
೨೭, ಜೂಲೈ ೨೦೨೫ರಂದು ಲಕ್ಷ್ಮಿ ಹೆಬ್ಬಾಳ್ಕರ್ ರವರು ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಂಗ್ರಾಳಿ ಬಿ.ಕೆ, ನಿಲಜಿ, ದೇಸೂರ್, ಸಾಂಬ್ರಾ ಸೇರಿದಂತೆ ಅನೇಕ ಗ್ರಾಮಗಳ ಮುಖಂಡರ ಜೊತೆ ಗೃಹ ಕಚೇರಿಯಲ್ಲಿ ಸಭೆ ನಡೆಸಿದರು.

ವಿವಿಧ ದೇವಸ್ಥಾನಗಳ ಸಮಿತಿಯ ಸದಸ್ಯರು ಹಾಗೂ ವಾರ್ಕರಿ ಮಂಡಳಿಯವರ ಜೊತೆ ಗೃಹ ಕಚೇರಿಯಲ್ಲಿ ಸಭೆ ನಡೆಸಿ, ಆಯಾ ಗ್ರಾಮಗಳಲ್ಲಿ ಜರುಗಲಿರುವ ಜಾತ್ರಾ ಮಹೋತ್ಸವಗಳ ಹಿನ್ನೆಲೆಯಲ್ಲಿ ಅಭಿವೃದ್ಧಿ ಕೆಲಸಗಳ ಕುರಿತಾಗಿ ಸುಧೀರ್ಘ ಕಾಲ ಚರ್ಚೆ ನಡೆಸಲಾಯಿತು.

ಇದೇ ಸಂದರ್ಭದಲ್ಲಿ ಎಲ್ಲ ಮುಖಂಡರ, ದೇವಸ್ಥಾನಗಳ ಸಮಿತಿಯ ಸದಸ್ಯರ, ವಾರ್ಕರಿ ಮಂಡಳಿಯವರ ಹಾಗೂ ವಿವಿಧ ಸ್ಥಳಗಳಿಂದ ಆಗಮಿಸಿದ್ದ ಸಾರ್ವಜನಿಕರ ಮನವಿಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದರು.








