

ರಾಯಚೂರು ೪-೨೦೨೩, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ಯುನಿಸೆಫ್ ಸಹಭಾಗಿತ್ವದಲ್ಲಿ ರಾಯಚೂರು ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಸುಸ್ಥಿರ ಮುಟ್ಟಿನ ನಿರ್ವಹಣೆ‘ ( Sustainable Menstrual Hygiene Management) ಕುರಿತು ಜಿಲ್ಲೆಯ ವಿವಿಧ ಇಲಾಖೆಗಳ ಮಹಿಳಾ ಅಧಿಕಾರಿಗಳು, ಸಿಬ್ಬಂದಿಗಳಿಗೆ ತರಬೇತಿದಾರರ ತರಬೇತಿ(Master trainer) ಕಾರ್ಯಕ್ರಮಕ್ಕೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪಾಂಡ್ವೆ ರಾಹುಲ್ ತುಕಾರಾಮ್ ರವರು ಚಾಲನೆ ನೀಡಿದರು.

ಗ್ರಾಮೀಣ ಭಾಗದ ಮಹಿಳೆಯರಲ್ಲಿ ಪರಿಸರ ಸ್ನೇಹಿ, ಆರ್ಥಿಕ ಮತ್ತು ಗೌರವಯುತ ಮುಟ್ಟಿನ ನಿರ್ವಹಣೆ ಅಭ್ಯಾಸಗಳನ್ನು ಉತ್ತೇಜಿಸುವುದು ಹಾಗೂ ಋತುಸ್ರಾವದ ಅವಧಿಗಳಲ್ಲಿ ಏಕ ಬಳಕೆಯ ಬಿಸಾಡಬಹುದಾದ ಉತ್ಪನ್ನಗಳ ಬದಲಿಗೆ ಮರುಬಳಕೆಯ ಉತ್ಪನ್ನಗಳನ್ನು ಬಳಸುವ ಕುರಿತು ಪ್ರಾತ್ಯಕ್ಷಿಕೆ ಮೂಲಕ ತರಬೇತಿ ಕಾರ್ಯಕ್ರಮದಲ್ಲಿ ಅರಿವು ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಯೋಜನಾ ನಿರ್ದೇಶಕರಾದ ಪ್ರಕಾಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ಸುರೇಂದ್ರ ಬಾಬು, ಆರ್.ಸಿ.ಹೆಚ್ ಅಧಿಕಾರಿಗಳಾದ ಡಾ. ನಂದಿತಾ, ವಿಷಯ ತಜ್ಞರಾದ ಡಾ.ಮೀನಾಕ್ಷಿ ಭರತ್, ಡಾ. ಶಾಂತಿ ತುಮ್ಮಲ, ಡಾ.ಶೋಭಾರಾಣಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿ, ನಾಗವಾಲ ಗ್ರಾಮ ಪಂಚಾಯತಿ, ಮೈಸೂರು ಹಾಗೂ ಯುನಿಸೆಫ್ ಸಮಾಲೋಚಕರಾದ ದಿಲೀಪ್ ಹಾಗೂ ಜಿಲ್ಲೆಯ ವೈದ್ಯಾಧಿಕಾರಿಗಳು, ಸಮುದಾಯ ಆರೋಗ್ಯ ಅಧಿಕಾರಿಗಳು, ಮಹಿಳಾ ವೈದ್ಯರು, ಮಹಿಳಾ ಪಿಡಿಓಗಳು, ಮಹಿಳಾ ಶಿಕ್ಷಕರು, ಆಯ್ದ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಅಂಗನವಾಡಿ ಮೇಲ್ವಿಚಾರಕರು ಹಾಗೂ ಮುಖ್ಯ ಪುಸ್ತಕ ಬರಹಗಾರರು ಮೊದಲಾದವರು ಉಪಸ್ಥಿತರಿದ್ದರು.
