
೨೭ ಜೂಲೈ ೨೦೨೫, ಲಕ್ಷ್ಮಿ ಹೆಬ್ಬಾಳ್ಕರ್ ರವರು ಬೆಳಗಾವಿಯ ಬಡಸ್ ಕೆ.ಚ್ ಗ್ರಾಮದಲ್ಲಿರುವ ಶ್ರೀ ಮಡಿವಾಳೇಶ್ವರ ಮಠದ ನೂತನ ಕಟ್ಟಡದ ಕಾಮಗಾರಿಗೆ ಗ್ರಾಮಸ್ಥರ ಸಮ್ಮುಖದಲ್ಲಿ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು

ಸುಮಾರು ಒಂದೂವರೆ (1.50) ಕೋಟಿ ರೂ,ಗಳ ವೆಚ್ಚದಲ್ಲಿ ಮಠದ ಕಟ್ಟಡ ನಿರ್ಮಾಣವಾಗಲಿದೆ. ಆದಷ್ಟು ಬೇಗ ಕಟ್ಟಡ ಮಠದ ಕಾಮಗಾರಿ ಪೂರ್ಣಗೊಂಡು, ನಮ್ಮ ಸಮಾಜಕ್ಕೆ ಸೇವೆ ಸಲ್ಲಿಸುವಂತಾಗಲಿ ಹಾಗೂ ಇದೊಂದು ಜ್ಞಾನಾರ್ಜನೆ ಕೇಂದ್ರವಾಗಿ ಬೆಳೆಯಲಿ ಎಂದು ಆಶೀರ್ವದಿಸಿದರು.

ಈ ಕಾರ್ಯಕ್ರಮದಲ್ಲಿ ಬಡಸ್ ಮಡಿವಾಳೇಶ್ವರ ಮಠದ ಗ್ರಾಮದ ಶ್ರೀ ಪ್ರಶಾಂತ ದೇವರು, ಬಿಜಾಪುರದ ಶ್ರೀ ಪ್ರಭುದೇವರು, ಸಿ.ಸಿ.ಪಾಟೀಲ್, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೋಭಾ ಕುರಬರ್, ಮನ್ಸೂರ್ ಅಲಿ ಅತ್ತಾರ್, ಸುರೇಶ್ ಇಟಗಿ, ರವಿ ಮೇಳೆದ್, ಬಸವಂತ ನಾಯಿಕ್, ಭರಮಣ್ಣ ಶೀಗಿಹಳ್ಳಿ, ಫಕೀರ್ ಶೀಗಿಹಳ್ಳಿ, ಸಿದ್ದು ಸಂಪಗಾವ, ಇನಾಯತ್ ಅತ್ತಾರ್, ಪರ್ವತಗೌಡ ಪಾಟೀಲ, ಗೌಸ್ ಸಿಂಪಿ, ಬಸವರಾಜ ಕಲಾರಕೊಪ್ಪ, ಭೀಮಶಿ ಹಾದಿಮನಿ, ರಾಮನಗೌಡ ಮದಲಭಾವಿ, ಸಂತೋಷ ಬಂದವ್ವಗೋಳ, ಸುನಿಲ, ನಾಗಪ್ಪ ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.







