ಕೊಪ್ಪಳ ಪಶು ಸಖಿಯರಿಗೆ ಒಂದು ದಿನದ ತರಬೇತಿ ಕಾರ್ಯಗಾರ…

ಕೊಪ್ಪಳ ಸೆಪ್ಟೆಂಬರ್ 04 ): ಪಶುಪಾಲನಾ ಮತ್ತು ಪಶುವದ್ಯಕೀಯ ಸೇವಾ ಇಲಾಖೆಯಿಂದ ಹಾಗೂ ಸಂಜಿವಿನಿ (ಎನ್.ಆರ್.ಎಲ್‌.ಎಂ) ಯೋಜನೆಯ ಅಡಿಯಲ್ಲಿ ಆಯ್ಕೆಯಾಗಿ ಕಾರ್ಯನಿರ್ವಹಿಸುತ್ತಿರುವ ಪಶು ಸಖಿಯರಿಗೆ ಪಶುಸಂಗೋಪನಾ ಚಟುವಟಿಕೆಗಳ ಕುರಿತು ಜಿಲ್ಲಾ ಪಂಚಾಯತ್ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಸೆಪ್ಟಂಬರ್ 02ರಂದು ಒಂದು ದಿನದ ತರಬೇತಿ ಕಾರ್ಯಾಗಾರ ನಡೆಯಿತು.


ಜಿಪಂ ಸಿಇಓ ರಾಹುಲ್ ರತ್ನಂ ಪಾಂಡೆಯ ಅವರು ಕಾರ್ಯಗಾರ ಉದ್ಘಾಟಿಸಿದರು. ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕರಾದ ಪಿ.ಎಂ.ಮಲ್ಲಯ್ಯ ಅವರು ಕಾರ್ಯಗಾರದಲ್ಲಿ ಮಾತನಾಡಿ, ಮೂಖ ಪ್ರಾಣಿಗಳ ಸೇವೆ ಮಾಡುವ ಅವಕಾಶವನ್ನು ಪಶು ಸಖಿಯರು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಸಣ್ಣ, ಅತೀ ಸಣ್ಣ ರೈತರಿಗೆ ಪಶು ಸಂಗೋಪನಾ ಬಗ್ಗೆ ಮಾಹಿತಿ ನೀಡಲು ಪಶು ಸಖಿಗಳು ಪಶು ವೈದ್ಯಾಧಿಕಾರಿಗಳಿಗೆ ಸಹಕಾರ ನೀಡಬೇಕು ಎಂದು ಹೇಳಿದರು.


ಜಿಲ್ಲಾ ಪಂಚಾಯತ್ ಸಂಜಿವಿನಿ ಎನ್.ಅರ್.ಎಲ್.ಎಂ ಘಟಕದ ಅಂಬಣ್ಣ ಅವರು ಮಾತನಾಡಿ, ಪಶು ಸಖಿಗಳು ಪಶುಸಂಗೋಪನಾ ಇಲಾಖೆಯ ಸಹಯೋಗದೊಂದಿಗೆ ಕೆಲಸ ಕಾರ್ಯಗಳನ್ನು ನಿರ್ವಹಿಸಿ, ಗ್ರಾಮೀಣ ಭಾಗದ ರೈತರಿಗೆ ಸರ್ಕಾರದ ವಿವಿಧ ಸೌಲಭ್ಯಗಳು ತಲುಪುವ ನಿಟ್ಟಿನಲ್ಲಿ ಕಾಳಜಿ ವಹಿಸಬೇಕು ಎಂದರು.
ಕಾರ್ಯಗಾರದಲ್ಲಿ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ ಮಾತನಾಡಿ, ಭಾರತ ಮೂಲತಃ ಹಳ್ಳಿಗಳ ದೇಶವಾಗಿದೆ. ಪಶುಪಲನಾ ಚಟುವಟಿಕೆಗಳು ದಿನೇದಿನೆ ಕಡಿಮೆ ಆಗುತ್ತಿರುವ ಈ ದಿನಗಳಲ್ಲಿ ಪಶುಪಾಲನೆಯಿಂದಾಗುವ ಅನುಕೂಲತೆಗಳ ಬಗ್ಗೆ ಜನತೆಗೆ ಅರಿವು ಮೂಡಿಸುವಲ್ಲಿ ಪಶು ಸಖಿಗಳ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು.


ಕಾರ್ಯಾಗಾರದಲ್ಲಿ
ತಾಲೂಕು ವ್ಯಾಪ್ತಿಯ ಪಶು ವೈದ್ಯಾಧಿಕಾರಿಗಳು, ಸಂಜೀವಿನಿ ಯೋಜನೆಯ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು, ವಲಯ ಮೇಲ್ವಿಚಾಕರು, ಸಂಜೀವಿನಿ ಒಕ್ಕೂಟಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಪಶು ಸಖಿಗಳು ಉಪಸ್ಥಿತರಿದ್ದರು.

  • Related Posts

    ವಿಜಯಪುರ ದ BLDEA ಕ್ಯಾಂಪಸ್ ಎಸ್.ಬಿ.ಐ ಶಾಖೆಯ ನೂತನ ಲಾಬಿಯನ್ನು ಉದ್ಘಾಟನೆ

    ಬಿಜಾಪುರವಿಜಯಪುರ ದ BLDEA ಕ್ಯಾಂಪಸ್’ನಲ್ಲಿ ಎಸ್.ಬಿ.ಐ ಶಾಖೆಯ ನೂತನ ಲಾಬಿಯನ್ನು ಉದ್ಘಾಟಿಸಿಸದರು, ಪ್ರಧಾನ ವ್ಯವಸ್ಥಾಪಕ(NW-2) ರಾದ ಶ್ರೀ ವಿ.ಎನ್. ಶರ್ಮ ಹಾಗೂ ಉಪ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಜ್ಯೋತಿ ಮೊಹಂತಿಯವರಿಗೆ ಶುಭಾಷಯ ಕೋರಿದರು. ಈ ಲಾಬಿಯನ್ನು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ…

    ಒಳ್ಳೆಯ ಕೆಲಸ ಮಾಡಿದರೆ ಜನ ಕೈ ಬಿಡಲ್ಲ – ಸಚಿವ ಬಿ.ಜೆಡ್ ಜಮೀರ್ ಅಹ್ಮದ್ ಖಾನ್…

    ಕೊಪ್ಪಳ ಜನವರಿ 26 : ಜನಪರವಾಗಿ ನಾವು ಒಳ್ಳೆಯ ಕೆಲಸ ಮಾಡಿದರೆ ಜನ ನಮಗೆ ಎಂದೂ ಕೈ ಬಿಡುವುದಿಲ್ಲ ಎಂದು ವಸತಿ. ವಕ್ಪ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವರಾದ ಬಿ. ಜೆಡ್. ಜಮೀರ್ ಅಹ್ಮದ್ ಖಾನ್ ಹೇಳಿದರು.ಅವರು ಭಾನುವಾರ ಕೊಪ್ಪಳ…

    Leave a Reply

    Your email address will not be published. Required fields are marked *

    error: Content is protected !!