

ಶಾಸಕ ಶಿವಗಂಗಾ ಬಸವರಾಜ್, ಸಚಿವರು ಕೈಗೆ ಸಿಗಲ್ಲ, ಫೋನೂ ರಿಸಿವ್ ಮಾಡಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಸೇರಿದಂತೆ ಹಲವು ಶಾಸಕರ ಮೇಲೆ ಅಸಮಧಾನ ಹೊರ ಹಾಕಿದ್ರು, ನನಗೆ ರೇಣುಕಾಚಾರ್ಯ ಅವರ ಹಾಗೆ ಸಚಿವರ ಬಾಗಿಲು ಕಾಯೋದು ಆಗೋದಿಲ್ಲ, ಶಾಸಕರ ಅಭಿವೃದ್ಧಿ ವಿಚಾರಕ್ಕೆ ಕರೆ ಮಾಡಿದಾಗ ಅದಕ್ಕೆ ರೆಸ್ಪಾನ್ಸ್ ಮಾಡಬೇಕು, ಕಾಂಗ್ರೆಸ್ ನಲ್ಲಿ 135 ಶಾಸಕರು ಇದ್ದೇವೆ, 135 ಶಾಸಕ ನಂಬರ್ ಹಿಡಿಯುವಷ್ಟು ಎಲ್ಲರ ಮೊಬೈಲ್ ಜಾಗವಿರುತ್ತದೆ, ಎಲ್ಲರ ನಂಬರ್ ಸೇವ್ ಮಾಡಿಕೊಂಡು ಅದಕ್ಕೆ ರೆಸ್ಪಾನ್ಸ್ ಮಾಡಬೇಕು, ಅವರು ತಮ್ಮ ತಪ್ಪನ್ನ ತಿದ್ದಿಕೊಳ್ಳಬೇಕು ಅಂತ ಅವರಿಗೆ ಹೇಳಿದ್ದೇನೆ, ಅವರು ಮತ್ತೆ ತಮ್ಮ ತಪ್ಪನ್ನು ತಿದ್ದಿಕೊಳ್ಳದೆ ಇದ್ದರೆ ಮತ್ತೆ ಮಾಧ್ಯಮದ ಮುಂದೆ ಬರುತ್ತೇನೆ ಎಂದು ಬಹಿರಂಗವಾಗಿಯೇ ಚನ್ನಗಿರಿಯಲ್ಲಿ ಶಾಸಕ ಬಸವರಾಜ್ ಶಿವಗಂಗಾ ಅಸಮಾಧಾನ ಹೊರ ಹಾಕಿದ್ದರು..

ಚನ್ನಗಿರಿ ತಾಲೂಕಿನ ಹಿರೇಗಂಗೂರ ಗ್ರಾಮದಲ್ಲಿ ಅಂಬೇಡ್ಕರ್ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಕ್ಲಾಸ್ ತೆಗೆದುಕೊಂಡ ಸಚಿವರು, ತುಂಬಿದ ಸಭೆಯಲ್ಲೇ ತೀಕ್ಷವಾಗಿ ಮಾತನಾಡಿದರು, ಸಚಿವರು ಕೈಗೆ ಸಿಗೋದಿಲ್ಲ ಎಂದು ಶಾಸಕರು ಆರೋಪಿಸಿದ್ದಾರೆ, ಈಗ ನಿಮಗಲ್ಲ ಬೇರೆ ಸಚಿವರಿಗೆ ಹೇಳಿದ್ದು ಎಂದು ಹೇಳಿದ್ದಾರೆ, ಬಿಜೆಪಿ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಭೇಟಿಯಾಗಿದ್ದೆ ಮೂವರನ್ನ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಮತ್ತು ನನ್ನನ್ನು, ಈ ಮೂವರಿಗೆ ಹೇಳಿರಬೇಕು, ಡಿಕೆ ಶಿವಕುಮಾರ್ ಗೆ ಹೇಳಿದ್ರಾ ಅಥವಾ ನನ್ನ ಮೇಲೆ ಆರೋಪ ಮಾಡಿದ್ರಾ ಗೊತ್ತಿಲ್ಲ, ಹೀಗ ನಿಮಗೆ ಅಲ್ಲ ಅಣ್ಣ ಎಂದು ಹೇಳಿದ್ದಾನೆ ಎಂದು ವೇದಿಕೆ ಮೇಲೆ ಕಾಂಗ್ರೆಸ್ ನೂತನ ಶಾಸಕ ಬಸವರಾಜ್ ಗೆ ಸಚಿವ ಮಲ್ಲಿಕಾರ್ಜುನ್ ಕ್ಲಾಸ್ ತೆಗೆದುಕೊಂಡರು,

ಬಸವರಾಜ್ ಬಹಳ ಬೇಗ ಶಾಸಕ ಆಗಿದ್ದಾನೆ, ಯುವಕ, ಬಹಳ ಆ್ಯಕ್ಟಿವ್ ಇದ್ದಾನೆ, ದಿಢೀರ್ ಮೆಟ್ಟಿಲು ಹತ್ತೋಕೆ ಹೋಗ್ತಿದ್ದಾನೆ, ಒಂದೊಂದೆ ಮೆಟ್ಟಿಲು ಹತ್ತೋದು ಒಳ್ಳೆಯದು, ಸಚಿವರು ಕಾಲ್ ರಿಸೀವ್ ಮಾಡಲ್ಲ, ಕೈಗೆ ಸಿಗಲ್ಲ ಅಂತಾನೆ, ಯಾವ್ ಸಚಿವರು ಅಂತ ಕೇಳಿದ್ರೆ ನೀವ್ ಅಲ್ಲ ಅಂತಾನೆ, ಏನ್ ನನಗೆ ಹೇಳಿದ್ನೋ, ಡಿಕೆಶಿಗೋ, ಸಿಎಂಗೋ ಗೊತ್ತಿಲ್ಲ, ಯಾಕಂದ್ರೆ ರೇಣುಕಾಚಾರ್ಯ ಭೇಟಿಯಾಗಿದ್ದು ನನಗೆ, ಡಿಕೆಶಿ, ಸಿಎಂಗೆ, ಜನರ ಜೊತೆ ಒಳ್ಳೆಯ ಕೆಲಸ ಮಾಡು, ಒಳ್ಳೆಯ ಶಾಸಕನಾಗು ಎಂದು ಮಲ್ಲಿಕಾರ್ಜುನ್ ವೇದಿಕೆ ಮೇಲೆ ಪಾಠ ಹೇಳಿದ್ದಾರೆ..