

ದಾವಣಗೆರೆ.ಆ.೧೯; ಧರ್ಮಸ್ಥಳದಲ್ಲಿ ಯುವತಿ ಸೌಜನ್ಯ ಗ್ಯಾಂಗ್ ರೇಪ್ ಹಾಗೂ ಕೊಲೆ ಪ್ರಕರಣವನ್ನು ನ್ಯಾಯಾಂಗದ ವ್ಯವಸ್ಥೆ ಅಡಿಯಲ್ಲಿ ಮರು ತನಿಖೆ ಮಾಡಬೇಕು
ಎಂದು ಪ್ರಜಾಪ್ರಭುತ್ವ ವೇದಿಕೆ ರಾಜ್ಯಾಧ್ಯಕ್ಷ ಮಹೇಶ್ ಶೆಟ್ಟಿ ತಿಮ್ಮರೋಡಿ ಆಗ್ರಹ
ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸೌಜನ್ಯ ಪ್ರಕರಣದಲ್ಲಿ ನಿಜವಾದ ಅತ್ಯಾಚಾರಿಗೆ ಶಿಕ್ಷೆಯಾಗಬೇಕು.ನ್ಯಾಯಾಂಗ ವ್ಯವಸ್ಥೆಯಲ್ಲಿ ನಮಗೆ ನಂಬಿಕೆ ಇದೆ.ನ್ಯಾಯ ಸಿಗದಿದ್ದರೆ ಅಣ್ಣಪ್ಪನೇ ಅವರಿಗೆ ನ್ಯಾಯ ತೋರಿಸಲಿದ್ದಾರೆ.
ಪ್ರಕರಣದ ಆರೋಪಿ ಆರು ವರ್ಷದ ಮೇಲೆ ಜಾಮೀನಿನ ಮೇಲೆ ಹೊರಬಂದಿದ್ದಾನೆ. ಧರ್ಮದ ನ್ಯಾಯದೇವತೆ ಇರುವ ಅಣ್ಣಪ್ಪ ಹಾಗೂ ಮಂಜುನಾಥ ನೆಲೆಸಿರುವ ಧಾರ್ಮಿಕ ಜಾಗದಲ್ಲಿ ಪ್ರಕರಣ ನಡೆದಿದೆ. ನ್ಯಾಯಪೀಠದಲ್ಲಿ ನ್ಯಾಯ ಸಿಗುವುದಿಲ್ಲ ಎನ್ನುವಂತಾಗಿದೆ.

ಕಳೆದ ೪೦ ವರ್ಷದಿಂದ ಸನಾತನ ಹಿಂದೂ ಧರ್ಮದ ಪ್ರತಿಪಾದಕನಾಗಿ ನಾನು ಕೆಲಸ ಮಾಡುತ್ತಿದ್ದೇನೆ.
ಸೌಜನ್ಯ ಹತ್ಯೆ ಪ್ರಕರಣದಲ್ಲಿ ನಿಜವಾದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು.
ಸೌಜನ್ಯ ಪ್ರಕರಣದಲ್ಲಿ ಮೂರು ಸಾಕ್ಷಿ ನಾಶ ಮಾಡಲಾಗಿದೆ. ಧರ್ಮಸ್ಥಳದಲ್ಲಿರುವ ಪೇಟಧಾರಿಗಳು ಧಾರ್ಮಿಕ ಭಯೋತ್ಪಾದನೆಯಲ್ಲಿ ತೊಡಗಿದ್ದಾರೆ.ಧರ್ಮದ ರಕ್ಷಣೆ ಮಾಡಬೇಕಾಗಿದೆ.ನಮಗೆ
ಹಿಂದುತ್ವದ ಪಾಠ ಕೋಡಬೇಕಾಗಿಲ್ಲ.ನಾಯಕರಿಂದ ಯಾವಪಾಠ ಬೇಡ.ಯಾರ ವಿರುದ್ದ ನಾವಿಲ್ಲ ಆದರೆ ತಪ್ಪು ಮಾಡಿದವರನ್ನು ಬಿಡುವುದಿಲ್ಲ.
ಸೌಜನ್ಯ ಪ್ರಕರಣದಲ್ಲಿ ಉದ್ದೇಶ ಪೂರ್ವಕವಾಗಿ ಸಾಕ್ಷಿ ನಾಶ ಮಾಡಲಾಗಿದೆ.
ಈ ಪ್ರಕರಣದಲ್ಲಿ ನಿಜವಾದ ಆರೋಪಿಗೆ ಶಿಕ್ಷೆಯಾಗಬೇಕು ಎಂದರು.ಇಂದಿನ ಸರ್ಕಾರಕ್ಕೆ ಈ ಪ್ರಕರಣದ ತನಿಖೆಗೆ ಮನವಿ ಸಲ್ಲಿಸಿದ್ದೇವೆ ಆದರೆ ರಾಜ್ಯದ
ಹೋಂ ಮಿನಿಸ್ಟರ್ ಗೆ ತಿಳುವಳಿಕೆ ಕಡಿಮೆ ಇದೆ.ನಮಗೆ ನ್ಯಾಯ ಬೇಕು ಕೊಡದಿದ್ದರೆ ಈ ಸರ್ಕಾರವನ್ನು ಬಿಡುವುದಿಲ್ಲ ಅಣ್ಣಪ್ಪ ಕೂಡ ಅವರನ್ನು ಬಿಡುವುದಿಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಅನಿಲ್ ಕುಮಾರ್, ಮಣಿಸರ್ಕಾರ್ ,ಶ್ರೀಧರ್, ರಾಹುಲ್, ಪರಶುರಾಮ್ ನಡುಮನಿ,ರಾಜು, ಮಾರ್ಕಂಡೇಯ ,ಶ್ರೀಧರ್,ರಘು ಇತರರಿದ್ದರು.