

ದಾವಣಗೆರೆ ಜಿಲ್ಲೆ, ಕೊಂಡಜ್ಜಿ ಗ್ರಾಮದಲ್ಲಿ ನೂತನವಾಗಿ ಆರಂಭವಾಗಿರುವ ಪೊಲೀಸ್ ಪಬ್ಲಿಕ್ ವಸತಿ ಶಾಲೆಯ ಪ್ರಸಕ್ತ ಶೈಕ್ಷಣಿಕ ವರ್ಷ 2022-23 ನೇ ಸಾಲಿನ ತರಗತಿಗಳು ಆರಂಭದ ಅಂಗವಾಗಿ ಇಂದು ಶಾಲೆಯಲ್ಲಿ ಮಾನ್ಯ ಐಜಿಪಿ ಪೂರ್ವ ವಲಯ ಶ್ರೀ ಡಾ.ಕೆ.ತ್ಯಾಗರಾಜನ್ ಐಪಿಎಸ್ ರವರ ಅಧ್ಯಕ್ಷತೆಯಲ್ಲಿ ಶಾಲಾ ಆರಂಭದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ಮಾನ್ಯ ಪೊಲೀಸ್ ಅಧೀಕ್ಷಕರವರಾದ ಶ್ರೀ ಸಿ.ಬಿ.ರಿಷ್ಯಂತ್ ಐಪಿಎಸ್ ರವರು, ಪ್ರಾಚಾರ್ಯರಾದ ಶ್ರೀ ಯತೀಶ್, ಡಿವೈಎಸ್ಪಿ ರವರಾದ ಶ್ರೀ ಪಿ.ಬಿ.ಪ್ರಕಾಶ್ ಸೇರಿದಂತೆ ಶಿಕ್ಷಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಮಾನ್ಯ ಐಜಿಪಿ ಪೂರ್ವ ವಲಯ ರವರು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಶಾಲಾ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.ಕಾರ್ಯಕ್ರಮದಲ್ಲಿ ಮಾನ್ಯ ಐಜಿಪಿ ಪೂರ್ವ ವಲಯ ರವರು ಮತ್ತು ಮಾನ್ಯ ಪೊಲೀಸ್ ಅಧೀಕ್ಷಕರವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿ- ಶೈಕ್ಷಣಿಕ ಯಶಸ್ಸು, ಶಿಸ್ತಿನ ಕಲಿಕೆ ಮತ್ತು ಕಠಿಣ ಪರಿಶ್ರಮಗಳ ಸಂಯೋಜನೆಯಾಗಿದೆ. ಉತ್ತಮ ಕಲಿಕೆಗೆ ಬೇಕಾದ ಎಲ್ಲಾ ವ್ಯವಸ್ಥೆಗಳು ಪೊಲೀಸ್ ಪಬ್ಲಿಕ್ ಶಾಲೆಯಲ್ಲಿ ಲಭ್ಯವಿದ್ದು ಅದರ ಪ್ರಯೋಜನ ಪಡೆಯಲು ಮಕ್ಕಳಿಗೆ ಸ್ಫೂರ್ತಿಯ ನುಡಿಗಳನ್ನಾಡಿದರು.