

ದಾವಣಗೆರೆ : ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಗುರುವಾರ ನಡೆದ 2021-22ನೇ ಸಾಲಿನ ಪರಿಷ್ಕೃತ ಹಾಗೂ 2022-23ನೇ ಸಾಲಿನ ಆಯ-ವ್ಯಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ 21.56ಕೋಟಿ ರೂ.ಗಳ ಉಳಿತಾಯ Buget ಮಂಡಿಸಿದ ಪಾಲಿಕೆ ಹಣಕಾಸು ಮತ್ತು ಮೇಲ್ಮನವಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸೋಗಿ ಶಾಂತಕುಮಾರ್ ರವರು ಸಾರ್ವಜನಿಕರು ವಾಹನ ನಿಬಿಡ ಪ್ರದೇಶದಲ್ಲಿ ರಸ್ತೆ ದಾಟಲು ಪರದಾಡುವ ಸನ್ನವೇಶವಿದ್ದು, ಹಲವಾರು ಬಾರಿ ಅಪಘಾತಗಳಿಗೆ ಕಾರಣವಾಗಿರುತ್ತದೆ.
ಈ ಸಮಸ್ಯೆಯನ್ನು ನಿವಾರಿಸಲು ಪಾಲಿಕೆ ಈ ಬಾರಿ ಬಜೆಟ್‌ನಲ್ಲಿ ವಾಹನ ನಿಬಿಡ ಪ್ರದೇಶಗಳಲ್ಲಿ ರೂ. 1 ಕೋಟಿ ವೆಚ್ಚದಲ್ಲಿ ನಗರದ 2 ಸ್ಥಳಗಳಲ್ಲಿ ಅಂದರೆ Corporation ಹಾಗೂ Railway Station, ಮುಂಭಾಗ ಮತ್ತು ರೇಣುಕ ಮಂದಿರದ ಮುಂಭಾಗ Sky Walk ಗಳ ನಿರ್ಮಾಣಕ್ಕೆ ಮೀಸಲಿರಿಸಿದೆ ಎಂದು ಘೋಷಿಸಿದರು.