೇಶ್ ಹಾಗೂ ಪುಟ್ಟಸ್ವಾಮಿ ಅವರಿಗೆ ನಗರದ ರೈಲ್ವೆ ನಿಲ್ದಾಣದಲ್ಲಿ ಅದ್ದೂರಿಯಾಗಿ ಸ್ವಾಗತಕೋರಲಾಯಿತು.
ಯೋಧರನ್ನು ಸ್ವಾಗತ ಮಾಡಿಕೊಂಡ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಹಾಗೂ ಮಾಜಿ ಸೈನಿಕರು ಹೂವಿನ ಹಾರ ಹಾಕಿ ಜೈಕಾರ ಕೂಗಿದರು.ಸುಧೀರ್ಘ 17 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ದಾವಣಗೆರೆಯ ಪರಮೇಶ್ ಹಾಗೂ ಪುಟ್ಟಸ್ವಾಮಿ.ಇವರಿಬ್ಬರೂ ದೇಶದ ಅಹ್ಮದ್ ನಗರ, ಸೂರತ್, ಪಂಜಾಬ್, ಕಾಶ್ಮೀರ ಗಳಲ್ಲಿ ಸೇವೆ ಸಲ್ಲಿಸಿದ್ದರು.ತೆರೆದ ವಾಹನದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಇಬ್ಬರೂ ಯೋಧರನ್ನು ಮೆರವಣಿಗೆ ಮಾಡಲಾಯಿತು.ಈ ವೇಳೆ ಮಾತನಾಡಿದ ಯೋಧ ಪರಮೇಶ್
ಅದ್ದೂರಿ ಸ್ವಾಗತ ನೋಡಿ ಅತ್ಯಂತ ಸಂತಸವಾಗುತ್ತಿದೆ. ಪ್ರತಿಯೊಬ್ಬರು ಸೇನೆಗೆ ಹೋಗಿ ದೇಶ ಭದ್ರತೆ ಮಾಡಬೇಕು.
ದೇಶ ಇದ್ದರೆ ನಾವು, ಇಲ್ಲವಾದ್ರೆ ಉಕ್ರೇನ್ ಪರಿಸ್ಥಿತಿ ಉಂಟಾಗುತ್ತದೆ.ಐದಾರು ವರ್ಷಗಳಿಂದ ಭಾರತ ಸೇನೆ ಎಂದರೆ ಬೇರೆ ದೇಶಗಳಿಗೂ ಭಯ ಇದೆ.ಆದ್ದರಿಂದ ಪ್ರತಿಯೊಬ್ಬ ಯುವಕರೂ ಕೂಡ ಸೇನೆ ಸೇರಿ ದೇಶ ಸೇವೆ ಮಾಡುವಂತೆ ಮನವಿ ಮಾಡಿದರು.