

ದಾವಣಗೆರೆ, ಆ. 23
ಇಸ್ರೋದ ಚಂದ್ರಯಾನ 3 ವಿಕ್ರಮ್ ಲ್ಯಾಂಡರ್ ಆ. 23 ರ ಸಂಜೆ ಚಂದ್ರನ ಕಕ್ಷೆ ಮೇಲೆ ಪಾದಾರ್ಪಣೆ ಮಾಡುತ್ತಿದ್ದು, ಈ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಇಲ್ಲಿನ ವಿನೋಭನಗರದ 2ನೇ ಮುಖ್ಯ ರಸ್ತೆಯಲ್ಲಿರುವ ಶ್ರೀ ವರಸಿದ್ದಿವಿನಾಯಕ ದೇವಸ್ಥಾನದಲ್ಲಿ ದಾವಣಗೆರೆ ತಾಲೂಕು ಫೋಟೋ ಮತ್ತು ವೀಡಿಯೋಗ್ರಾರ‍್ಸ್ ಸಂಘ, ದಾವಣಗೆರೆ ಜಿಲ್ಲಾ ಅಖಿಲ ಕರ್ನಾಟಕ .ರವಿಚಂದ್ರನ್ ಅಭಿಮಾನಿಗಳ ಸಂಘ, ಕನ್ನಡ ಸಮರ ಸೇನೆ ಸಹಯೋಗದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ತಾಲೂಕು ಗೌರವಾಧ್ಯಕ್ಷರಾದ ಬಿ ಮಂಜುನಾಥ್ ತಾಲೂಕ ಅಧ್ಯಕ್ಷ ಎಂ.ಮನು ಗ್ರಾಮಾಂತರ ವಲಯ ಅಧ್ಯಕ್ಷ ಕೊಂಡಜ್ಜಿ ಎಸ್. ರಾಜಶೇಖರ್ ಉಪಾಧ್ಯಕ್ಷ ಎಸ್ ಚಂದ್ರಶೇಖರ್ ಪ್ರಧಾನ ಕಾರ್ಯದರ್ಶಿ ಮಲ್ಲೇಶ್ ಎಚ್ ಪಾಟೀಲ್ ಖಜಾಂಚಿ ಎ ಎಸ್ ಗಣೇಶ್ ಗೌರವ ಸಲಹೆಗಾರರಾದ ಸಂತೋಷ ದೊಡ್ಡಮನಿ, ಜಿ ಮಾಲಿಂಗಪ್ಪ , ಕನ್ನಡ ಸಮರಸೇನೆ ಮಹಿಳಾ ರಾಜ್ಯಾಧ್ಯಕ್ಷ ದ್ರಾಕ್ಷಣಮ್ಮ ಮಲ್ಲಿಕಾರ್ಜುನಯ್ಯ ಕೋಟ್ಯಾಳ ಸಿದ್ದೇಶ್ ಶ್ರೀಮತಿ ರಾಜೇಶ್ವರಿ ಶ್ರೀಮತಿ ಕವಿತಾ ಚಂದ್ರಶೇಖರ್ ರವಿಚಂದ್ರನ್ ಅಭಿಮಾನಿಗಳ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶ್ರವಣ್ ಕುಮಾರ್ , ಹುಲಿಕಟ್ಟೆ ರಾಜೇಶ್ , ರವಿ,ತಾಲೂಕು ಸಂಘದ ಸಹ ಕಾರ್ಯದರ್ಶಿ ಡಿ ರಂಗನಾಥ್ , ಜಂಟಿ ಕಾರ್ಯದರ್ಶಿ ದೇವೇಂದ್ರಪ್ಪ ಕುಮಾರ್ ಉಪಸ್ಥಿತರಿದ್ದು ಚಂದ್ರಯಾನ ಯಶಸ್ಸಿಗೆ ಶುಭ ಹಾರೈಸಿದರು