

ಕೆ.ಆರ್.ಪೇಟೆ:ಮಡಿವಾಳ ಮಾಚಿದೇವರು ಬಸವಣ್ಣನವರ ತತ್ವ,ಸಿದ್ಧಾಂತಗಳನ್ನು ಪಾಲಿಸುವುದರ ಮೂಲಕ ಸಮಾಜಕ್ಕೆ ಶುದ್ಧ ಕಾಯಕದ ಮಹತ್ವವನ್ನು ತಿಳಿಸಿಕೊಟ್ಟ ಮಹಾನ್ ಶಿವಶರಣರ ಆದರ್ಶಗಳನ್ನ ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಪಾಂಡುಪುರ ಉಪ ವಿಭಾಗಧಿಕಾರಿಗಳಾದ ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ತಾಲ್ಲೂಕು ಆಡಳಿತ ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತ ವತಿಯಿಂದ ಆಯೋಜಿಸಿದ್ದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷೆತೆ ವಹಿಸಿ ಮಾತನಾಡಿದರು.12ನೇ ಶತಮಾನದಲ್ಲಿ ಬಡ ಹಾಗೂ ಕೆಳ ವರ್ಗದ ಜನರು ಜಾತೀಯತೆ, ಅಸ್ಪಶ್ಯತೆ, ದುರ್ಬಲರ ಶೋಷಣೆ, ಮೂಢನಂಬಿಕೆ ಹಾಗೂ ಶಿಕ್ಷಣದಲ್ಲಿ ಅವಕಾಶ ಸಿಗದೆ ಅಸಮಾನತೆಯಿಂದ ತುಳಿತಕ್ಕೆ ಒಳಗಾಗಿದ್ದರು. ಈ ದಿಸೆಯಲ್ಲಿ ಸಮುದಾಯದ ಜನರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವುದರ ಜತೆಗೆ ಸಂಘಟಿತರಾಗಬೇಕಿದೆ. ಆಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.

ಕಾರ್ಯಕ್ರಮ ನೇತೃತ್ವ ವಹಿಸಿ ಮಾತನಾಡಿದ ತಾಲ್ಲೂಕು ಮಡಿವಾಳ ಮಾಚಿದೇವರ ಸಂಘದ ಅಧ್ಯಕ್ಷ ಹಾಗೂ ಶೀಳನೆರೆ ಗ್ರಾ. ಪಂ ಅಧ್ಯಕ್ಷ ಶೀಳನೆರೆ ಸಿದ್ದೇಶ್,ಮಡಿವಾಳ ಮಾಚಿದೇವರು ಕಾಯಕದಲ್ಲಿ ನಿಷ್ಕಲ್ಮಶ ಹಾಗೂ ಪರಿಶುದ್ಧತೆ ಇರಬೇಕು ಎಂದು ಸಮಾಜಕ್ಕೆ ತೋರಿಸಿಕೊಟ್ಟರು. ಪ್ರತಿಯೊಬ್ಬರೂ ಇವರ ವಚಗಳನ್ನು ಓದುವುದರ ಮೂಲಕ ಆದರ್ಶಗಳನ್ನು ಪಾಲಿಸಿದಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಹಾಗೂ ತಾಲೂಕಿನಲ್ಲಿ ಮಡಿವಾಳ ಸಮುದಾಯಕ್ಕೆ ಸೇರಿದ ಸುಮಾರು 4 ಸಾವಿರ ಜನರಿದ್ದಾರೆ. ಸಮುದಾಯ ಭವನವಿಲ್ಲದೆ ಸಭೆ, ಸಮಾರಂಭ, ಮದುವೆ ಹಾಗೂ ಇನ್ನಿತರ ಕಾರ್ಯಗಳನ್ನು ಕೈಗೊಳ್ಳಲು ತುಂಬ ತೊಂದರೆ ಅನುಭವಿಸುವಂತಾಗಿದೆ ಎಂದು ಅಭಿಪ್ರಾಯಪಟ್ಟರು.
ಬಳಿಕ ತಹಸೀಲ್ದಾರ್ ಎಸ್.ಯು.ಡಾ: ಅಶೋಕ್ ಮಾತನಾಡಿ ಸರಕಾರ ಎಲ್ಲ ಸಮುದಾಯ ಮತ್ತು ಸಮಾಜದಲ್ಲಿ ಅನೇಕ ಬದಲಾವಣೆಗೆ ಕಾರಣವಾದ ಮಹಾನ್ ಪುರುಷರ ಜಯಂತಿ ಆಚರಿಸುತ್ತಿದೆ. ಸಮಾಜದಲ್ಲಿ ಬೇಧ-ಭಾವ ಇಲ್ಲದೆ ಒಂದೇ ರೀತಿಯಲ್ಲಿ ಬದುಕಲು ಹಕ್ಕಿದೆ ಎಂಬ ಪ್ರತಿಪಾದನೆ ಮಾಡಿದ ಶರಣರ ತತ್ವಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅವರಿಗೆ ನಿಜವಾದ ಗೌರವ ಸಲ್ಲಿಸಬೇಕು ಎಂದರು
ಈ ಸಂದರ್ಭದಲ್ಲಿ ತಹಸೀಲ್ದಾರ್ ಎಸ್.ಯು ಡಾ ಅಶೋಕ್,ಮಂಡಿವಾಳ ಸಂಘದ ಕಾರ್ಯದರ್ಶಿ ಸುಬ್ರಮಣ್ಯ, ಖಜಾಂಚಿ ಮಂಜು,ಮಹಿಳೆ ತಾ.ಅಧ್ಯಕ್ಷೆ ಮಣಿ,ಚೌಡೇನಹಳ್ಳಿ ಲತಾ ಕೇಶವ ,ಶಿಕ್ಷಕ ಪಿ.ಜೆ ವೆಂಕಟರಮ್,ಗ್ರೇಟ್ 2 ತಹಸೀಲ್ದಾರ್ ಲೋಕೇಶ್, ಕಸಬಾ ಆರ್.ಐ ಜ್ಞಾನೇಶ್,ಹೊಸಹೊಳಲು ಕೃಷಿ ಪತ್ತಿನ ಸಹಕಾರ ಸಂಫದ ಅಧ್ಯಕ್ಷ ಹೆಚ್.ಎಸ್ ನಾಗರಾಜ್, ನಯನಜ ಕ್ಷತ್ರಿಯ ತಾಲ್ಲೂಕು ಅಧ್ಯಕ್ಷ ಎಂ ಶಿವಪ್ಪ,ವೆಂಕಟೇಶ್, ಹರೀಶ್, ಸೇರಿದಂತೆ ತಾಲ್ಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.