
ಸಿಂಧನೂರು ತಾಲೂಕಿನ ಮಾಡಶಿರವಾರ ಗ್ರಾಮದ ರೈತರಾದ ಶಿವರಾಜ ಯಾದವ, ಸಣ್ಣ ಹನುಮಂತಪ್ಪ ಕನ್ನಾರಿ, ಕರಿಯಪ್ಪ ಜವಳಗೇರಾ, ಹರೇಟನೂರು ಗ್ರಾಮದ ರಾಮಣ್ಣ ನಲಗಮದಿನ್ನಿ ಇವರು ಸಿಂಧನೂರು ನಗರದ ಒಳಬಳ್ಳಾರಿ ರಸ್ತೆ ಯಲ್ಲಿ ಬರುವ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಶ್ರೀಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮಕ್ಕೆ ತಾವು ಬೆಳೆದಿರುವ ಜೋಳವನ್ನು ಆಶ್ರಮದಲ್ಲಿನ ಎಲ್ಲಾ ಹಿರಿಯ ವೃದ್ಧರ ಹಾಗೂ ವಯಸ್ಕರ ಬುದ್ಧಿಮಾಂದ್ಯರ ಸಹಾಯ ಮಾಡಿ ಭಾರತೀಯ ಕರುಣಾಮಯಿ ಸಂಸ್ಕೃತಿಗೆ ಮೆರುಗು ತಂದುಕೊಟ್ಟಿದ್ದಾರೆ.

ಈ ಸಮಯದಲ್ಲಿ ಸಹಾಯ ಮಾಡಿರುವ ಎಲ್ಲಾ ದಾನಿಗಳಿಗೂ ಮುಂದಿನ ದಿನಗಳಲ್ಲಿ ಸಹಾಯ ಮಾಡುವಂತಹ ದಾನಿಗಳಿಗೂ ಸಹ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸಯ್ಯಸ್ವಾಮಿ ಹಿರೇಮಠ ಅವರು ಹೃದಯಪೂರ್ವಕ ಹೃತ್ಪೂರ್ವಕ ಅಭಿನಂದನೆಗಳನ್ನು ಅರ್ಪಿಸಿದರು.

ಈ ಸಮಯದಲ್ಲಿ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ.ಚನ್ನಬಸಯ್ಯಸ್ವಾಮಿ ಹಿರೇಮಠ ಮಾತನಾಡಿ ರೈತರು ಕಷ್ಟದ ಮಧ್ಯೆಯೂ ಸಹ ದಾನ ಧರ್ಮಗಳನ್ನು ನಿಲ್ಲಿಸಿಲ್ಲ ತಾವುಗಳು ಬೆಳೆದ ಬೆಳೆಗೆ ಸರಿಯಾದ ದರ ಸಿಗದಿದ್ದರೂ ಸಹ ಕರುಣಾಮಯಿ ಸಂಸ್ಕೃತಿಯನ್ನು ನಿರಂತರವಾಗಿ ಸಮಾಜಕ್ಕೆ ಅರ್ಪಿಸುತ್ತಿರುವುದು ರೈತಾಪಿ ವರ್ಗ ಬರೀ ನಮಗಲ್ಲದೆ ಮನೆ ಹತ್ತಿರ ಕಷ್ಟ ಎಂದು ಬಂದವರನ್ನು ಕೈ ಹಿಡಿದು ಕಷ್ಟ ನಿವಾರಣೆ ಮಾಡುವಂತಹ ವರ್ಗವೆಂದರೆ ಅದು ರೈತಾಪಿ ವರ್ಗ. ಕಾರುಣ್ಯ ಆಶ್ರಮವನ್ನು ರೈತರುಗಳು ತಮ್ಮ ಹೃದಯ ಮಂದಿರದಲ್ಲಿ ದಿನಾಲು ಪ್ರೀತಿಸಿ ಪೂಜಿಸುತ್ತಾ ಹಾರೈಸುತ್ತಿರುವ ಶಕ್ತಿಯೇ ಕಾರುಣ್ಯ ಕುಟುಂಬದ ಸೇವೆ. ರೈತರ ಕಷ್ಟಗಳು ನಿವಾರಣೆಯಾಗಿ ನಮ್ಮ ದೇಶ ಅಭಿವೃದ್ಧಿಯತ್ತ ಸಾಗುವಂತಹ ದಿನಗಳು ಬರಲಿ ಎಂದು ಕಾರುಣ್ಯ ಆಶ್ರಮದ ವತಿಯಿಂದ ನಿರಂತರ ಪ್ರಾರ್ಥನೆ ನಡೆಯುತ್ತದೆ ಎಂದು ಮಾತನಾಡಿ ಎಲ್ಲರಿಗೂ ಅಭಿನಂದನೆಗಳನ್ನು ಅರ್ಪಿಸಿದರು.


ಹಾಗೂ ಆಶ್ರಮದ ಸದಸ್ಯರಾದ ವೀರಭದ್ರಗೌಡ ಗಿಣಿವಾರ. ಮತ್ತು ಮಾಡಶಿರವಾರ ಗ್ರಾಮದ ರೈತರುಗಳಾದ ಶಿವರಾಜ ಯಾದವ. ಸಿದ್ದು ಕನ್ನಾರಿ. ಕರಿಯಪ್ಪ ಜವಳಗೇರಾ. ಮತ್ತು ಅನೇಕ ರೈತರುಗಳು ಭಾಗವಹಿಸಿದ್ದರು…









