ಬೈಲಹೊಂಗಲದಲ್ಲಿ ಯುವ ಪರ್ವ ಪ್ರತಿಜ್ಞೆ – 2025 ರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

೨೮, ಜೂಲೈ ೨೦೨೫, ಬೆಳಗಾವಿ ಜಿಲ್ಲೆ ಬೈಲಹೊಂಗಲ ನಗರದ ಬಿ.ಬಿ‌.ಗಣಾಚಾರಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಡಿದ್ದ ಬೆಳಗಾವಿ ಗ್ರಾಮೀಣ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಯುವ ಪರ್ವ ಪ್ರತಿಜ್ಞೆ – 2025 ರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು, ಈ ಸಂದರ್ಭದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಪದಾಧಿಕಾರಿಗಳಿಗೆ ಶುಭ‌ ಕೋರಿದರು

ಸಮಾರಂಭ ಉದ್ದೇಶಿಸಿ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್ ಪಕ್ಷದ ಹಾಗೂ ರಾಷ್ಟ್ರದ ಭವಿಷ್ಯ ಯುವಕರ ಕೈಯಲ್ಲಿದ್ದು, ದೇಶದ ಭವಿಷ್ಯ ರೂಪಿಸುವಲ್ಲಿ ಯುವ ಕಾಂಗ್ರೆಸ್ ಪ್ರಮುಖ ಪಾತ್ರ ವಹಿಸುತ್ತಿದೆ. ಯುವಕರು ಜನರ ಸಮಸ್ಯೆಗಳ ಕುರಿತಂತೆ ಆತ್ಮೀಯತೆ ಮತ್ತು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ದೇಶದ ಬೆಳವಣಿಗೆಗೆ ಯುವಕರ ಶ್ರಮದ ಅಗತ್ಯವಿದ್ದು, ಹಾಗಾಗಿ ಯುವಕರು ತಕ್ಕ ರೀತಿಯಲ್ಲಿ ನಿಷ್ಠೆ ಮತ್ತು ಶ್ರಮದಿಂದ ಪಕ್ಷದ ಬಗ್ಗೆ ಕಾಳಜಿ ವಹಿಸಿ ಕಾರ್ಯ ನಿರ್ವಹಿಸುವುದು ಅತ್ಯವಶ್ಯಕ ಎಂದರು.

ಈ ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಅಣ್ಣ ಜಾರಕಿಹೊಳಿ, ಶಾಸಕರಾದ ಮಹಾಂತೇಶ್ ಕೌಜಲಗಿ, ಬಾಬಾಸಾಹೇಬ್ ಪಾಟೀಲ, ವಿಶ್ವಾಸ್ ವೈದ್ಯ, ಮುಖಂಡರಾದ ಮಹಾಂತೇಶ್ ಕಡಾಡಿ, ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ರಾಜ್ಯಾಧ್ಯಕ್ಷರಾದ ಮುಂಜುನಾಥ್ ಎಚ್.ಎಸ್, ಮೃಣಾಲ್ ಹೆಬ್ಬಾಳಕರ್, ವಿನಯ ನಾವಲಗಟ್ಟಿ, ರಾಹುಲ್ ಜಾರಕಿಹೊಳಿ, ಕಾರ್ತಿಕ ಪಾಟೀಲ, ದೀಪಿಕಾ ರೆಡ್ಡಿ, ಅಬ್ದುಲ್ ದೇಸಾಯಿ ಉಪಸ್ಥಿತರಿದ್ದರು.

  • Related Posts

    ದೇವಸ್ಥಾನದ  ಕಾಮಗಾರಿಗೆ  25 ಲಕ್ಷ  ಹಣ ಬಿಡುಗಡೆ ಮಾಡಿದ ಲಕ್ಷ್ಮಿ ಹೆಬ್ಬಾಳ್ಕರ್…

    ಬೆಳಗಾವಿ ಜಿಲ್ಲೆಯ ಬಾಳೇಕುಂದ್ರಿ ಕೆ.ಎಚ್ ಗ್ರಾಮದಲ್ಲಿ ನೂತನ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಕಟ್ಟಡದ ನಿರ್ಮಾಣದ ಕಾಮಗಾರಿಗೆ ಮೊದಲನೇ ಕಂತಿನಲ್ಲಿ 25 ಲಕ್ಷ ರೂ,ಗಳನ್ನು ಬಿಡುಗಡೆ ಮಾಡಿಕೊಟ್ಟರು.  ಈ  ಹಿನ್ನೆಲೆಯಲ್ಲಿ ಇಂದು ದೇವಸ್ಥಾನ ಕಮಿಟಿ ಹಾಗೂ ಗ್ರಾಮಸ್ಥರ ವತಿಯಿಂದ ಲಕ್ಷ್ಮಿ ಹೆಬ್ಬಾಳ್ಕರ್  ಗೌರವ-ಸನ್ಮಾನ…

    ಅಥಣಿಯಲ್ಲಿ ಶ್ರೀ ಲಕ್ಷ್ಮಣ ಸವದಿ ಪಾರ್ಕ್ ಹಾಗೂ ವೃತ್ತದ ಉದ್ಘಾಟನೆ…

    ಈ ವೇಳೆ ಮಾಜಿ ಉಪ ಮುಖ್ಯಮಂತ್ರಿಗಳು ಅಥಣಿಯ ಜನಪ್ರಿಯ ಶಾಸಕರಾದ ಶ್ರೀ ಲಕ್ಷ್ಮಣ ಸವದಿಯವರು ನೆರವೇರಿಸಿ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ಪ,ಪೂ,ಶ್ರೀ ಮರುಳಸಿದ್ಧ ಮಹಾಸ್ವಾಮೀಜಿಗಳು ಶೆಟ್ಟರಮಠ ಅಥಣಿ,ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಶ್ರೀ ಸದಾಶಿವ ಬುಟಾಳಿ,ಶ್ರೀ ಶಿವಾನಂದ ದಿವಾನಮಳ,ಸಂಕೋನಟ್ಟಿ…

    Leave a Reply

    Your email address will not be published. Required fields are marked *

    error

    Enjoy this blog? Please spread the word :)

    error: Content is protected !!