

ರಾಯಚೂರು ಜಿಲ್ಲೆಯಲ್ಲಿ ಆಗುತ್ತಿರುವ ರೈತರಿಗೆ ಸಮಸ್ಯೆಯನ್ನು ಕುರಿತು ಇಂದು ರಾಜ್ಯ ಅಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿದರು.
ರಾಯಚೂರು ಜಿಲ್ಲೆಯಲ್ಲಿ ಒಣ ಮೆಣಸಿನಕಾಯಿ ಮಾರುಕಟ್ಟೆ ಕೂಡಲೇ ಆರಂಭವಾಗಬೇಕು ಮತ್ತು ಬೆಂಬಲ ಬೆಲೆ ಶೀಘ್ರವೇ ಘೋಷಣೆ ಮಾಡಬೇಕು ಹಾಗೂ ಜಿಲ್ಲೆಯಲ್ಲಿ ಪದೇಪದೇ ರೈತರಿಗೆ ತೊಂದರೆ ಆಗುವಂತೆ ಮಾಡುತ್ತಿರುವ ಕೆಇಬಿ ಇಲಾಖೆ ದವರು ಸರಿಪಡಿಸಿಕೊಂಡು ರೈತರಿಗೆ ಅನುಕೂಲವಾಗುವಂತೆ ವಿದ್ಯುತ್ ಒದಗಿಸಬೇಕು ಎಂದರು.
KBJNL ವಿಭಾಗ 6 ಇಲಾಖೆಯನ್ನು ಸ್ಥಳಾಂತರಿಸುವುದು ಕೂಡಲೇ ಕೈಬಿಡಬೇಕು, ಮುಖ್ಯವಾಗಿ ಸರ್ವೆ ಇಲಾಖೆ ದವರು ರೈತರಿಗೆ ಅಲೆದಾಡಿಸುವುದಲ್ಲದೆ ದಿಕ್ಕು ತಪ್ಪಿಸುವುದನ್ನು ಕೂಡಲೇ ನಿಲ್ಲಿಸಿ, ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕೆಂದು ಎಂದರು.