ಕಿಡಿಗೇಡಿಗಳಯಿಂದ ಗದ್ದೆಗೆ ಸೇರಿದ ಕೆಮಿಕಲ್ ನೀರು; ಬೆಳೆದಿದ್ದ ಬೆಳೆ ಸಂಪೂರ್ಣ ನಾಶ,,,

ದಾವಣಗೆರೆ ; ಕಿಡಿಗೇಡಿಗಳಯಿಂದ ಆಸಿಡ್ ಮಿಶ್ರಿತ ಕೆಮಿಕಲ್ ನೀರು ಸೇರ್ಪಡೆಯಾದ ಪರಿಣಾಮ ಬೆಳೆದಿದ್ದ ಬೆಳೆ ಸಂಪೂರ್ಣ ನಾಶವಾದ ಘಟನೆ ದಾವಣಗೆರೆ ಹೊರವಲಯದ ಬಾತಿ ಕೆರೆ ಪಕ್ಕದಲ್ಲಿರುವ ಭತ್ತದ ಜಮೀನುಗಳಲ್ಲಿ ನಾಟಿ ಮಾಡಿದ್ದ ಪೈರು ಸುಟ್ಟು ಹೋಗಿದೆ.

ಬಾತಿ ಗ್ರಾಮದ ವಾಸು ಎನ್ನುವರಿಗೆ ಸೇರಿದ ಒಂದು ಎಕರೆ ಭತ್ತದ ಗದ್ದೆ ಸಂಪೂರ್ಣ ಹಾಳಾಗಿದ್ದು, ಈ ಗದ್ದೆಗೆ ಕೆಮಿಕಲ್ ನೀರು ಸೇರ್ಪಡೆಯಾದ ಹಿನ್ನಲೆ ನಾಟಿ ಮಾಡಿದ್ದ ಪೈರು ಕಪ್ಪು ಬಣ್ಣಕ್ಕೆ ತಿರುಗಿ, ಸುಟ್ಟ ರೀತಿ ಕಾಣುತ್ತಿದೆ. ಇದೆಕ್ಕೆಲ್ಲ ಕಾರಣ ಈ ಜಮೀನಿಗೆ ಹಾಯಿಸುವ ನೀರು, ಭದ್ರ ಚಾನಲ್​ನಿಂದ ಬರುತ್ತಿದ್ದು, ಆ ಭದ್ರ ಚಾನಲ್​ಗೆ ಆಸಿಡ್ ಮಿಶ್ರಿತ ಕೆಮಿಕಲ್​ನ್ನು ಟ್ಯಾಂಕರ್ ಮೂಲಕ ಬಿಟ್ಟಿದ್ದಾರೆ ಇದರಿಂದ ಚಾನಲ್ ನೀರು ಸಂಪೂರ್ಣ ಕಲುಷಿತವಾಗಿದೆ‌‌.

ಈ ನೀರು ವಾಸು ಅವರ ಜಮೀನಿಗೆ ಹರಿದಿದ್ದು, ಇದರಿಂದ ಭತ್ತದ ಪೈರು ಸಂಪೂರ್ಣ ಹಾಳಾಗಿದೆ‌. ರಾತ್ರೋರಾತ್ರಿ ಟ್ಯಾಂಕರ್​ಗಳಲ್ಲಿ ತಂದು ಸುರಿದು ಹೋಗುತ್ತಾರೆ. ಇದರಿಂದ ಭದ್ರಾ ಚಾನಲ್​ನ ನೀರು ಕಲುಷಿತವಾಗಿ ಮೀನುಗಳೆಲ್ಲ ಸಾವನ್ನಪ್ಪಿವೆ. ಇದೇ ನೀರು ರೈತರ ಜಮೀನುಗಳಿಗೆ ಹೋಗಿ ಇಡೀ ಭತ್ತದ ಗದ್ದೆ ಕೆಟ್ಟ ವಾಸನೆ ಜೊತೆಗೆ ಜಿಡ್ಡು ಜಿಡ್ಡಾದ ನೀರು ನಿಂತಿದೆ.

ಇದೀಗ ಈ ನೀರನ್ನು ರೈತರು ಪಂಪ್ ಮೂಲಕ ಹೊರ ಹಾಕುತ್ತಿದ್ದಾರೆ. ಅಲ್ಲದೆ, ಕೆಮಿಕಲ್ ನೀರು ನಿಂತ ಭೂಮಿ ಕೂಡ ಬರಡು ಭೂಮಿಯಾಗುವ ಅತಂಕವನ್ನು ರೈತರು ವ್ಯಕ್ತಪಡಿಸುತ್ತಿದ್ದಾರೆ.

ದಾವಣಗೆರೆ ಹತ್ತಿರ ಜಮೀನು ಇದೆ ಎನ್ನುವ ಖುಷಿಗಿಂತ ಇಲ್ಲಿ‌ನ ರೈತರಿಗೆ ಅತಂಕವೇ ಹೆಚ್ಚಾಗಿದೆ. ಈಗಾಗಲೇ 20 ಸಾವಿರಕ್ಕೂ ಹೆಚ್ವು ಹಣ ಖರ್ಚು ಮಾಡಿ ಬೆಳೆ ಬೆಳೆದಿದ್ದ ರೈತನಿಗೆ, ಕೆಮಿಕಲ್ ನೀರಿನಿಂದ ಇಡೀ ಬೆಳೆ ಹಾಳಾಗುವ ಸ್ಥಿತಿ ತಲುಪಿದೆ. ಏನೇ ಆಗಲಿ ಈ ರೀತಿ ರೈತರಿಗೆ ತೊಂದರೆ ಕೊಡುವ ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆ ಆಗಲಿ ಎಂದು ಪೊಲೀಸರಿಗೆ ರೈತರು ಮನವಿ ಮಾಡಿಕೊಂಡಿದ್ದಾರೆ.

  • Related Posts

    ದಾವಣಗೆರೆಯ ಜಿಲ್ಲಾ ಪೊಲೀಸ್ ಚಿಣ್ಣರ ಅಂಗಳ ಶಾಲೆಗೆ ಭೇಟಿ ನೀಡಿದ ಡಾ. ಜಿ. ಪರಮೇಶ್ವರ್

    ಸನ್ಮಾನ್ಯ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಅವರು ದಾವಣಗೆರೆ ನಗರಕ್ಕೆ ವಿವಿಧ ಕಾರ್ಯಕ್ರಮಗಳ ಬೇಟಿ ನೀಡಿದ ಸಂದರ್ಭದಲ್ಲಿ ಪಿಜೆ ಬಡಾವಣೆಯ ಪೊಲೀಸ್ ವಸತಿ ಗೃಹ ಸಮುಚ್ಛಯದ ಆವರಣದಲ್ಲಿರುವ ದಾವಣಗೆರೆ ಜಿಲ್ಲಾ ಪೊಲೀಸ್ ಚಿಣ್ಣರ ಅಂಗಳ ಶಾಲೆಗೆ ಭೇಟಿ ನೀಡಿದರು. ನಂತರ…

    “ವಿಷ ಕೊಡಿ ಇಲ್ಲವೇ ಯೂರಿಯಾ ಕೊಡಿ” ದಾವಣಗೆರೆಯಲ್ಲಿ ಬಿಜೆಪಿ ಇಂದ ಪ್ರತಿಭಟನೆ

    ದಾವಣಗೆರೆ ಜಿಲ್ಲಾ ಭಾರತೀಯ ಜನತಾ ಪಕ್ಷದ ವತಿಯಿಂದ ದಾವಣಗೆರೆಯಲ್ಲಿ ಪ್ರತಿಭಟನೆ ಮಾಡಲಾಯಿತು. ರೈತರಿಗೆ ಸಮಯಕ್ಕೆ ಸರಿಯಾಗಿ ಯೂರಿಯಾ ಗೊಬ್ಬರ ಕೊಡದೇ, ರೈತರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆ ಹಾಗೂ ತನ್ನ ತಪ್ಪನ್ನು ಕೇಂದ್ರ ಸರ್ಕಾರದ…

    Leave a Reply

    Your email address will not be published. Required fields are marked *

    error

    Enjoy this blog? Please spread the word :)

    error: Content is protected !!