ಚಿತ್ರದುರ್ಗದ ಮುರುಘಾ ಮಠಕ್ಕೆ ಉತ್ತರಾಧಿಕಾರಿಯಾಗಿ ಬಸವಾದಿತ್ಯ ಸ್ವಾಮೀಜಿ ಆಯ್ಕೆ 

ಐತಿಹಾಸಿಕ ಹಿನ್ನೆಲೆ ಹೊಂದಿರುವ ಚಿತ್ರದುರ್ಗದ ಮುರುಘಾ ಮಠಕ್ಕೆ ಉತ್ತರಾಧಿಕಾರಿಯಾಗಿ ಬಸವಾದಿತ್ಯ ಸ್ವಾಮೀಜಿ ಆಯ್ಕೆಯಾಗಿದ್ದಾರೆ.

ಚಿತ್ರದುರ್ಗ ಮುರುಘಾ ಮಠದ ಪೀಠಾಧ್ಯಕ್ಷರಾಗಿರುವ ಡಾ. ಶಿವಮೂರ್ತಿ ಮುರುಘಾ ಶರಣರು ಶ್ರೀ ಮಠದ ಉತ್ತರಾಧಿಕಾರಿಯನ್ನಾಗಿ ಬಸವಾದಿತ್ಯ ಸ್ವಾಮೀಜಿ ಅವರ ಹೆಸರನ್ನು ಘೋಷಣೆ ಮಾಡಿದ್ದಾರೆ. ಚಿತ್ರದುರ್ಗ ನಗರದ ಮುರುಘಾಮಠದ ಶಿರಸಗಿ ಮಹಾಲಿಂಗಸ್ವಾಮಿ ಸಭಾಂಗಣದಲ್ಲಿ ಶುಕ್ರವಾರ ಭಕ್ತರ ಸಮ್ಮುಖದಲ್ಲಿ ಶ್ರೀಮಠದ ಉತ್ತರಾಧಿಕಾರಿ ಹೆಸರನ್ನು ಶ್ರೀ ಮುರುಘಾ ಶರಣರು ಘೋಷಿಸಿದರು. ನೂತನ ಉತ್ತರಾಧಿಕಾರಿ ಬಸವಾದಿತ್ಯ ಸ್ವಾಮೀಜಿ ಅವರ ಹಣೆಗೆ ಮುರುಘಾಶ್ರೀಗಳು ವಿಭೂತಿ ರುದ್ರಾಕ್ಷಿ ಮಾಲೆ ಹಾಕಿ ಘೋಷಿಸಿದ ನಂತರ ಭಕ್ತರು ನೂತನ ಉತ್ತರಾಧಿಕಾರಿಗಳಿಗೆ ಹೂವಿನ ಮಳೆ ಸುರಿಸಿದರು.

ನಂತರ ಪತ್ರಕರ್ತರ ಜತೆ ಮಾತನಾಡಿದ ಶ್ರೀ ಮುರುಘಾ ಸ್ವಾಮೀಜಿ, ಇದು ಆತುರದ ನಿರ್ಧಾರವಲ್ಲ. ವರ್ಷದ ಹಿಂದೆಯೇ ಉತ್ತರಾಧಿಕಾರಿ ಘೋಷಣೆ ಮಾಡುವ ಬಗ್ಗೆ ನಿರ್ಧರಿಸಲಾಗಿದ್ದು ಸ್ವಾಮೀಜಿಯವರ ಪೂರ್ವಾಶ್ರಮದ ತಂದೆ-ತಾಯಿ ಚಿತ್ರದುರ್ಗ ಜಿಲ್ಲೆಯ ಹುಲ್ಲೂರಿನವರು. ಶಿವಮೂರ್ತಯ್ಯ ಮತ್ತು ಚಂದ್ರಕಲಾ ತಂದೆ-ತಾಯಿ. ಚಿತ್ರದುರ್ಗ ನಗರದ ಎಸ್ ಜೆಎಂ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ.

ಶ್ರೀ ಬಸವಾದಿತ್ಯ ಸ್ವಾಮೀಜಿ ಮಾತನಾಡಿ, ನನಗೆ ಚಿಕ್ಕ ವಯಸ್ಸಿನಲ್ಲೇ ಮಠದ ಜವಾಬ್ದಾರಿ ನೀಡಿದ್ದಾರೆ. ಶ್ರೀ ಮಠವನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಲಾಗುವುದು ಎಂದು ತಿಳಿಸಿದರು. 

ಹಿನ್ನೆಲೆ : ಬಸವಾದಿತ್ಯ ಸ್ವಾಮೀಜಿಗಳು ಅಧ್ಯಾತ್ಮದಲ್ಲಿ ಆಸಕ್ತಿ ಹೊಂದಿದ್ದರು. ಬಸವಕೇಂದ್ರದ ಒಡನಾಡಿಯಾಗಿದ್ದು ಅವರ ದೊಡ್ಡಮ್ಮನೊಂದಿಗೆ ಮುರುಘಾಮಠದ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದರು. ಇವರ ನಡೆ-ನುಡಿ ಗಮನಿಸಿದ ಮುರುಘಾ ಮಠದ ಪೀಠಾಧಿಪತಿ ಡಾ. ಶಿವಮೂರ್ತಿ ಮುರುಘಾ ಶರಣರು ಗುರುಕುಲದಲ್ಲಿ ವಿದ್ಯಾಭ್ಯಾಸ ಮಾಡಿಸಿದ್ದರು.

  • Related Posts

    ಆಯುಷ್ ಇಲಾಖೆಯಿಂದ ಉಚಿತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ

    ಚಿತ್ರದುರ್ಗ ಜ.31:ಆರೋಗ್ಯ ರಕ್ಷಣೆ ಎಲ್ಲರ ಆದ್ಯ ಕರ್ತವ್ಯವಾಗಿದ್ದು, ನಮ್ಮ ನಿತ್ಯ ಕೆಲಸಗಳ ಜೊತೆಗೆ ಆರೋಗ್ಯದ ಕಡೆ ಹೆಚ್ಚಿನ ಗಮನವನ್ನು ಹರಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರೋಣ ವಾಸುದೇವ ಹೇಳಿದರು. ನಗದ ವಕೀಲರ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ನ್ಯಾಯಾಂಗ…

    ಅಜ್ಜಪ್ಪನಹಳ್ಳಿ ವಿದ್ಯುತ್ ಉಪಕೇಂದ್ರ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಿದ್ದ ಡಿ.ಸುಧಾಕರ್

    ಅಜ್ಜಪ್ಪನಹಳ್ಳಿ ವಿದ್ಯುತ್ ಉಪಕೇಂದ್ರ ನಿರ್ಮಾಣಕ್ಕೆ ಶಂಕು ಸ್ಥಾಪನೆಪ್ರಸಕ್ತ ವರ್ಷವೇ ಜಿಲ್ಲೆಯ 21 ಸ್ಥಳಗಳಲ್ಲಿ ವಿದ್ಯುತ್ ವಿತರಣೆ ಉಪಕೇಂದ್ರಗಳ ನಿರ್ಮಾಣ ಚಿತ್ರದುರ್ಗ ಜ.27:ಜಿಲ್ಲೆಯ ಆರು ತಾಲ್ಲೂಕು ವ್ಯಾಪ್ತಿಯ 21 ವಿದ್ಯುತ್ ವಿತರಣ ಕೇಂದ್ರಗಳ ಮೇಲೆ ಹೆಚ್ಚಿನ ಒತ್ತಡವಿದೆ. ಇವುಗಳಿಗೆ ನಿರ್ವಹಣೆಗೆ ಉಪ ವಿದ್ಯುತ್…

    Leave a Reply

    Your email address will not be published. Required fields are marked *

    error: Content is protected !!