

ದಾವಣಗೆರೆ (23): ಚಂದ್ರಯಾನ-3 ವಿಕ್ರಂ ಯಶಸ್ವಿಯಾಗಿ ಚಂದ್ರಲೋಕಕ್ಕೆ ಲ್ಯಾಂಡಿಂಗ್ ಹಾಗೂ ಅದರ ಕಾರ್ಯ ಯಶಸ್ವಿಯಾಗಿ ನಡೆಸಲೆಂದು ನಗರದ ತಿಮ್ಮಪ್ಪನಿಗೆ ವಿಶೇಷ ಪಂಚಾಮೃತ ಅಭಿಷೇಕ ಪೂಜೆ ನಡೆಯಿತು. ಚಂದ್ರಯಾನ 3 ಯೋಜನೆಯ ವಿಕ್ರಮ್ ಲ್ಯಾಂಡರ್ ಇಂದು ಸಂಜೆ 6.04ಕ್ಕೆ ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿಯಲಿದೆ. ಈ ಅದ್ಭುತ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಇಡೀ ವಿಶ್ವ ಕಾತರದಿಂದ ಕಾಯುತ್ತಿದೆ.

ಈ ನಡುವೆ ಚಂದ್ರಯಾನ 3 ಯಶಸ್ವಿಯಾಗಿ ಚಂದ್ರಲೋಕ ತಲುಪಲೆಂದು ದಾವಣಗೆರೆ ನಾನಾ ಕಡೆ ಪೂಜೆ ನಡೆಯಿತು. ತಿಮ್ಮಪ್ಪನ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಭಕ್ತಾದಿಗಳು ಚಂದ್ರಯಾನ ಯಶಸ್ವಿಯಾಗಲಿ ಎಂದು ಪ್ರಾರ್ಥಿಸಿದರು. ಸ್ಥಳೀಯರು ಕೂಡ ಪೂಜೆಯಲ್ಲಿ ಭಾಗಿಯಾಗಿದ್ದರು. ಇದಲ್ಲದೇ ಚಂದ್ರಯಾನ ಯಶಸ್ವಿಗಾಗಿ ಇಡೀ ದಿನ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೂ ಭಾಗಿಯಾಗುವ ಅವಕಾಶ ಕಲ್ಪಿಸಲಾಗಿದೆ. ಒಂದೂವರೆಗಂಟೆ ಕಾಲ ತಿಮ್ಮಪ್ಪ ದೇವಸ್ಥಾನದಲಿ ಕನ್ನಡ ಪರ ಹೋರಾಟಗಾರ ಗೋಪಾಲಗೌಡ, ಅರ್ಚಕ ಬಾಲಾಜಿ ಅಯ್ಯಂಗಾರ, ಚಿದಂಬರ ಜ್ಯೋಯಿಷಿ, ರಾಜಣ್ಣ ನೇತೃತ್ವದಲ್ಲಿ ವಿಷ್ಣು ಸಹಸ್ರನಾಮ ಅರ್ಚನೆ, ತುಳಸಿ ಸಹಸ್ರನಾಮ ಅರ್ಚನೆಯೂ ನಡೆಯಿತು. ಇನ್ನು ಇಸ್ರೋ ವಿಜ್ಞಾನಿಗಳ ಪರಿಶ್ರಮದಿಂದ ಇಂದು ಚಂದ್ರನ ಮೇಲೆ ವಿಕ್ರಂ ನಿಂತು ಯಶಸ್ವಿಯಾಗಿ ಇಂದಿನಿಂದ ವಿಜ್ಞಾನದ ಕೆಲಸಗಳನ್ನು ಕೈಗೊಳ್ಳಲಿದ್ದಾರೆ. ಆದ್ದರಿಂದ ದಾವಣಗೆರೆಯಲ್ಲಿ ವಿಜಯೋತ್ಸವವನ್ನು ನಡೆಸಲಾಗುತ್ತದೆ..