

ಜಗಳೂರು : ದೇಶವನ್ನು ಕಾಯುವ ನಿವೃತ್ತ ವೀರ ಯೋಧರನ್ನು ಸನ್ಮಾನಿಸಿರುವುದು ಶ್ಲಾಘನೀಯವಾದ ಕಾರ್ಯ ಜಗಳೂರು ಲಯನ್ಸ್ ಕ್ಲಬ್ ಜಿಲ್ಲೆಯಲ್ಲಿಯೇ ಅತೀದೊಡ್ಡ ಸಾಧನೆಯಾಗಿದೆ ಎಂದು ಲಯನ್ಸ್ ಜಿಲ್ಲಾ ರಾಜ್ಯಪಾಲರಾದ ಲಯನ್ ವಿಶ್ವನಾಥ್ಶಟ್ಟಿ ಹೇಳಿದರು.
ಪಟ್ಟಣದ ಜೆ.ಎಂ. ಸ್ಮಾರಕ ಇಮಾಂ ಶಾಲೆಯ ಆವರಣದಲ್ಲಿ ಲಯನ್ಸ್ ಕ್ಲಬ್ ಹಾಗೂ ಜಗಳೂರು ಅಮ್ಮ ಲಯನ್ಸ್ ಕ್ಲಬ್, ಲಿಯೋಕ್ಲಬ್ ಸಹಯೋಗದಲ್ಲಿ ನಿವೃತ್ತ ಯೋಧರ ಸನ್ಮಾನ ಸಮಾರಂಭದಲ್ಲಿ 27 ಯೋಧರನ್ನು ಸನ್ಮಾನಿಸಿ ಅವರು ಮಾತನಾಡಿದರು.
ದೇಶಕಾಯುವ ಯೋಧರನ್ನು ಕಣ್ಣಿಗೆ ನಿದ್ದೆ ಇಲ್ಲದೇ ನಾನು ನೆಮ್ಮದಿಯಾಗಿ ನಿದ್ರಿಸಲು ಅವರು ದೇಶಕ್ಕಾಗಿ ನಿದ್ದೆ ಬಿಟ್ಟು ನಮ್ಮನ್ನು ಹಾಗೂ ದೇಶವನ್ನು ರಕ್ಷಿಸುವ ಯೋಧರಿಗೆ ನಾವು ಎಷ್ಟು ಸನ್ಮಾನಿಸಿದರು ಅವರ ಋಣ ತೀರಿಸಲು ಸಾಧ್ಯವಿಲ್ಲ. ಜಗಳೂರು ಲಯನ್ಸ್ ಕ್ಲಬ್ ಅವರಿಗೆ ಹುಡುಕಿ ಸನ್ಮಾನಿಸಿರುವುದು ನಾನು ನೀಡಿರುವ ಗೌರವ ಸಮರ್ಪಣೆ ಎಂದು ಹೇಳಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಎನ್.ಟಿ.ಎರ್ರಿಸ್ವಾಮಿ ಮಾತನಾಡಿ ದೇಶಕ್ಕಾಗಿ ತಮ್ಮ ಪ್ರಾಣವನ್ನು ಲೆಕ್ಕಿಸದೇ ದೇಶದ ಗಡಿಯಲ್ಲಿ ದೇಶವನ್ನು ರಕ್ಷಿಸಲು ತಮ್ಮ ಜೀವನವನ್ನು ದೇಶಕ್ಕಾಗಿ ಮುಡುಪಾಗಿಡುವ ಯೋಧರಗೆ ನಮ್ಮ ನಮನಗಳನ್ನು ಸಲ್ಲಿಸುತ್ತೇನೆ. ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರಿದ್ದಾರೆ, ಆದರೆ ತಾಯ್ನಡಿಗಾಗಿ ತ್ಯಾಗಮಾಡಿ ಸೇವೆಗೈದ ಮಾಜಿ ಯೋಧರಿಗೆ ಸನ್ಮಾನಿಸುವ ಹಂಬಲದಿಂದ ಜಗಳೂರು ತಾಲ್ಲೂಕಿನ ಮಾಜಿ ಸೈನಿಕರಿಗೆ ಗುರತಿಸಿ ಸನ್ಮಾನಿಸುವ ಕಾರ್ಯ ಯಶಸ್ವಿಯಾಗಿ ಸಂತಸ ತಂದಿದೆ ಎಂದರು.
ಲಯನ್ಸ್ ಕ್ಲಬ್ ಹಾಗೂ ಜಗಳೂರು ಅಮ್ಮ ಲಯನ್ಸ್ ಕ್ಲಬ್, ಲಿಯೋಕ್ಲಬ್ ವತಿಯಿಂದ ಸನ್ಮಾನಿತರಾದ ನಿವೃತ್ತ ಯೋಧರಾರ ಪಿ.ಆರ್.ವೇಮಾರಡ್ಡಿ, ದೇವರಾಜ್, ಬಿ.ತಿಪ್ಪೆಸ್ವಾಮಿ, ಎನ್.ತಿಪ್ಪಯ್ಯ, ಎ.ಯು.ರಂಗಸ್ವಾಮಿ, ಎಂ.ಎಚ್.ಸತ್ಯನಾರಾಯಣ,ಮಹಮ್ಮದ್ ರಫೀಕ್, ತಿಪ್ಪೆಸ್ವಾಮಿ, ರಹಮಾನ್, ವಾಸುದೇವರಡ್ಡಿ ಜ್ಞಾನ್ಪ್ರಕಾಶ್, ಗೋವಿಂದರಡ್ಡಿ, ಮಂಜುನಾಥರಡ್ಡಿ, ಬಿ.ಟಿ.ರಾಜಣ್ಣ, ಕೆ.ಶಖರಪ್ಪ, ಎಚ್. ಎಂ.ಚಂದ್ರಶೇಖರಯ್ಯ, ಕಲ್ಲೇಶ್ವರಪ್ಪ, ಮುಸ್ಟೂರಪ್ಪ, ಆರ್.ತಿಮ್ಮಾರಡ್ಡಿ,ತಾನಾಜಿ ವಾಗ್, ಡಿ.ಹೆಚ್.ದಾದಾಪೀರ್, ಎನ್.ತಿಪ್ಪಯ್ಯ, ಮಂಜುನಾಥ್ ರಡ್ಡಿ, ಮುಕಂದ, ವೀರಮಹಿಳೆಯರುಗಳಾದ ಸುಶೀಳಮ್ಮ, ಲಕ್ಷ್ಮೀದೇವಿ ರೂಪ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ನ ಕಾರ್ಯದಶರ್ಿ ಡಾ|| ಅನಿರುದ್ದ್ರಾಘವೇಂದ್ರ, ಖಜಾಂಚಿ ಅರತಿ ಜಗದೀಶ್, ಲಯನ್ಸ್ ಕ್ಲಬ್ ಹಿರಿಯ ಧುರೀಣಾರಾದ ಜೆಎಂ.ಎಫ್. ಹುಸೇನ್ ಮಿಯ್ಯಾ ಸಾಬ್, ಪಿಎಂಜೆಎಫ್ ಕುಂದಪುರದ ರಾಜೀವ್ ಕೋಟ್ಯಾನ್ ದಾವಣಗೆರೆ ಲಯನ್ಸ್ ಕ್ಲಬ್ನ ಜಯಪ್ರಕಾಶ್ ಬಂಡಾರಿ, ಇ.ಎಂ.ಮಂಜುನಾಥ್, ವೆಂಕಟಾಚಲಮ್, ಎಚ್.ಎನ್.ಶಿವಕುಮಾರ್, ಅಮ್ಮ ಕ್ಲಬ್ ಕಾರ್ಯದಶರ್ಿ ಸವಿತಾ ಪ್ರಕಾಶ್, ಖಜಾಂಚಿ ಷಾಹೀನಾಬೇಗಂ, ಸದಸ್ಯರಾದ ಮಂಜುಳಾ,ಸುಮಯ್ಯ,ಫರಜಾನ್ ಬಾನು, ದೇವಿಕೆರೆ ತಿಪ್ಪೇಸ್ವಾಮಿ, ಜರೀನಾ ಬೇಗಂ, ಜಯಲಕ್ಷ್ಮೀಮಹೇಶ್, ಗೌರಮ್ಮ, ವಾಸೀಮ್, ಮೊಹಮ್ಮದ್ ಅಬ್ದುಲ್ ರಖೀಬ್ ಜೆ.ಎಫ್ , ನಾಗೇಶ್, ಮಂಜುನಾಥ್ ಸೇರಿದಂತೆ ಮತ್ತಿತರರು ಹಾಜರಿದ್ದರು.