

ಕೆ.ಆರ್.ಪೇಟೆ : ಸರ್ಕಾರಿ ಶಾಲೆಗಳು ಸದೃಢವಾಗಿ ಸಮಾಜಕ್ಕೆ ಮಾದರಿಯಾಗಿ ಬೆಳೆಯಬೇಕು.ಈ ನಿಟ್ಟಿನಲ್ಲಿ ಸರ್ಕಾರಗಳ ಶಾಲೆಗಳ ಉಳಿವಿಗೆ ಸಮುದಾಯದ ಸಹಭಾಗಿತ್ವ ಬಹಳ ಅಗತ್ಯ ಎಂದು ಸಮಾಜ ಸೇವಕರಾದ ಆರ್.ಟಿ.ಓ ಮಲ್ಲಿಕಾರ್ಜುನ್ ಹೇಳಿದರು.*
ಕೆ.ಆರ್.ಪೇಟೆಯ ತಾಲೂಕಿನ ಬೂಕನಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಶಾಲಾವರಣದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ಉತ್ತಮ ವ್ಯಾಸಂಗದ ಜತೆಯಲ್ಲಿ ಮಕ್ಕಳು ಸಾಂಸ್ಕೃತಿಕವಾಗಿಯೂ ಬೆಳೆಯುವಂತಾಗಬೇಕು. ಪಠ್ಯೇತರ ಚಟುವಟಿಕೆಗಳಿಂದ ಜ್ಞಾನ ಮತ್ತು ನಾಯಕತ್ವ ಗುಣ ಬೆಳೆಯುತ್ತದೆ ಎಂದು ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದ್ದು, ಈ ಬಗ್ಗೆ ಪೋಷಕರು ಗಮನ ಹರಿಸಬೇಕೆಂದರು.ಮತ್ತು ಬೂಕನಕೆರೆ ಹಿರಿಯ ಪ್ರಾಥಮಿಕ ಶಾಲೆ ಖಾಸಗಿ ಶಾಲೆಗಳ ನಾಚುವಂತೆ ಶಿಕ್ಷಣದ ಜೊತೆಗೆ ಈ ವಾರ್ಷಿಕೋತ್ಸವ ಸಾಕ್ಷಿಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ತಿಮ್ಮೇಗೌಡ ಸರ್ಕಾರಿ ಶಾಲೆಗಳೆಂದರೆ ಪೋಷಕರಿಗೆ ಕೀಳುರಿಮೆ . ಪೋಷಕರು ಮೊದಲು ಅಂತಹ ಮನಸ್ಥಿತಿಯಿಂದ ಹೊರ ಬರಬೇಕು ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವಿದೆ .ಕಲಿಕಾ ಸಾಮರ್ಥ್ಯವೆನ್ನುವುದು ಪ್ರತಿ ಮಗುವಿಗೂ ಬೇರೆ ಬೇರೆ ಇರುತ್ತದೆ ಅದು ಬದಲಾಗುತ್ತಾ ಹೋಗುತ್ತದೆ. ಕೆಲವು ಮಕ್ಕಳು ಎರಡು ವರ್ಷದಲ್ಲೇ ಮಾತನಾಡಿದರೆ ಇನ್ನು ಕೆಲವು ಮೂರಾದರೂ ತೊದಲುತ್ತಿರುತ್ತವೆ. ಮೂರು ವರ್ಷದಲ್ಲಿ ಅಕ್ಷರಗಳನ್ನು ಗುರುತಿಸಲು ಕಷ್ಟಪಡುವ ಮಗು ಆರನೇ ವರ್ಷದಲ್ಲಿ ಬಹಳಷ್ಟು ಪುಸ್ತಕಗಳನ್ನು ಓದಿರಬಹುದು. ಈ ಸಮಯದಲ್ಲಿ ಪೋಷಕರು ಮಾಡುವ ಬಹುದೊಡ್ಡ ತಪ್ಪೆಂದರೆ ಮಗು ಕೇವಲ ಶೈಕ್ಷಣಿಕವಾದದ್ದನ್ನು ಮಾತ್ರ ಕಲಿಯಲಿ ಎಂದು ಬಯಸುವುದು. ಹಲವಾರು ಮಕ್ಕಳ ಬಾಲ್ಯ ಕೇವಲ ಖಾಸಗಿ ಶಾಲೆಗಳಲ್ಲಿ ಶಿಶುಗೀತೆಗಳನ್ನು ಕಂಠಪಾಠ ಮಾಡುವುದರಲ್ಲಿ, ಪೆನ್ಸಿಲ್ ಹಿಡಿಯಲು ಬರದ ಕೈಗಳಲ್ಲಿ ಉದ್ದ-ಅಡ್ಡ ಗೆರೆಗಳನ್ನು, ವೃತ್ತಗಳನ್ನು ಅಭ್ಯಾಸ ಮಾಡುವುದರಲ್ಲಿ ಮುಳುಗಿಹೋಗುತ್ತದೆ. ತುಂಟ ಮಗುವನ್ನು ಮನೆಯಲ್ಲಿರಿಸಿಕೊಳ್ಳುವುದು ಕಷ್ಟ ಎಂಬ ಒಂದೇ ಕಾರಣಕ್ಕೆ ಶಾಲೆಗೆ ಸೇರಿಸುವ ಪೋಷಕರಿದ್ದಾರೆ ಎಂದರು.
ಬಳಿಕ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ದೂರಿಯಾಗಿ ಜರುಗಿದವು.

ಈ ಸಂದರ್ಭದಲ್ಲಿ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ರಾಜೇಶ್, ಮಾಜಿ ಜಿಲ್ಲಾ ಬಿ.ಟಿ.ವೆಂಕಟೇಶ್, ತಾ. ಪಂ ಮಾಜಿ ಸದಸ್ಯ ಜವರಾಯಿಗೌಡ , ಗ್ರಾ.ಪಂ ಶಾಮ್ ಪ್ರಸಾದ್ ,ತಾ.ಪಂ ಮಾಜಿ ಸದಸ್ಯೆ ಮೀನಾಕ್ಷಿ ಪುಟ್ಟರಾಜು,ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಆನಂದ್, ಕಸಾಪ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, ರೈತರ ಮುಖಂಡ ನಾಗಣ್ಣ,ಕಾಂಗ್ರೆಸ್ ರವಿ ರಾಮೇಗೌಡ,ಅಡಿಕೆ ಮಹೇಶ್,ಬೂಕನಕೆರೆ ಶಿಕ್ಷಣ ಸಂಯೋಜಕ ಮೋಹನ್,ಸರ್ಕಾರಿ ನೌಕರರ ಸಂಘದ ಗೌರವ ಅಧ್ಯಕ್ಷ ಪದ್ಮೇಶ್, ಎಸ್.ಸಿ -ಎಸ್. ಟಿ ಅಧ್ಯಕ್ಷ ಯೋಗೇಶ್, ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಮೇಶ್, ಶಿಕ್ಷಕರ ಮಂಜು, ಡೈರಿ ಅಧ್ಯಕ್ಷ ನಾಗೇಶ್, ಶಾಲಾ ಎಸ್.ಡಿ.ಎಂ.ಸಿ ಸದ್ಯಸರಾದ ಕುಮಾರ್, ಸ್ಟುಡಿಯೋ ಮಂಜು, ಹರೀಶ್,ಗ್ರಾ. ಪಂ ಪಂಚಾಯತಿ ಸದಸ್ಯೆ ರಾಜೇಶ್ವರಿ,ವಿಜಿಯಮ್ಮ,ಭಾಗ್ಯಮ್ಮ, ಯೋಗೇಂದ್ರ ನಾಯಕ, ಶಿಕ್ಷಕರ ಕೃಷ್ಣಕುಮಾರ್, ಶಿವಸ್ವಾಮಿ,ಉಪಸ್ಥಿತರಿದ್ದರು.