ಆಯುಷ್ ಇಲಾಖೆಯಿಂದ ಉಚಿತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ

ಚಿತ್ರದುರ್ಗ ಜ.31:
ಆರೋಗ್ಯ ರಕ್ಷಣೆ ಎಲ್ಲರ ಆದ್ಯ ಕರ್ತವ್ಯವಾಗಿದ್ದು, ನಮ್ಮ ನಿತ್ಯ ಕೆಲಸಗಳ ಜೊತೆಗೆ ಆರೋಗ್ಯದ ಕಡೆ ಹೆಚ್ಚಿನ ಗಮನವನ್ನು ಹರಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರೋಣ ವಾಸುದೇವ ಹೇಳಿದರು.

ನಗದ ವಕೀಲರ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ನ್ಯಾಯಾಂಗ ಇಲಾಖೆ, ಜಿಲ್ಲಾ ಆಯುಷ್ ಇಲಾಖೆ, ಜಿಲ್ಲಾ ವಕೀಲರ ಸಂಘ ಸಹಯೋಗದಲ್ಲಿ ಆಯುಷ್ ಇಲಾಖೆ ವತಿಯಿಂದ ಉಚಿತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರದಲ್ಲಿ ಅವರು ಮಾತನಾಡಿದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ ನಾಗಸಮುದ್ರ ಮಾತನಾಡಿ, ಆಯುಷ್ ಇಲಾಖೆ ವತಿಯಿಂದ ಇದು ಎರಡನೇ ಶಿಬಿರವಾಗಿದ್ದು, ಈ ಹಿಂದಿನ ಶಿಬಿರದಲ್ಲಿ ಸುಮಾರು 390 ಜನರು ಪ್ರಯೋಜನವನ್ನು ಪಡೆದಿದ್ದರು. ಈ ಶಿಬಿರವನ್ನು ಸಹ ಹೆಚ್ಚಿನ ಪ್ರಮಾಣದಲ್ಲಿ ಪ್ರಯೋಜನ ಪಡೆದು ಯಶಸ್ವಿಗೊಳಿಸಬೇಕೆಂದು ಕೋರಿದರು.

ವಕೀಲರ ಸಂಘದ ಅಧ್ಯಕ್ಷ ವೈ. ತಿಪ್ಪೇಸ್ವಾಮಿ ಮಾತನಾಡಿ, ಇಂದಿನ ಒತ್ತಡದ ಬದುಕಿಗೆ ಹಾಗೂ ಜೀವನಶೈಲಿ ಜನ್ಯ ವ್ಯಾಧಿಗಳಿಗೆ ಆಯುಷ್ ಚಿಕಿತ್ಸಾ ಪದ್ಧತಿಯು ಉತ್ತಮ ವೈದ್ಯ ಪದ್ಧತಿಯಾಗಿದ್ದು. ನಾವೆಲ್ಲರೂ ಆಯುಷ್ ಸಿದ್ಧಾಂತಗಳನ್ನು ಅಳವಡಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.

ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಗಂಗಾಧರ್ ನಿರೂಪಿಸಿದರು. ಆಯುಷ್ ವೈದ್ಯಾಧಿಕಾರಿ ಡಾ. ಶಿವಕುಮಾರ್ ಪ್ರಾಸ್ತಾವಿಕ ನುಡಿಯಲ್ಲಿ ಈ ಶಿಬಿರದಲ್ಲಿ ದೊರೆಯುವ ಸೇವೆಗಳನ್ನು ವಿವರಿಸಿದರು. ಡಾ. ನಾರದಮುನಿ ಅವರು ಅತಿಥಿಗಳಿಗೆ ಔಷಧೀಯ ಸಸ್ಯ ಗಳನ್ನು ನೀಡಿ ಸ್ವಾಗತಿಸಿದರು. ಡಾ. ನಾಗರಾಜ್ ನಾಯ್ಕ್ ಅವರು ವಂದನಾರ್ಪಣೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಆಯುಷ್ ವೈದ್ಯಾಧಿಕಾರಿಗಳು, ಜಿಲ್ಲಾ ಆಯುಷ್ ಘಟಕದ ವೈದ್ಯರು ಹಾಗೂ ಸಿಬ್ಬಂದಿಯವರು, ಆರೋಗ್ಯ ಹಾಗು ಕುಟುಂಬ ಕಲ್ಯಾಣ ಇಲಾಖೆಯ ಸಮುದಾಯ ಸಮುದಾಯ ಆರೋಗ್ಯಾಧಿಕಾರಿಗಳು ಇತರ ಸಿಬ್ಬಂದಿ ಹಾಜರಿದ್ದರು.

  • Related Posts

    ಅಜ್ಜಪ್ಪನಹಳ್ಳಿ ವಿದ್ಯುತ್ ಉಪಕೇಂದ್ರ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಿದ್ದ ಡಿ.ಸುಧಾಕರ್

    ಅಜ್ಜಪ್ಪನಹಳ್ಳಿ ವಿದ್ಯುತ್ ಉಪಕೇಂದ್ರ ನಿರ್ಮಾಣಕ್ಕೆ ಶಂಕು ಸ್ಥಾಪನೆಪ್ರಸಕ್ತ ವರ್ಷವೇ ಜಿಲ್ಲೆಯ 21 ಸ್ಥಳಗಳಲ್ಲಿ ವಿದ್ಯುತ್ ವಿತರಣೆ ಉಪಕೇಂದ್ರಗಳ ನಿರ್ಮಾಣ ಚಿತ್ರದುರ್ಗ ಜ.27:ಜಿಲ್ಲೆಯ ಆರು ತಾಲ್ಲೂಕು ವ್ಯಾಪ್ತಿಯ 21 ವಿದ್ಯುತ್ ವಿತರಣ ಕೇಂದ್ರಗಳ ಮೇಲೆ ಹೆಚ್ಚಿನ ಒತ್ತಡವಿದೆ. ಇವುಗಳಿಗೆ ನಿರ್ವಹಣೆಗೆ ಉಪ ವಿದ್ಯುತ್…

    ಯುವ ಜನತೆ ಮಾದಕ ವಸ್ತುಗಳಿಂದ ದೂರವಿರಿ ಚಿತ್ರದುರ್ಗ ಆರೋಗ್ಯಾಧಿಕಾರಿ ಡಾ.ಆರ್.ಮಂಜುನಾಥ್

    ಚಿತ್ರದುರ್ಗ ಸೆ.16:ಯುವ ಜನತೆ ಮಾದಕ ವಸ್ತುಗಳಿಂದ ದೂರ ಇರಬೇಕು ಎಂದು ಆರೋಗ್ಯಾಧಿಕಾರಿ ಡಾ.ಆರ್.ಮಂಜುನಾಥ್ ಹೇಳಿದರು.ನಗರದ ಎಸ್‍ಜೆಎಂ ಫಾರ್ಮಸಿ ಕಾಲೇಜಿನಲ್ಲಿ ಶನಿವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ಜಿಲ್ಲಾ ವಕೀಲರ ಸಂಘದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಮಾದಕ ವ್ಯಸನ ಮತ್ತು ಕಾನೂನುಗಳ ಅರಿವು…

    Leave a Reply

    Your email address will not be published. Required fields are marked *

    error: Content is protected !!