

ಜೂನ್ 2, ವಿಜಯನಗರ ಜಿಲ್ಲೆ, ಹರಪನಹಳ್ಳಿಯಲ್ಲಿ ಕೊಟ್ಟೂರು- ಹರಪನಹಳ್ಳಿ ಮಾರ್ಗದ ರಸ್ತೆ ಬಂದ್ ಮಾಡಿ ಪ್ರತಿಭಟನೆ ಮಾಡಿದ ರೈತರು.
ಹರಪನಹಳ್ಳಿ ತಾಲ್ಲೂಕಿನಲ್ಲಿ ರಾಗಿ ಬೆಳೆದ ರೈತರಿಂದ ಧಿಡೀರ್ ಪ್ರತಿಭಟನೆ ಮಾಡಲು ಮುಂದಾದರು.

ರಾಗಿ ಖರೀದಿಗಾಗಿ ಕಳೆದ ಮೂರ್ನಾಲ್ಕು ದಿನಗಳಿಂದ ಟೋಕನ್ ನೀಡಲಾಗಿದೆ ಆದ್ರೆ ರಾಗಿ ಖರೀದಿ ಮಾಡುತ್ತಿಲ್ಲಾ, ಟ್ರಾಕ್ಟರ್ ಗಳಲ್ಲಿ ತುಂಬಿಕೊಂಡು ಸಾಲಾಗಿ ನಿಲ್ಲಿಸಲಾಗಿದೆ ಬೇಗ ಖರೀದಿ ಮಾಡಿದ್ರೆ, ರೈತರು ಬಿತ್ತನೆ ಕಾರ್ಯದಲ್ಲಿ ತೊಡಗುತ್ತಾರೆ ಇಲ್ಲಾವಾದ್ರೆ, ಬಿತ್ತನೆ, ಭೂಮಿ ಹದ ಮಾಡೋ ಕೆಲಸಕ್ಕೆ ಸಮಸ್ಯೆಯಾಗುತ್ತದೆ ಅಂತ ರೈತರ ಆಕ್ರೋಶವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.
ನಂತರ ಸ್ಥಳಕ್ಕೆ ಪೊಲೀಸರು ಮತ್ತು ತಹಶಿಲ್ದಾರರ ಭೇಟಿ ಪರಿಶೀಲನೆ ನಡೆಸಿದರು.