ಬಿ.ಜೆ.ಪಿ.ಯ ಮಹಿಳ ಮೋರ್ಚ ಪಾರ್ಟಿಯಿಂದ ನಡೆದ ಮಹಿಳ ಸಭೆ…

June 4, ಶಿವಮೊಗ್ಗ…
ಶಿವಮೊಗ್ಗ ತಾಲ್ಲೂಕು ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದ ಹೊಳಲೂರು ಮಹಾಶಕ್ತಿ ಕ್ಷೇತ್ರದಲ್ಲಿ ನಡೆದ ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಹಾಗೂ
ಮಹಿಳೆಯರು ಎಲ್ಲಾ ರಂಗದಲ್ಲೂ ಮುಂಚಣಿಯಲ್ಲಿದ್ದಾರೆ, ಅದನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಚುನಾವಣೆಗೆ ಪಕ್ಷಾತೀತವಾಗಿ ಕಾರ್ಯ ನಿರ್ವಹಿಸಬೇಕು ಎಂದು ಭದ್ರಾ ಅಚ್ಚು ಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷೆ  ಕೆ.ಬಿ ಪವಿತ್ರ ರಾಮಯ್ಯ ಅವರು ತಿಳಿಸಿದರು.

ಯಾವುದೇ ಮಧ್ಯವರ್ತಿಗಳ ಸಹಾಯವಿಲ್ಲದೆ ಕೇಂದ್ರ ಸರಕಾರದ ಪಿಎಂ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ಪ್ರತಿ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮಾ ಆಗುತ್ತಿದೆ. ಅದರಿಂದ ಭ್ರಷ್ಟಾಚಾರ ಮುಕ್ತ ಸರಕಾರ ನಮ್ಮಲಿದೆ ಎಂದರು.

ಮಹಿಳೆಯರು ನಾಯಕತ್ವದ ಗುಣ ಬೆಳೆಸಿಕೊಳ್ಳಬೇಕು ಅದಕ್ಕೆ ಮಹಿಳೆಯರು ಸಂಘಟಿತರಾಗಬೇಕು, ಮಹಿಳೆಯರು ಇಂದು ಮನೆಯಿಂದ ಹೊರ ಬಂದು ಸಮಾಜದಲ್ಲಿ ಗುರುತಿಸಿಕೊಳ್ಳಬೇಕು ಅದಕ್ಕೆ ಭಾರತೀಯ ಜನತಾ ಪಾರ್ಟಿ ಅವಕಾಶ ಮಾಡಿಕೊಡುತ್ತದೆ ಎಂದರು.

ಈ ಸಂದರ್ಭದಲ್ಲಿ ಶಿವಮೊಗ್ಗ ತಾಲ್ಲೂಕು ಅಧ್ಯಕ್ಷರಾದ ಶ್ರೀ ರತ್ನಾಕರ ಶಣೈ, ಮ್ಯಾಮ್ಕೋಸ್ ನಿರ್ದೇಶಕರು ಮತ್ತು ಮಾಜಿ ಶಿವಮೊಗ್ಗ ತಾಲ್ಲೂಕು ಅಧ್ಯಕ್ಷರಾದ ಶ್ರೀ ವಿರೂಪಾಕ್ಷಪ್ಪ ಜಿ.ಈ, ಶಿವಮೊಗ್ಗ ತಾಲ್ಲೂಕು ಉಪಾಧ್ಯಕ್ಷರಾದ ಶ್ರೀ ರುದ್ರಪ್ಪ, ಶಿವಮೊಗ್ಗ ತಾಲ್ಲೂಕು ಯುವ ಮೋರ್ಚಾ ಉಪಾಧ್ಯಕ್ಷರಾದ ಶ್ರೀ ಮೇಘರಾಜ್, ಸಂಚಾಲಕಿ ಶ್ರೀಮತಿ ಭಾಗ್ಯ ಜಗದೀಶ್, ಹೊಳಲೂರು ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀ ಸುರೇಶ್, ತಾಲ್ಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ರೀಮತಿ ವೀಣಾ ನಾಗರಾಜ್, ಪ್ರಧಾನ ಮಹಿಳಾ ಕಾರ್ಯದರ್ಶಿ ಶ್ರೀಮತಿ ಗೀತಾ ವೇದಮೂರ್ತಿ, ಶ್ರೀಮತಿ ಮನಜಾಕ್ಷಿ ಸುರೇಶ್ ಮತ್ತಿತರರು ಹಾಜರಿದ್ದರು.

  • Related Posts

    ಬಾಣಂತಿ ಮತ್ತು ಅಭಿಜಾತ ಶಿಶುಗಳ ಸುರಕ್ಷತೆಗೆ ಶ್ರಮಿಸಲು ವೈದ್ಯರಿಗೆ ಸೂಚನೆ : ಗುರುದತ್ತಹೆಗಡೆ

    ಶಿವಮೊಗ್ಗ : ಜನವರಿ ೩೧ : ಜಿಲ್ಲೆಯ ಎಲ್ಲಾ ರ‍್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸಂಭವಿಸುತ್ತಿರುವ ಬಾಣಂತಿ ಮತ್ತು ಅಭಿಜಾತ ಶಿಶುಗಳ ಸಾವು-ನೋವು ನಿಯಂತ್ರಿಸುವಲ್ಲಿ ತಜ್ಞ ವೈದ್ಯಾಧಿಕಾರಿಗಳು ನರ‍್ಲಕ್ಷ್ಯ ತೋರದೇ ಮಾನವೀಯ ನೆಲೆಯಲ್ಲಿ ಸೇವೆ ಒದಗಿಸುವಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು…

    ವಿಶ್ವೇಶ್ವರಯ್ಯನವರ ೧೬೩ನೇ ಜಯಂತಿಯು ಭದ್ರಾವತಿಯ ಜನ್ನಾಪುರದಲ್ಲಿರುವ ಶ್ರೀ ಮಲ್ಲೇಶ್ವರ ಸಮುದಾಯ ಭವನದಲ್ಲಿ ನಡೆಯಿತು…

    ಸೆ. 15, ಜಗತ್ತಿನ ಅತ್ಯಂತ ಶ್ರೇಷ್ಠ ಇಂಜಿನಿಯರುಗಳ ಸಾಲಿನಲ್ಲಿ ನಿಲ್ಲುವ, ನಮ್ಮ ಸ್ವತಂತ್ರ ಭಾರತದ ಪ್ರಪ್ರಥಮ ಇಂಜಿನಿಯರ್‌ ಅಂತಲೇ ಹೇಳಬಹುದಾದಂಥ ಸರ್‌ ಶ್ರೀ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ೧೬೩ನೇ ಜಯಂತಿಯು ಭದ್ರಾವತಿಯ ಜನ್ನಾಪುರದಲ್ಲಿರುವ ಶ್ರೀ ಮಲ್ಲೇಶ್ವರ ಸಮುದಾಯ ಭವನದಲ್ಲಿ ನಡೆಯಿತು. ಇಡೀ ಸಭಾಂಗಣವೇ…

    Leave a Reply

    Your email address will not be published. Required fields are marked *

    error: Content is protected !!