


ದಾವಣಗೆರೆ; ಕುಂದುವಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರ ಆಯ್ಕೆ ಹಳೇ ಕುಂದುವಾಡದ ಕಚೇರಿಯಲ್ಲಿ ಗುರುವಾರ ನಡೆಯಿತು.. ಅಧ್ಯಕ್ಷರಾಗಿ ಹೆಚ್ ಜಿ ಗೋಪಾಲಪ್ಪ, ಉಪಾಧ್ಯಕ್ಷರಾಗಿ ಹನುಮಂತಪ್ಪ ಅವಿರೋಧವಾಗಿ ಆಯ್ಕೆಯಾದರು. ಗೋಪಾಲಪ್ಪ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು..
ನೂತನ ಅಧ್ಯಕ್ಷರಿಗೆ, ಉಪಾಧ್ಯಕ್ಷರಿಗೆ ಗ್ರಾಮಸ್ಥರು, ಮುಖಂಡರು ಸನ್ಮಾನಿಸಿ ಗೌರವಿಸಿದರು.. ಈ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷ ಹೆಚ್ ಜಿ ಗೋಪಾಲಪ್ಪ, ಕೃಷಿಗೆ ಸಹಕಾರಿ ಸಂಘಗಳು ಅತ್ಯಮ್ಯೂಲವಾದ ಕೊಡುಗೆ ನೀಡುತ್ತಾ ಬಂದಿದೆ.. ಇಂದು ಕೃಷಿ ಪತ್ತಿನ ಸಹಕಾರಿ ಸಂಘಗಳಿಂದ ರೈತರು ಬಡ್ಡಿರಹಿತ ಸಾಲ ಪಡೆದು ವ್ಯವಸಾಯ ಮಾಡುತ್ತಿದ್ದಾರೆ, ಇಂತಹ ಸಂಘಗಳಿಂದ ರೈತರ ಬದುಕು ಹಸನಾಗಿದೆ, ಕುಂದುವಾಡ ಕೃಷಿ ಪತ್ತಿನ ಸಹಕಾರ ಹಿಂದಿನಿಂದಲೂ ಉತ್ತಮ ಕಾರ್ಯ ನಡೆಸುತ್ತಾ ಬಂದಿದ್ದು, ಮುಂದೆಯೂ ಸಹ ನನ್ನ ಅಧ್ಯಕ್ಷತೆಯಲ್ಲಿ ರೈತರಿಗೆ ಬಡವರಿಗೆ ಮತ್ತಷ್ಟು ಅನುಕೂಲ ವಾತಾವರಣ ಕಲ್ಪಿಸುವ ದಾರಿಯಲ್ಲಿ ಮುನ್ನಡೆಸುತ್ತೇವೆ ಎಂದು ಭರವಸೆ ನೀಡಿದರು..
ಈ ಸಂದರ್ಭದಲ್ಲಿ ಮಾಜಿ ಮೇಯರ್ ಹೆಚ್ ಎನ್ ಗುರುನಾಥ್, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್ ತಿಪ್ಪಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್ ಜಿ ಗಣೇಶಪ್ಪ, ಮುಖಂಡರಾದ ಮಹೇಶಪ್ಪ, ಜೆ ಮಾರುತಿ, ರೇಣುಕಮ್ಮ, ಹನುಮಂತಪ್ಪ, ಗೌಡ್ರು ಬಸವರಾಜಪ್ಪ, ಚಂದ್ರಪ್ಪ, ಮಂಜಪ್ಪ, ಧರ್ಮಪ್ಪ, ಮಹಾಂತೇಶ್, ಮಧುನಾಗರಾಜ್, ಸಹಕಾರ ಸಂಘದ ಕಾರ್ಯದರ್ಶಿ ರೇವಣಸಿದ್ದಪ್ಪ ಸೇರಿದಂತೆ ಮತ್ತಿತರರು ಇದ್ದರು..