ಒಳ್ಳೆಯ ಕೆಲಸ ಮಾಡಿದರೆ ಜನ ಕೈ ಬಿಡಲ್ಲ – ಸಚಿವ ಬಿ.ಜೆಡ್ ಜಮೀರ್ ಅಹ್ಮದ್ ಖಾನ್…

ಕೊಪ್ಪಳ ಜನವರಿ 26 : ಜನಪರವಾಗಿ ನಾವು ಒಳ್ಳೆಯ ಕೆಲಸ ಮಾಡಿದರೆ ಜನ ನಮಗೆ ಎಂದೂ ಕೈ ಬಿಡುವುದಿಲ್ಲ ಎಂದು ವಸತಿ. ವಕ್ಪ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವರಾದ ಬಿ. ಜೆಡ್. ಜಮೀರ್ ಅಹ್ಮದ್ ಖಾನ್ ಹೇಳಿದರು.
ಅವರು ಭಾನುವಾರ ಕೊಪ್ಪಳ ನಗರಸಭೆ ವತಿಯಿಂದ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಕರ್ತರು ಹಾಗೂ ಪೌರಸೇವಾ ನೌಕರ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಹಕ್ಕು-ಪತ್ರಗಳನ್ನು ವಿತರಣೆಮಾಡಿ ಮಾತನಾಡಿದರು.


ಮಾಧ್ಯಮ ಸ್ನೇಹಿತರು ಹಾಗೂ ಪೌರ ಸೇವಾ ಕಾರ್ಮಿಕರ ಹಕ್ಕು-ಪತ್ರಗಳ ವಿತರಣೆಯ ಹತ್ತು ವರ್ಷಗಳ ಕನಸು ಈಗ ನನಸಾಗಿದೆ. ಅವರಿಗೆ ಸೈಟ್ ಕೊಟ್ಟರೆ ಸಾಲದು ಕುಡಿಯುವ ನೀರಿನ ವ್ಯವಸ್ಥೆ. ಎಲೆಕ್ಟ್ರಸಿಟಿ ಆಗಬೇಕು ಅಂದಾಗ ಸೈಟ್ ನೀಡಿದ್ದಕ್ಕು ಸಾರ್ಥಕ ಆಗುತ್ತದೆ ಮತ್ತು ಅದರ ಉಪಯೋಗ ಸಹ ಆಗುತ್ತದೆ. ಇದಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿಯಿಂದ ಸ್ವಲ್ಪ ಹಣ ನೀಡಿ ನನ್ನ ಇಲಾಖೆಯಿಂದಲು ಅನುದಾನ ಕೊಡುತ್ತೆನೆ ಎಂದು ಕೊಪ್ಪಳ ಶಾಸಕರಿಗೆ ಹೇಳಿದರು.


ನಮ್ಮ ಇಲಾಖೆಯಿಂದ ಮನೆ ಇಲ್ಲದವರ ಸರ್ವೆಯನ್ನು ಮಾಡಿಸಿದ್ದೆವೆ. ನಾವು ಯಾವುದೇ ಜಾತಿ ಬೇದ ಮಾಡದೆ ಎಲ್ಲಾ ಬಡ ಜನರಿಗೆ ಮನೆಗಳನ್ನು ಕೊಡುತ್ತಿದ್ದೆವೆ. ಸನ್ಮಾನ್ಯ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರ ವಹಿಸಿಕೊಂಡ ಒಂದು ತಿಂಗಳಲ್ಲಿ ಬಡವರಿಗಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದರು. ಕಳೆದ ವರ್ಷ ಫೆಬ್ರುವರಿಯ 36,780 ಮನೆಗಳನ್ನು ರಾಜ್ಯದ ಬಡವರಿಗೆ ಕೊಟ್ಟಿದ್ದೆವೆ ಎಂದು ಹೇಳಿದರು.
ಎಲ್ಲರಿಗೂ ಗಣರಾಜೋತ್ಸವದ ಶುಭಾಶಯಗಳು. ಅಂಬೇಡ್ಕರ್ ಅವರು ಎಲ್ಲರಿಗೂ ಸಮಾನ ಹಕ್ಕುಗಳನ್ನು ಸಿಗಲಿ ಎಂದು ಮೂರು ವರ್ಷಗಳ ಕಾಲ ಶ್ರಮ ಪಟ್ಟು ಸಂವಿಧಾನ ರಚಿಸಿ ಎಲ್ಲರಿಗೂ ಸಮಾನ ಹಕ್ಕುಗಳನ್ನು ಸಿಗುವ ಹಾಗೆ ಮಾಡಿದರು. ಅಂಬೇಡ್ಕರ್ ದಲಿತ ಮುಖಂಡ ಮಾತ್ರವಲ್ಲ ಅವರೊಬ್ಬ ಮಾಹನ್ ವ್ಯಕ್ತಿ ಎಲ್ಲಾ ಸಮಾಜದ ನಾಯಕರಾಗಿದ್ದಾರೆ. ಹಿಂದು. ಮುಸ್ಲಿಂ. ಶಿಖ್. ಇಸಾಯಿ ನಾವೆಲ್ಲರೂ ಸಹೋದರರು ಈ ದೇಶಕೊಸ್ಕರ ನಾವೆಲ್ಲರೂ ಒಟ್ಟಾಗಿ ಬಾಳಬೇಕಿದೆ ಎಂದು ಹೇಳಿದರು.
ಮುಖ್ಯ ಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಸವರಾಜ ರಾಯರೆಡ್ಡಿ ಮಾತನಾಡಿ, ವಸತಿ ಸಚಿವ ಜಮೀರ್ ಅಹ್ಮದ್ ಅವರಿಗೆ ಬಡವರ ಬಗ್ಗೆ ವಿಶೇಷ ಕಾಳಜಿ ಇದೆ. ಹೆಚ್ಚು ಸೈಟಗಳನ್ನು ಬಡವರಿಗೆ ಕೊಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. 30 ವರ್ಷಗಳ ಹಿಂದೆ ನಾನು ವಸತಿ ಸಚಿವನಾಗಿದ್ದಾಗ ಮನೆ ಇಲ್ಲದವರ ಸರ್ವೆ ಮಾಡಿಸಿದ್ದೆ. ಮುಖ್ಯ ಮಂತ್ರಿ ಸಿದ್ರಾಮಯ್ಯನವರು ಬಡವರಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ಒಂದು ವರ್ಷಕ್ಕೆ 54 ಸಾವಿರ ಕೋಟಿ ಖರ್ಚಾಗುತ್ತಿದೆ ಎಂದರು.


ಶಾಲಾ- ಮಕ್ಕಳಿಗೆ ಪಠ್ಯ ಪುಸ್ತಕ, ಬಟ್ಟೆ, ಹಾಲು, ಶೂ., ಮೊಟ್ಟೆ, ಚಕ್ಕಿ, ಬಾಳೆಹಣ್ಣು ವಿತರಣೆ ಹಾಗೂ ಅಂಗನವಾಡಿಗಳು ಸೇರಿದಂತೆ ಇವೆಲ್ಲಕ್ಕೆ 1 ಲಕ್ಷ 5 ಸಾವಿರ ಕೋಟಿ ಖರ್ಚು ಮಾಡುತ್ತಿದ್ದೆವೆ. ನಮಗೆ ಹಣದ ಯಾವುದೇ ಸಮಸ್ಯೆ ಇಲ್ಲ. ದೇಶದಲ್ಲಿ ಯಾವುದೇ ರಾಜ್ಯದಲ್ಲಿ ಇಷ್ಟೊಂದು ಜನಪರ ಕಾರ್ಯ ಯಾರು ಮಾಡದನ್ನು ಸಿದ್ರಮಯ್ಯನವರು ಮಾಡುತ್ತಿದ್ದಾರೆ ಎಂದು ಹೇಳಿದರು.


ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಜಮೀರ್ ಅಹ್ಮದ್ ಖಾನ್ ಅವರು ವಸತಿ ಸಚಿವರಾದ ಮೇಲೆ ಹಲವಾರು ಬದಲಾವಣೆ ಈ ಇಲಾಖೆಯಲ್ಲಿ ತಂದಿದ್ದಾರೆ. ಹಿಂದೆ ನಜೀರ ಸಾಬ ಹೇಗೆ ಎಲ್ಲಾ ಕಡೆ ಬೋರವೆಲ್ ಕೊರೆದು ನೀರಸಾಬ ಎಂದು ಹೆಸರಾಗಿದ್ದರು. ಹಾಗೇ ಜಮೀರ್ ಅಹ್ಮದ್ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಪತ್ರಕರ್ತರು ಹಾಗೂ ಪೌರ ಕಾರ್ಮಿಕರ ಹಕ್ಕು-ಪತ್ರಗಳ ವಿತರಣೆಗೆ ಬರಬೇಕೆಂದು ನನ್ನ ಮತ್ತು ಪತ್ರಕರ್ತರ ಮನವಿ ಮೇರೆಗೆ ಸಚಿವರು ಬಂದಿರುವುದಕ್ಕೆ ಎಲ್ಲರ ಪರವಾಗಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೆನೆ. ಅಲ್ಪಸಂಖ್ಯಾತರಿಗೂ ಭೂ ಒಡೆತನ ಯೋಜನೆಗೆ ಪರಿಗಣಿಸಬೇಕು ಎಂದು ಹೇಳಿದರು.
ಕೊಪ್ಪಳ ಸಂಸದರಾದ ಕೆ.ರಾಜಶೇಖರ ಬಸವರಾಜ ಹಿಟ್ನಾಳ ಹಾಗೂ ಕೊಪ್ಪಳ ನಗರಸಭೆ ಅಧ್ಯಕ್ಷರಾದ ಅಮ್ಜದ್ ಪಟೇಲ್ ಅವರು ಕಾರ್ಯಕ್ರಮದಲ್ಲಿ ಮಾತನಾಡಿದರು. ಪತ್ರಕರ್ತರು ಹಾಗೂ ಪೌರ ಸೇವಾ ನೌಕರ ಫಲಾನುಭವಿಗಳಿಗೆ ಸಾಂಕೇತಿಕವಾಗಿ ನಿವೇಶನ ಹಕ್ಕು-ಪತ್ರಗಳ ವಿತರಣೆ ಮಾಡಲಾಯಿತು.


ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ವಕ್ಪ್ ಬೋರ್ಡ್ ಅಧ್ಯಕ್ಷರಾದ ಕೆ.ಅನ್ವರ ಭಾಷಾ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕೆ.ಶ್ರೀನಿವಾಸ್ ಗುಪ್ತಾ, ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ಎನ್.ಎಫ್ ಇಮಾಮ್ ನಿಯಾಜಿ, ಕೊಪ್ಪಳ ನಗರಸಭೆ ಉಪಾಧ್ಯಕ್ಷರಾದ ಅಶ್ವಿನಿ ಭಗತ್ ಗದುಗಿನಮಠ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಕ್ಬರ ಪಾಶಾ ಪಲ್ಟನ್, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಕೊಪ್ಪಳ ತಹಶಿಲ್ದಾರ ವಿಠ್ಠಲ ಚೌಗಲಾ, ಕಾರ್ಯನಿರತ ಪತ್ರಕರ್ತರ ಸಂಘದ ಕೊಪ್ಪಳ ಜಿಲ್ಲಾಧ್ಯಕ್ಷರಾದ ಹನುಮಂತಪ್ಪ ಹಳ್ಳಿಕೇರಿ, ಕೊಪ್ಪಳ ಮೀಡಿಯಾ ಕ್ಲಬ್ ಅಧ್ಯಕ್ಷರಾದ ರವಿಂದ್ರ ವಿ.ಕೆ., ಕೊಪ್ಪಳ ನಗರಸಭೆ ಪೌರಾಯುಕ್ತರಾದ ಗಣಪತಿ ಪಾಟೀಲ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷರಾದ ಮಂಜುನಾಥ ಗೊಂಡಬಾಳ, ನಗರಸಭೆ ಹಾಗೂ ಸ್ಥಾಯಿ ಸಮಿತಿ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ಇತರೆ ಹಲವಾರು ಜನರು ಉಪಸ್ಥಿತರಿದ್ದರು.

  • Related Posts

    ವಿಜಯಪುರ ದ BLDEA ಕ್ಯಾಂಪಸ್ ಎಸ್.ಬಿ.ಐ ಶಾಖೆಯ ನೂತನ ಲಾಬಿಯನ್ನು ಉದ್ಘಾಟನೆ

    ಬಿಜಾಪುರವಿಜಯಪುರ ದ BLDEA ಕ್ಯಾಂಪಸ್’ನಲ್ಲಿ ಎಸ್.ಬಿ.ಐ ಶಾಖೆಯ ನೂತನ ಲಾಬಿಯನ್ನು ಉದ್ಘಾಟಿಸಿಸದರು, ಪ್ರಧಾನ ವ್ಯವಸ್ಥಾಪಕ(NW-2) ರಾದ ಶ್ರೀ ವಿ.ಎನ್. ಶರ್ಮ ಹಾಗೂ ಉಪ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಜ್ಯೋತಿ ಮೊಹಂತಿಯವರಿಗೆ ಶುಭಾಷಯ ಕೋರಿದರು. ಈ ಲಾಬಿಯನ್ನು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ…

    ಗೌರಿ ಗಣೇಶ ಹಬ್ಬ, ಈದ್ ಮಿಲಾದ್, ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಯಿಂದ ಶಾಂತಿ ಸಭೆ

    ಕೊಪ್ಪಳ ಸೆಪ್ಟೆಂಬರ್ 16 : ಸೌಹಾರ್ದತೆ ಸಂದೇಶದ ಗೌರಿ ಗಣೇಶ ಹಬ್ಬ ಮತ್ತು ಭಾವೈಕ್ಯತೆ ಸಂದೇಶದ ಈದ್ ಮಿಲಾದ್ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 16ರಂದು ಶಾಂತಿ ಸಭೆ ನಡೆಯಿತು. ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಯಿಂದ ಜಿಲ್ಲಾಡಳಿತ…

    Leave a Reply

    Your email address will not be published. Required fields are marked *

    error: Content is protected !!