ನೂತನ ಎಸ್ಪಿ ಆಗಿ ಉಮಾ ಪ್ರಶಾಂತ್ ಅಧಿಕಾರ ಸ್ವೀಕಾರ…

ದಾವಣಗೆರೆ(ಆ 25)..ದಾವಣಗೆರೆ ಜಿಲ್ಲೆಯ ನೂತನ ಎಸ್‌,ಪಿ ಯಾಗಿ ಉಮಾ ಪ್ರಶಾಂತ್ ರವರು ಇಂದು ಅಧಿಕಾರವನ್ನು ಸ್ವೀಕರಿಸಿದ್ದಾರೆ, ದಾವಣಗೆರೆಯ ಎಸ್ ಪಿ ಡಾ ಅರುಣ್ ರವರು ಕಾರ್ಯನಿರ್ವಹಿಸುತ್ತಿದ್ದು ಗುಲ್ಬರ್ಗ ಜಿಲ್ಲೆಗೆ ಕಾರಣಾಂತರಗಳಿಂದ ವರ್ಗಾವಣೆಗೊಂಡಿದ್ದರಿಂದ ಅವರ ಜಾಗಕ್ಕೆ ಚಿಕ್ಕಮಗಳೂರು ಜಿಲ್ಲೆಯ ಉಮಾ ಪ್ರಶಾಂತ್ ರವರು ದಾವಣಗೆರೆಯ ನೂತನ ಎಸ್,ಪಿ ಯಾಗಿ ಅಧಿಕಾರವನ್ನು ಇಂದು ಸ್ವೀಕರಿಸಿದರು,

ಈ ಹಿಂದೆ ಇದ್ದ ಎಸ್ ಪಿ ಅರುಣ್ ರವರು ಕೆಲವು ದಿನಗಳಲ್ಲಿ ಹಲವಾರು ಚಟುವಟಿಕೆಗಳಿಗೆ ಕಡಿವಾಣ ಹಾಕಿದ್ದರು ಆದರೆ ಕಾರಣಾಂತರಗಳಿಂದ ಇಂದು ಅವರನ್ನು ಗುಲ್ಬರ್ಗ ಜಿಲ್ಲೆಯ ಎಸ್ ಪಿ ಯಾಗಿ ವರ್ಗಾವಣೆ ಮಾಡಲಾಗಿದ್ದು ಅವರ ಜಾಗಕ್ಕೆ ಚಿಕ್ಕಮಂಗಳೂರು ಜಿಲ್ಲೆಯಲ್ಲಿ ಖಡಕ್ ಎಸ್,ಪಿ ಯಾಗಿ, ಅಪರಾಧಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದು, ಟ್ರಾಫಿಕ್ ಸೇರಿದಂತೆ ಬೇರೆ ಬೇರೆ ರೀತಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದರು. ಚಿಕ್ಕಮಂಗಳೂರಿನಲ್ಲಿ ಕಾರ್ಯವೈಖರ್ಯಗಳಿಂದಲೇ ಜನರು ಮನಸು ಗೆದ್ದಿದ್ದರು ಇದೀಗ ದಾವಣಗೆರೆಯ ನೂತನ ಎಸ್‌.ಪಿ ಯಾಗಿ ಇಂದು ಅಧಿಕಾರ ಸ್ವೀಕರಿಸಿದ್ದಾರೆ

ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು ಪ್ರತಿಯೊಂದು ಜಿಲ್ಲೆಯಲ್ಲಿ ಅದರದೇ ಆದಂತಹ ಸಮಸ್ಯೆಗಳು ಕಾರ್ಯವೈಖರಿಗಳು ಇದ್ದೇ ಇರುತ್ತದೆ ನಾನು ಮೊದಲಿಗೆ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಹೆಚ್ಚು ಗಮನ ಹರಿಸುತ್ತೇನೆ. ಜೊತೆಗೆ ಯಾವುದೇ ಕ್ರೈಂ ಆಗದಂತೆ ತಡೆಯುತ್ತೇನೆ, ಜೊತೆಗೆ ರಾಷ್ಟ್ರೀಯ ಹೆದ್ದಾರಿ ದಾವಣಗೆರೆ ಸಮೀಪ ಇರುವುದರಿಂದ ಹಲವಾರು ಆಕ್ಸಿಡೆಂಟ್ ಆಗುತ್ತವೆ ಅದರ ಬಗ್ಗೆಯೂ ಹೆಚ್ಚು ಗಮನ ಹರಿಸುತ್ತೇನೆ.

ಜೊತೆಗೆ ಮಹಿಳಾ ಮತ್ತು ಮಕ್ಕಳ ದೌರ್ಜನಕ್ಕೆ ಸಂಬಂಧಪಟ್ಟಂತೆ ಕೇಸ್ ಗಳಾಗಲಿ ಅಥವಾ ಸಮಸ್ಯೆಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತೇನೆ, ಎಲ್ಲದಕ್ಕೂ ಮಿಗಿಲಾಗಿ ದಾವಣಗೆರೆಯಲ್ಲಿ ಉತ್ತಮ ಅಧಿಕಾರಿಗಳು ಇದ್ದು ಜನಸ್ನೇಹಿ ಪೊಲೀಸ್ ಮಾಡಲು ಮುಂದಾಗಿದ್ದು ಜನರ ಸಹಕಾರದೊಂದಿಗೆ ಒಳ್ಳೆ ರೀತಿಯಲ್ಲಿ ಕಾನೂನು ಬದ್ಧವಾಗಿ ಕೆಲಸ ಮಾಡುತ್ತೇನೆ, ಎಂದು ತಿಳಿಸಿದ್ದಾರೆ

  • Related Posts

    ದಾವಣಗೆರೆಯ ಜಿಲ್ಲಾ ಪೊಲೀಸ್ ಚಿಣ್ಣರ ಅಂಗಳ ಶಾಲೆಗೆ ಭೇಟಿ ನೀಡಿದ ಡಾ. ಜಿ. ಪರಮೇಶ್ವರ್

    ಸನ್ಮಾನ್ಯ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಅವರು ದಾವಣಗೆರೆ ನಗರಕ್ಕೆ ವಿವಿಧ ಕಾರ್ಯಕ್ರಮಗಳ ಬೇಟಿ ನೀಡಿದ ಸಂದರ್ಭದಲ್ಲಿ ಪಿಜೆ ಬಡಾವಣೆಯ ಪೊಲೀಸ್ ವಸತಿ ಗೃಹ ಸಮುಚ್ಛಯದ ಆವರಣದಲ್ಲಿರುವ ದಾವಣಗೆರೆ ಜಿಲ್ಲಾ ಪೊಲೀಸ್ ಚಿಣ್ಣರ ಅಂಗಳ ಶಾಲೆಗೆ ಭೇಟಿ ನೀಡಿದರು. ನಂತರ…

    “ವಿಷ ಕೊಡಿ ಇಲ್ಲವೇ ಯೂರಿಯಾ ಕೊಡಿ” ದಾವಣಗೆರೆಯಲ್ಲಿ ಬಿಜೆಪಿ ಇಂದ ಪ್ರತಿಭಟನೆ

    ದಾವಣಗೆರೆ ಜಿಲ್ಲಾ ಭಾರತೀಯ ಜನತಾ ಪಕ್ಷದ ವತಿಯಿಂದ ದಾವಣಗೆರೆಯಲ್ಲಿ ಪ್ರತಿಭಟನೆ ಮಾಡಲಾಯಿತು. ರೈತರಿಗೆ ಸಮಯಕ್ಕೆ ಸರಿಯಾಗಿ ಯೂರಿಯಾ ಗೊಬ್ಬರ ಕೊಡದೇ, ರೈತರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆ ಹಾಗೂ ತನ್ನ ತಪ್ಪನ್ನು ಕೇಂದ್ರ ಸರ್ಕಾರದ…

    Leave a Reply

    Your email address will not be published. Required fields are marked *

    error

    Enjoy this blog? Please spread the word :)

    error: Content is protected !!