
ದಾವಣಗೆರೆ ಜಿಲ್ಲಾ ಭಾರತೀಯ ಜನತಾ ಪಕ್ಷದ ವತಿಯಿಂದ ದಾವಣಗೆರೆಯಲ್ಲಿ ಪ್ರತಿಭಟನೆ ಮಾಡಲಾಯಿತು.

ರೈತರಿಗೆ ಸಮಯಕ್ಕೆ ಸರಿಯಾಗಿ ಯೂರಿಯಾ ಗೊಬ್ಬರ ಕೊಡದೇ, ರೈತರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆ ಹಾಗೂ ತನ್ನ ತಪ್ಪನ್ನು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಶ್ರೀ ರಾಜಶೇಖರ್ ನಾಗಪ್ಪ ರವರು, , ಮಾಜಿ ಶಾಸಕರಾದ ಶ್ರೀ ಬಸವರಾಜ್ ನಾಯ್ಕ್ ರವರು, ಮಾಜಿ ಮೇಯರ್ ಶ್ರೀ ಅಜಯ್ ಕುಮಾರ್ ರವರು, ಯುವ ಮುಖಂಡರಾದ ಲೋಕಿಕೆರೆ ನಾಗರಾಜ್ ಅವರು ಹಾಗೂ ಶ್ರೀ ಚಂದ್ರಶೇಖರ ಪೂಜಾರ್ ರವರು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಧನಂಜಯ್ ಕಡ್ಲೇಬಾಳು , ಶ್ರೀ ಅನಿಲ್ ಕುಮಾರ್ ನಾಯ್ಕ್, ಶ್ರೀ ಐರಾಣಿ ಅಣ್ಣೇಶ್ ರವರು, ಕಾರ್ಯಕರ್ತರು ಸೇರಿದಂತೆ ರೈತ ಭಾಂದವರು ಉಪಸ್ಥಿತರಿದ್ದರು










