

ಕೆ ಆರ್ ಪೇಟೆ: ಫೆಬ್ರವರಿ 8 ರಂದು ಪಿ ಎಲ್ ಡಿ ಬ್ಯಾಂಕ್ ನೂತನ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ 11ನೇ ವೃತ್ತ (ವಿಠಲಾಪುರ ಮಡವಿನಕೋಡಿ) ದಿಂದ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸಂದೇಶ್ ಅವರು ಇಂದು ಚುನಾವಣಾ ಅಧಿಕಾರಿ ತಾ.ಪಂ ಇ ಒ ಸುಷ್ಮಾ ಅವರಿಗೆ ಪಿ ಎಲ್ ಡಿ ಬ್ಯಾಂಕ್ ಕಚೇರಿಯಲ್ಲಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯ ನಾರಾಯಣ್,ಪ್ರಜ್ವಲ್,ಪುನೀತ್,ಪ್ರವೀಣ್ ರಾಮಚಂದ್ರು,ಸೊಸೈಟಿ ಹಾಲಿ ಅಧ್ಯಕ್ಷ ವಿಜಯ್ ಕುಮಾರ್ ಸೇರಿದಂತೆ ಇತರರು ಇದ್ದರು.