

ಚಿಕ್ಕಮಗಳೂರು ಜಿಲ್ಲೆಯಲ್ಲಿ ಸೇವೆ ನಂತರ ದಾವಣಗೆರೆಗೆ ಈಗಿನಿಂದಲೇ ಅನ್ವಯಿಸುವಂತೆ ರಾಜ್ಯ ಸರ್ಕಾರದಿಂದ ಆದೇಶ ಮಾಡಲಾಗಿದೆ.
ದಾವಣಗೆರೆ ಎಸ್ಪಿ ಡಾ. ಅರುಣ್ ಜಾಗಕ್ಕೆ ಉಮಾ ಪ್ರಶಾಂತ್ ವರ್ಗಾವಣೆಗೊಂಡಿದ್ದಾರೆ, ದಾವಣಗೆರೆ ಖಡಕ್ ಎಸ್ಪಿ ಎಂದು ಹೆಸರುವಾಸಿಯಾಗಿದ್ದ ಡಾ. ಅರುಣ್ ಕಲ್ಬುರ್ಗಿ ಪೊಲೀಸ್ ತರಬೇತಿ ಕೇಂದ್ರಕ್ಕೆ ವರ್ಗಾವಣೆಗೊಂಡ ಹಿನ್ನಲೆ
ಇದೀಗ ಅವರ ಜಾಗಕ್ಕೆ ಉಮಾ ಪ್ರಶಾಂತ್ ಆಗಮಿಸಿದ್ದಾರೆ….

ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಕ್ರಮಗಳಿಗೆ ಕಡಿವಾಣ ಹಾಕಿದ್ದ ಉಮಾ ಪ್ರಶಾಂತ್ ರವರು, ಅಪರಾಧಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದು, ಟ್ರಾಫಿಕ್ ಸೇರಿದಂತೆ ಬೇರೆ ಬೇರೆ ರೀತಿಯಲ್ಲಿ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದರು. ಚಿಕ್ಕಮಗಳೂರಿನಲ್ಲಿ ಕಾರ್ಯವೈಖರಿಯಿಂದಲೇ ಜನರ ಮನಸ್ಸು ಗೆದ್ದಿದ್ದರು. ಈಗ ದಾವಣಗೆರೆಗೆ ನಿಯೋಜನೆ ಮಾಡಲಾಗಿದೆ.
ಶಾಲಾ ಬಸ್ಸುಗಳಲ್ಲಿ ಶಾಲಾ ಮಕ್ಕಳ ಸುರಕ್ಷತೆ ಹಾಗೂ ಶಾಲಾ ಬಸ್ಸುಗಳು ಸಂಚಾರಿ ನಿಯಮಗಳ ಪಾಲನೆ ಮತ್ತು ನಿರ್ವಹಣೆ ಕುರಿತು ವಿಶೇಷ ಕಾಳಜಿ ವಹಿಸಿದ್ದ ಉಮಾ ಪ್ರಶಾಂತ್ ಅವರು ಶಾಲಾ, ಕಾಲೇಜುಗಳ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರೊಂದಿಗೆ ಸಭೆ ನಡೆಸಿ ಖಡಕ್ ಸೂಚನೆಗಳನ್ನು ಕೊಟ್ಟಿದ್ದರು.